ಕರಾಟೆಯಲ್ಲಿ ಐದು ಪದಕ

ಇಳಕಲ್ಲ: ಮೈಸೂರಿನ ಪೊಲೀಸ್ ಸಮುದಾಯ ಭವನದಲ್ಲಿ ಮಹುಲೇ ಶೂಟೊನ್ ಕರಾಟೆ ಡೋ ಅಸೋಸಿಯೇಷನ್ ಇಂಡಿಯಾ, ರಾಯ್ಸ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಕರಾಟೆ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ 13ನೇ ರಾಷ್ಟ್ರದ ಓಪನ್ ಕರಾಟೆ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಳಕಲ್ಲಿನ 5 ಜನ ಚಿಣ್ಣರು 5 ಪದಕಗಳನ್ನು ಜಯಿಸಿದ್ದಾರೆ.

ಮೇ 19ರಂದು ಜರುಗಿದ ಸ್ಪರ್ಧೆಯಲ್ಲಿ ತರಬೇತುದಾರ ನಾಗೇಶ ತಳವಾರ ಅವರ ಜತೆ ತೆರಳಿದ್ದ ಚಿಣ್ಣರು ಎರಡು ಸ್ವರ್ಣ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದಿದ್ದಾರೆ.

ಲಿಖಿತ ಹುನಗುಂದ, ಭೂಮಿಕಾ ಗುಡಗುಂಟಿ ಸ್ವರ್ಣ, ಗಣೇಶ ಪಟ್ಟಣಶೆಟ್ಟಿ ಬೆಳ್ಳಿ, ಜುನೈದ ತಾಳಿಕೋಟಿ, ಬಸವರಾಜ ಕುನಗಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಕ್ಕಳ ಸಾಧನೆಗೆ ಗುರು ಮಹಾಂತ ಶ್ರೀಗಳು, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹರ್ಷ ವ್ಯಕ್ತಪಡಿಸಿದ್ದಾರೆ. ಮಂಗಳವಾರ ನಗರಕ್ಕೆ ಆಗಮಿಸಿದ ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಅಭಿಮಾನಿಗಳು ಹಾರ ಹಾಕಿ ಸ್ವಾಗತಿಸಿದರು.