ಕಾನೂನು ಮೀರಿದರೆ ಕ್ರಮ

ಇಳಕಲ್ಲ: ನಗರದ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸಿಬ್ಬಂದಿ ಬುಧವಾರ ಅಂದಾಜು 50 ಕೆ.ಜಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿರಿಯ ಆರೋಗ್ಯ ಸಹಾಯಕ ಎಂ.ಆರ್. ದಾನಿ ಮಾತನಾಡಿ, ದಾಳಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ವ್ಯಾಪಾಸ್ಥರು ಪ್ಲಾಸ್ಟಿಕ್ ಬಳಕೆ ಕೈ ಬಿಡಬೇಕು ಎಂಬ ಸೂಚನೆ ನೀಡಲಾಗುತ್ತಿದೆ. ಸೂಚನೆ ಮೀರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರ ನಿರ್ದೇಶನದ ಮೇರೆಗೆ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಆರ್. ದಾನಿ, ದ್ವಿತೀಯ ದರ್ಜೆ ಸಹಾಯಕ ಎಸ್.ಎಚ್. ಜಮ್ಮನಕಟ್ಟಿ, ಶ್ರೀರಾಮ ಬೆಳೆಕೊಪ್ಪ, ಸೈಯ್ಯದ ಬಾವೂರ, ಸುರೇಶ ಸರೋಧೆ ದಾಳಿಯಲ್ಲಿ ಪಾಲ್ಗೊಂಡಿದ್ದರು.

ನಗರಸಭೆ ಅಧಿಕಾರಿಗಳು ಆಗಾಗ ದಾಳಿ ನಡೆಸಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡರೂ ಪ್ಲಾಸ್ಟಿಕ್ ಬಳಕೆ ಮಾತ್ರ ಯಥಾಸ್ಥಿತಿಯಲ್ಲಿತ್ತು. ಇದೀಗ ಸರ್ಕಾರದ ಕಾನೂನು ಜಾರಿ ಕಡ್ಡಾಯವಾಗಿರುವುದರಿಂದ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಲಾಗುವುದು.
ಜಗದೀಶ ಹುಲಗೆಜ್ಜಿ, ಪೌರಾಯುಕ್ತ ನಗರಸಭೆ

Leave a Reply

Your email address will not be published. Required fields are marked *