ಇಕೆಯ-ಸೆಕಿ ಧೂಮಕೇತು Ikeya-Seki Comet

1965ರ ಸೆಪ್ಟೆಂಬರ್ ತಿಂಗಳ ಕೊನೆಗೆ ಒಮ್ಮೆಲೆ ಪೂರ್ವಾಕಾಶದಲ್ಲಿ ಮೆರೆದ ಧೂಮಕೇತು ಇಕೆಯ-ಸೆಕಿ. ಇದಕ್ಕೆ ಗ್ರೇಟ್ ಕಾಮೆಟ್ ಆಫ್ 1965 ಎಂದೂ ಕರೆಯುತ್ತಾರೆ. ಅಲ್ಲದೆ, ಇದನ್ನು ಇ/1965 ಖ1 ಎಂದೂ ಕರೆಯುತ್ತಿದ್ದರು. ಇಕೆಯ ಕೌರು (Ikeya Kaoru 1943) ಮತ್ತು ಸೆಕಿ ಸುಟೊಮು (Seki Tsutomu 930) ಎಂಬ ಜಪಾನಿನ ಖಗೋಲತಜ್ಞರು ಮೊದಲಿಗೆ ಕಂಡುಕೊಂಡ ಧೂಮಕೇತು ಅದು. ಅನಂತರ ಬಂದ ಅನೇಕ ಧೂಮಕೇತುಗಳು ಹ್ಯಾಲಿ ಧೂಮಕೇತೂ ಸೇರಿದಂತೆ-ಬಹಳಷ್ಟು ಹೆಸರು ಮಾಡಿದರೂ ಇಕೆಯ-ಸೆಕಿ ಧೂಮಕೇತುವಿನ ನೋಟಕ್ಕೆ ಸಮನಾಗಿರಲಿಲ್ಲ ಎಂಬುದು ಅದನ್ನು ಅಂದು ನೋಡಿದವರ ಅಭಿಪ್ರಾಯ. ಅಗಲ, ಕಿರಿದಾದ ಶಿರಭಾಗದಿಂದ ಗೊಂಡೆಯಂತೆ ಹೇಗೆ ಬಾಲ ಚಾಚಿದೆ ಎಂಬುದನ್ನು ಗಮನಿಸಿ ಹಾಗೆಯೇ ಬಾಲವೂ ಪರಿಪೂರ್ಣ ಸರಳ ರೇಖೆಯಲ್ಲಿ ಚಾಚಿದೆ. 1965ರ ಅಕ್ಟೋಬರ್ 21ರಂದು ಇದು ಸೂರ್ಯನ ಅತಿ ಸಮೀಪ ಬಂದಿತ್ತು. 880 ವರ್ಷಗಳಿಗೊಮ್ಮೆ ಗೋಚರಿಸುತ್ತದೆ ಎನ್ನುವುದು ವಿಶೇಷ. ಸೆಕಿ ಅವರು ಗೇಸಿ ವೇದಶಾಲೆಯ ನಿರ್ದೇಶಕರಾಗಿದ್ದಾರೆ.