ಶತ್ರು ರಾಡಾರ್​ಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ವಿಶೇಷ ವಸ್ತು ಅಭಿವೃದ್ಧಿ ಪಡಿಸಿದ ಐಐಟಿ-ಕೆ

ಕಾನ್ಪುರ: ಶತ್ರುಗಳ ರಡಾರ್​ ಕಣ್ಣಿಗೆ ಕಾಣದಂತೆ ನಮ್ಮ ಸೈನಿಕರು ಮತ್ತು ಸೇನೆಯ ವಾಹನಗಳನ್ನು ರಕ್ಷಿಸುವ ವಿಶೇಷ ವಸ್ತುವೊಂದನ್ನು ಐಐಟಿ ಕಾನ್ಪುರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಡಿಆರ್​ಡಿಒದ ನೆರವಿನೊಂದಿಗೆ ಐಐಟಿ ಕಾನ್ಪುರದ ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ವಿಭಾಗದ ಕುಮಾರ್​ ವೈಭವ್​ ಶ್ರಿವಾಸ್ತವ ಮತ್ತು ಮೆಕಾನಿಕಲ್​ ಇಂಜಿನಿಯರಿಂಗ್​ ವಿಭಾಗದ ಜೆ. ರಾಮ್​ಕುಮಾರ್​ ಅವರು ಈ ವಿಶೇಷ ವಸ್ತುವನ್ನು ಅಭಿವೃದ್ಧಿಪಡಿಸಿದ್ದಾರೆ.

ಇನ್ಫ್ರಾರೆಡ್​ ಮೆಟಾ ಮೆಟೀರಿಯಲ್​ ಎಂಬ ವಸ್ತು ಬಟ್ಟೆಯಂತಿದ್ದು ಅದರಿಂದ ನಮ್ಮ ಸೈನಿಕರಿಗೆ ಯೂನಿಫಾರ್ಮ್​ ಸಿದ್ಧಪಡಿಸಬಹುದು ಮತ್ತು ಸೇನೆ ಬಳಸುವ ವಾಹನಗಳ ಮೇಲೆ ಅಂಟಿಸಬಹುದು. ಈ ಮೂಲಕ ನಮ್ಮ ಸೈನಿಕರು ಮತ್ತು ವಾಹನಗಳನ್ನು ಮೂಲಕ ಶತ್ರುರಾಷ್ಟ್ರಗಳ ಅತ್ಯಾಧುನಿಕ ರಡಾರ್​ಗಳು, ಮೋಷನ್​ ಡಿಟೆಕ್ಟಿಂಗ್​ ಗ್ರೌಂಡ್​ ಸೆನ್ಸಾರ್ಡ್​ ಮತ್ತು ಥರ್ಮಲ್​ ಇಮೇಜಿಂಗ್​ ಸ್ಟಿಸ್ಟಮ್​ಗಳ ಕಣ್ಣಿಗೆ ಕಾಣದಂತೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಪಾರದರ್ಶಕ ಮೆಟಾ ಮೆಟೀರಿಯಲ್​ ಅಬ್ಸಾರ್ಬರ್​ಗಳನ್ನು ವಾಹನಗಳ ಕಿಟಕಿ ಗಾಜುಗಳಿಗೆ ಅಂಟಿಸಬಹುದು ಮತ್ತು ಹೆಲಿಕಾಪ್ಟರ್​ಗಳ ಮೇಲ್ಭಾಗದಲ್ಲಿ ಅಂಟಿಸಬಹುದು. ವಿಮಾನಗಳಲ್ಲಿ ಬಳಕೆ ಮಾಡಲು ಮೆಟಾ ಮೆಟೀರಿಯಲ್​ ಅಬ್ಸಾರ್ಬರ್​ಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ವಸ್ತುವನ್ನು ಎಲ್ಲ ವಾತಾವರಣದಲ್ಲಿ ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಈಗಾಗಲೇ ಶತ್ರು ರಾಷ್ಟ್ರಗಳ ರಡಾರ್​ಗಳು ಪತ್ತೆ ಹಚ್ಚಲು ಸಾಧ್ಯವಾಗದಂತಹ ವಿಮಾನಗಳನ್ನು ಬಳಸಾಗುತ್ತಿದೆ. ಆದರೆ ಅದರಲ್ಲಿ ವಿಮಾನ ಮೇಲ್ಭಾಗದಲ್ಲಿ ಬಳಕೆ ಮಾಡುವ ಸೆರಾಮಿಕ್​ ಟೈಲ್ಸ್​ಗಳು ಹೆಚ್ಚು ಭಾರ ಹೊಂದಿರುತ್ತವೆ. ಆದರೆ ಈಗ ಅಭಿವೃದ್ಧಿ ಪಡಿಸಿರುವ ಮೆಟಾ ಮೆಟೀರಿಯಲ್​ ಆಧಾರಿತ ಅಬ್ಸಾರ್ಬರ್​ಗಳು ಹಗುರವಾಗಿದ್ದು, ತೆಳುವಾಗಿದ್ದು ಸುಲಭವಾಗಿ ಬಳಸಬಹುದಾಗಿದೆ. ಪ್ರಯೋಗಾಲಯದಲ್ಲಿ ಈ ವಸ್ತುವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಫೀಲ್ಡ್​ ಟೆಸ್ಟ್​ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)