ಐಜಿಸಿಎಸ್​ಇ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ವಿದೇಶದಲ್ಲಿರುವ ಕಾಲೇಜುಗಳಲ್ಲಿ ಪಿಯು ಪ್ರವೇಶ ಪಡೆಯಲು ಕ್ರೇಂಬಿಡ್ಜ್ ಇಂಟರ್​ನ್ಯಾಷನಲ್ ನಡೆಸುವ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಜಿಸಿಎಸ್​ಇ) ಪ್ರವೇಶ ಪರೀಕ್ಷೆ ಫಲಿತಾಂಶ ಮಂಗಳವಾರ ಬಿಡುಗಡೆಯಾಗಿದೆ.

ಬಹುತೇಕ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚಿನ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ, 9 ವರ್ಷದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಆರವ್ ನಲ್ಲೂರು (9) ಟ್ರಯೋ ವರ್ಲ್ಡ್ ಅಕಾಡೆಮಿಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಗಣಿತದಲ್ಲಿ ಎ ಶ್ರೇಣಿ ಫಲಿತಾಂಶ ಪಡೆದಿದ್ದಾನೆ. 10ನೇ ತರಗತಿಯ ಪಠ್ಯಪುಸ್ತಕ ಆಧಾರದ ಮೇಲಿರುವ ಪರೀಕ್ಷೆಯನ್ನು 4ನೇ ತರಗತಿಯ ವಿದ್ಯಾರ್ಥಿ ಬರೆದು ಉತ್ತೀರ್ಣನಾಗಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಮಗನ ಸಾಧನೆ ಕುರಿತು ಮಾತನಾಡಿದ ದಿವ್ಯ ನಲ್ಲೂರು, ನನ್ನ ಮಗ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಎಲ್ಲ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಬಿಡಿಸುತ್ತಾನೆ. ಅವನು ಐಜಿಸಿಎಸ್​ಇ ಪರೀಕ್ಷೆ ಬರೆದು ಉತ್ತೀರ್ಣನಾಗಿರುವುದು ಖುಷಿ ನೀಡಿದೆ. ಈ ಹಿಂದೆ ಮೆನ್​ಸ್ಸಾ ಐಕ್ಯೂ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಗ್ರೀನ್​ವುಡ್ ಹೈ ಇಂಟರ್​ನ್ಯಾಷನಲ್ ಶಾಲೆಯ ಮೃಗಾಂಕ್ ಶೇಖರ್ ಮತ್ತು ಪಲ್ಕಿ ಗುಪ್ತಾ ಶೇ.93.1 ಅಂಕ ಗಳಿಸಿದ್ದಾರೆ. ಈ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ವಯೋಮಿತಿ ಇಲ್ಲದಿರುವುದರಿಂದ ಯಾವುದೇ ವಯಸ್ಸಿನ ಮಕ್ಕಳು ಹಾಜರಾಗಬಹುದಾಗಿದೆ.

Leave a Reply

Your email address will not be published. Required fields are marked *