More

    VIDEO| ಇದು ಕಥೆಯಲ್ಲ ಜೀವನ; ಹುಲಿಯ ಬಾಯಿಂದ ತಪ್ಪಿಸಿಕೊಂಡ ಈ ಮನುಷ್ಯನಿಗೆ ಸ್ಫೂರ್ತಿ ಕರಡಿಯ ಕಥೆ!

    ನವದೆಹಲಿ: ಕಥೆಗಳಿಂದ ಮನುಷ್ಯ ಪಾಠ ಕಲಿಯುತ್ತಾನೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.

    ಕಾಡಿನಲ್ಲಿ ಕರಡಿಯೊಂದಿಗೆ ಮುಖಾಮುಖಿಯಾದ ಇಬ್ಬರು ಸ್ನೇಹಿತರ ಕಥೆ ಕೇಳೇ ಇರುತ್ತೀರಾ. ಕರಡಿ ಬೆನ್ನಟ್ಟಿದಾಗ ಒಬ್ಬನು ತನ್ನ ಜೀವ ಉಳಿಸಲು ಮರ ಹತ್ತುತ್ತಾನೆ. ಇನ್ನೊಬ್ಬ ಮರ ಹತ್ತಲು ಬಾರದೆ ನೆಲದ ಮೇಲೆ ಮಲಗಿ, ಸತ್ತಂತೆ ನಟಿಸುತ್ತಾನೆ.

    ಇಂತಹದೇ ಘಟನೆ ನಡೆದಿದ್ದು, ಹುಲಿಯು ತನ್ನ ಎರಡೂ ಕಾಲುಗಳನ್ನು ಮನುಷ್ಯನ ಎದೆಯ ಮೇಲೆ ಇಟ್ಟಾಗ ಸತ್ತಂತೆ ನಟಿಸಿ, ತನ್ನ ಜೀವ ಉಳಿಸಿಕೊಂಡಿದ್ದಾನೆ. ಈ ಮನುಷ್ಯನಿಗೆ ಕಥೆಯ ಪಾಠ ಉಪಯುಕ್ತವಾಗಿದೆ.

    ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​​ ಇಂತಹ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮನುಷ್ಯ ಮತ್ತು ಹುಲಿ ಮುಖಾಮುಖಿಯಾಗಿದ್ದಾರೆ.

    ಹೀಗೆ ಹುಲಿಯೊಂದಿಗೆ ಮುಖಾಮುಖಿಯಾದ ವಿಡಿಯೋದ ಕೆಳಗೆ ಅಧಿಕಾರಿ ಪರ್ವೀನ್​ ಕಸ್ವಾನ್​​, ಈ ಸಂದರ್ಭದಲ್ಲಿ ಮನುಷ್ಯ ಪಾರಾದ ರೀತಿಯನ್ನು ನೀವೇ ನೋಡಿ. ಜನ ಸಮೂಹದಿಂದ ಕೆರಳಿದ ವ್ಯಾಘ್ರನ ಆರ್ಭಟ ಮನುಷ್ಯನ ಕಡೆಗೆ ತಿರುಗಿದೆ. ಆದರೆ ಅದೃಷ್ಟವಶಾತ್, ಈ ಕಥೆಯ ಕೊನೆ ಮನುಷ್ಯ ಮತ್ತು ಹುಲಿ ಇಬ್ಬರಿಗೂ ಉತ್ತಮವಾಗಿದೆ ಎಂದು ಬರೆದಿದ್ದಾರೆ.

    ಇದಕ್ಕೆ ಇನ್ನೊಬ್ಬರು ಕಮೆಂಟ್​ ಮಾಡಿ, 30 ಸೆಕೆಂಡುಗಳ ವಿಡಿಯೋ ಹಂಚಿಕೊಂಡಿದ್ದಾರೆ. ಇದು ನಡೆದದ್ದು, ಮಹಾರಾಷ್ಟ್ರದ ಭಾಂದ್ರಾ ಜಿಲ್ಲೆಯ ತುಮ್ಸಾರ್​ ಅರಣ್ಯ ಪ್ರದೇಶದಲ್ಲಿ.

    ವಿಡಿಯೋದಲ್ಲಿ ಹುಲಿಯನ್ನ ಜನ ಬೆನ್ನಟ್ಟಿದ್ದಾರೆ. ಸಾರ್ವಜನಿಕರ ಗಲಾಟೆಯಿಂದ ಹುಲಿ ಕೆರಳಿದೆ. ಜಾಗ ದಿಕ್ಕಲ್ಲಿ ಓಡಿ ಹೋಗುವ ಹುಲಿ, ಮರಳಿ ಬಂದು ಮನುಷ್ಯನೊಬ್ಬನ ಮೇಲೆ ಎರಗುತ್ತದೆ. ಆತ ಸತ್ತಂತೆ ನಟಿಸಿ ಹುಲಿಯಿಂದ ಪಾರಾಗುತ್ತಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts