ಬೆಂಗಳೂರು: ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ನಡೆಯಲಿ ಬಾಳೆ ಎಲೆಗಳು ಇರಲೇಬೇಕು. ಆದರೆ ಬಾಳೆ ಎಲೆಯಲ್ಲಿ ತಿಂದರೆ ಸಿಗುವ ಸಂತೃಪ್ತಿಯೇ ಬೇರೆ. ಬಾಳೆ ಎಲೆಯಲ್ಲಿ ತಿಂದರೆ ಅಲ್ಲ.. ಬಾಳೆ ಎಲೆ ತಿಂದರೆ ಕೂಡಾ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಇತ್ತೀಚಿನ ಹಲವು ಸಂಶೋಧನೆಗಳು ಹೇಳಿವೆ.
ಬಾಳೆ ಎಲೆಯಲ್ಲಿ ದೇಹಕ್ಕೆ ಉಪಯುಕ್ತವಾದ ಹಲವು ಔಷಧೀಯ ಗುಣಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬಾಳೆ ಎಲೆಯಲ್ಲಿ ಅಗತ್ಯವಾದ ಫೈಟೊನ್ಯೂಟ್ರಿಯೆಂಟ್‌ಗಳು, ಸೆಲೆನಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಡಯೆಟರಿ ಫೈಬರ್ ಮುಂತಾದ ಪೋಷಕಾಂಶಗಳಿವೆ. ಬಾಳೆ ಎಲೆ ತಿನ್ನುವುದರಿಂದ ಆಗುವ ಲಾಭಗಳೇನು ಎಂದು ಈಗ ತಿಳಿಯೋಣ.
ಬಾಳೆ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಔಷಧೀಯ ಗುಣಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಬಾಳೆಲೆಯನ್ನು ತಿಂದು ಎಸೆದರೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ. ಎಸೆದ ಕೆಲವೇ ದಿನಗಳಲ್ಲಿ ಕೊಳೆತು ಮಣ್ಣಿನೊಂದಿಗೆ ಬೆರೆಯುತ್ತವೆ. ಆದರೆ ಪ್ಲಾಸ್ಟಿಕ್ ಪ್ಲೇಟ್‌ಗಳು ಹಾಗಲ್ಲ. ಅವುಗಳು ವರ್ಷಗಳಾದರೂ ಕೊಳೆಯುವುದಿಲ್ಲ.
ಬಾಳೆ ಎಲೆಯ ಮೇಲೆ ಮೇಣದಂತಹ ತೆಳುವಾದ ನೈಸರ್ಗಿಕ ಪದರವಿದೆ. ಇದರ ಮೇಲೆ ಬಿಸಿಯಾದ ಆಹಾರ ಬಡಿಸಿದಾಗ ಅದು ಕರಗುತ್ತದೆ. ಅದು ಕರಗಿದಾಗ, ಒಂದು ರೀತಿಯ ಸಿಹಿ ಘಮವನ್ನು ನೀಡುತ್ತದೆ. ಪ್ಲಾಸ್ಟಿಕ್ ಪ್ಲೇಟ್ನಲ್ಲಿ ಊಟ ಮಾಡುವ ಬದಲು ಈ ಎಲೆಯಲ್ಲು ಊಟ ಮಾಡಿದ್ರೆ ಆರೋಗ್ಯಕ್ಕೆ ಕೂಡಾ ಒಳ್ಳೆಯದಾಗಿದೆ.
ಬಾಳೆ ಎಲೆ ತಿಂದರೆ ಚರ್ಮಕ್ಕೆ ತುಂಬಾ ಒಳ್ಳೆಯದು. ಚರ್ಮವನ್ನು ಹೈಡ್ರೀಕರಿಸಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅದೂ ಅಲ್ಲದೆ, ಇದು ಚರ್ಮದ ಮೇಲಿನ ಅಲರ್ಜಿ, ದದ್ದು ಇತ್ಯಾದಿಗಳನ್ನು ತಡೆಯಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ತಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಬಾಳೆ ಎಲೆಯನ್ನು ಸೇರಿಸಿಕೊಳ್ಳಬೇಕು. ಈ ಎಲೆಯಲ್ಲಿ ನಾರಿನಂಶ ತುಂಬಾ ಚೆನ್ನಾಗಿದೆ. ಇದರಿಂದ ಹೊಟ್ಟೆ ಬೇಗ ತುಂಬುತ್ತದೆ. ಇದಲ್ಲದೆ, ಇದು ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಉತ್ತಮ ಕೊಬ್ಬಿನ ನಿಕ್ಷೇಪಗಳನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.
ಬಾಳೆ ಎಲೆಯಲ್ಲಿ ತಿನ್ನುವುದು ಹೇಗೆ:
ಬಾಳೆ ಎಲೆಯನ್ನು ಸ್ವಚ್ಛವಾಗಿ ತೊಳೆದು ಈ ಎಲೆ ಮೇಲೆ ಊಟ, ತಿಂಡಿ ಬಡಿಸಿಕೊಂಡು ತಿನ್ನಬಹುದು.
ಬಾಳೆ ಎಲೆಯನ್ನು ಒಳ್ಳೆಯ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಬೇಕು. ಈ ನೀರಿನಿಂದ ಹರ್ಬಲ್ ಟೀ ಮಾಡಿ ಬೆಚ್ಚಗೆ ಕುಡಿದರೂ ಪರವಾಗಿಲ್ಲ.
ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ.