Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ, ಆರೋಗ್ಯ ಹೀಗೆ ಯಾದುದು ನಾವು ಅಂದುಕೊಂಡಂತೆ ನಡೆಯಲಿಲ್ಲವೆಂದರೆ ದೃಷ್ಟಿ ದೋಷವಾಗಿದೆ ಎಂದು ಹೇಳುತ್ತೇವೆ. ನಿಂಬೆಹಣ್ಣು, ಕರಿಮೆಣಸು, ಹಸಿರು ಮೆಣಸು, ಪೊರಕೆಯನ್ನು ಬಹಳಷ್ಟು ಬಳಸಿ ಕೆಟ್ಟ ದೃಷ್ಟಿ ತೆಗೆಯಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೆಟ್ಟ ದೃಷ್ಟಿಯನ್ನು ನಿವಾರಿಸಲು ಹೀಗೆ ಮಾಡಿಮನೆಯ ಸದಸ್ಯರಿಗೆ ಕೆಟ್ಟ ದೃಷ್ಟಿ ಆಗಿದ್ದರೆ, ಈ ಟ್ರಿಕ್ ತುಂಬಾ ಪ್ರಯೋಜನಕಾರಿ. ಒಂದು ನಿಂಬೆ ಹಣ್ಣು ತೆಗೆದುಕೊಂಡು, ಅದನ್ನು ಕೆಟ್ಟ ದೃಷ್ಟಿ ಬಿದ್ದವರ ಮೇಲೆ ತಲೆಯಿಂದ ಕಾಲ್ಬೆರಳಿನವರೆಗೆ ಏಳು ಬಾರಿ ನಿವಾಳಿಸಿ, ನಂತರ ನಿಂಬೆಯನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ನಿರ್ಜನ ಸ್ಥಳದಲ್ಲಿ ಬಿಸಾಡಬೇಕು ಎಂದು ಹಿರಿಯರು ಹೇಳುತ್ತಾರೆ.
ಮೊದಲು ನಿಂಬೆಹಣ್ಣುಗಳನ್ನು ತೆಗೆದುಕೊಂಡು ಅರ್ಧದಷ್ಟು ಕತ್ತರಿಸಿ ನಂತರ ಆ ತುಂಡುಗಳನ್ನು ಮನೆಯ ಮುಖ್ಯ ದ್ವಾರದ ಕಿಟಕಿಗಳು ಮತ್ತು ಮನೆಯ ಬಾಗಿಲುಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಮನೆಗೆ ನುಗ್ಗುವುದಿಲ್ಲ. ಮನೆಯ ಜನರ ಮೇಲಿರುವ ದೃಷ್ಟಿ ದೂರವಾಗುತ್ತದೆ.
ಯಾರಾದರೂ ನಿಮಗೆ ತೊಂದರೆ ನೀಡುತ್ತಿದ್ದರೆ, ಕಪ್ಪು ಶಾಯಿಯಿಂದ ಪೆನ್ನಿನಿಂದ ಬಿಳಿ ಕಾಗದದ ಮೇಲೆ ಅವರ ಹೆಸರನ್ನು ಬರೆಯಿರಿ. ಅದರ ನಂತರ, ಕಾಗದವನ್ನು ಪದರ ಮಾಡಿ ಮತ್ತು ಅರ್ಧ ನಿಂಬೆ ಕೋಲಿನ ಮೇಲೆ ಅದನ್ನು ಚುಚ್ಚಿ. ಕಸದ ಬುಟ್ಟಿಗೆ ಎಸೆಯಬಾರದು. ಹೀಗೆ ಮಾಡುವುದರಿಂದ ಈ ವ್ಯಕ್ತಿಯಿಂದ ನಿಮಗೆ ಕಷ್ಟಗಳು ಎದುರಾದರೆ ಆ ವ್ಯಕ್ತಿಯಿಂದ ನಿಮಗೆ ಪರಿಹಾರ ಸಿಗುತ್ತದೆ.
ನಕಾರಾತ್ಮಕತೆಯನ್ನು ತೊಡೆದುಹಾಕಲು ಹಾಗೂ ದುಷ್ಟಶಕ್ತಿಗಳು ಮನೆಗೆ ಬರದಂತೆ ತಡೆಯಲು ಮನೆಯ ಹೊರಗೆ ನಿಂಬೆ ಗಿಡವನ್ನು ನೆಡಿ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಇದರೊಂದಿಗೆ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ.
ಯಾವುದಾದರೂ ಪ್ರಮುಖ ಕೆಲಸದ ಮೇಲೆ ಹೊರಗೆ ಹೋಗುವಾಗ ಮನೆಯ ಮುಖ್ಯ ದ್ವಾರದಲ್ಲಿ ನಿಂಬೆ ಸುಳಿದು ಎದೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಧೈರ್ಯ ಬರುತ್ತದೆ.
ನಿಮ್ಮ ಮನಸ್ಸು ಕೆಲಸದಲ್ಲಿ ತೊಡಗದಿದ್ದರೆ, ಕಚೇರಿಯಲ್ಲಿ ಕೆಲಸಕ್ಕಾಗಿ ಆಗಾಗ ಬೈಗುಳಗಳನ್ನು ಕೇಳಬೇಕಾಗುತ್ತದೆ. ಇದನ್ನು ತಪ್ಪಿಸಲು ನಿಂಬೆಹಣ್ಣು ತೆಗೆದುಕೊಂಡು ಹಗಲಿನಲ್ಲಿ ಅಡ್ಡರಸ್ತೆಗೆ ಹೋಗಿ ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಿಕ್ಕಿಗೆ ಎಸೆಯಿರಿ.
ನಿಮ್ಮ ಮೇಲಿರುವ ಕೆಡುಕು ತೊಲಗಬೇಕೆಂದರೆ ದೇಹದ ಯಾವುದೇ ಭಾಗಕ್ಕೆ ಕಾಫಿಪುಡಿ ಹಚ್ಚಿ ಅಲ್ಲಿ ನಿಂಬೆಹಣ್ಣನ್ನು ಹಚ್ಚಿ. ಹೀಗೆ ಮಾಡಿದರೆ ನಿಮ್ಮ ಮೇಲಿರುವ ದೃಷ್ಟಿಯನ್ನೆಲ್ಲ ಕಳೆದುಕೊಳ್ಳುತ್ತೀರಿ.
ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕಲೆ ಹಾಕಿ ನೀಡಲಾಗಿದೆ. ಯಾವುದೇ ಅನುಮಾನಗಳಿದ್ದರೆ ತಜ್ಞರ ಸಲಹೆ ಪಡೆದುಕೊಳ್ಳಿ…