ಶಿವಮೊಗ್ಗ: ಸನಾತನ ಹಿಂದು ಧರ್ಮ ಜಗತ್ತಿನ ಧರ್ಮಗಳಲ್ಲಿಯೇ ಪುರಾತನವಾದುದು. ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಯಹೂದಿ, ಜೈನ, ಬೌದ್ಧ , ಕ್ರೈಸ್ತ, ಇಸ್ಲಾಂ ಮುಂತಾದ ಧರ್ಮಗಳಿಗೆ ಇಷ್ಟೊಂದು ದೀರ್ಘವಾದ ಇತಿಹಾಸವಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಕುರಿತು ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮಗಳ ನಡುವೆ ಸಾಮರಸ್ಯವಿದ್ದಾಗ ಶಾಂತಿ ನೆಲೆಸಲು ಸಾಧ್ಯ. ಧರ್ಮ ನಮ್ಮ ಭೌತಿಕ ಬದುಕನ್ನು ಸಮೃದ್ಧಗೊಳಿಸುತ್ತದೆ. ಆನಂದದಿಂದ ಬದುಕುವುದನ್ನು ತಿಳಿಸುತ್ತದೆ ಎಂದರು.
ವಿಶ್ವ ಅಸ್ತಿತ್ವಕ್ಕೆ ಬಂದು 1,382 ಕೋಟಿ ವರ್ಷಗಳಾಗಿವೆ. ಸೂರ್ಯ ಅಸ್ತಿತ್ವಕ್ಕೆ ಬಂದು 500 ಕೋಟಿ, ಭೂಮಿ ಅಸ್ತಿತ್ವಕ್ಕೆ ಬಂದು 450 ಕೋಟಿ ವರ್ಷಗಳಾಗಿವೆ. ಆದರೆ ಮಾನವನ ವಿಕಾಸವಾಗಿ ಎರಡು ಲಕ್ಷ ವರ್ಷಗಳಾಗಿವೆ. 2,500 ವರ್ಷಗಳ ಹಿಂದೆ ಬುದ್ಧ ಬೋಧಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜತೆ ಉತ್ತಮ ಒಡನಾಟ ಇರಿಸಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆ ಮಾಡಲು ಸಾಧ್ಯ. ಒಂದು ಶಾಲೆಯ ಮಕ್ಕಳಲ್ಲಿ ಶಿಸ್ತು, ಸಂಯಮ ಇದೆ ಎಂದರೆ ಅದರಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿರುತ್ತದೆ ಎಂದರು.
ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ ರಾವ್, ವಕೀಲ ಸುಧೀರ್‌ಕುಮಾರ್ ಮುರೊಳ್ಳಿ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ ಭಾಗವಹಿಸಿದ್ದರು.
ಧರ್ಮಗಳ ಮಧ್ಯೆ ಸಾಮರಸ್ಯವಿದ್ದರೆ ಶಾಂತಿ
You Might Also Like
ಊಟ ಮಾಡುವಾಗ ಅಪ್ಪಿತಪ್ಪಿಯು ಈ 12 ತಪ್ಪುಗಳನ್ನು ಮಾಡಲೇಬೇಡಿ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ! Eating Mistakes
Eating Mistakes : ಅನೇಕ ಜನರು ಆಹಾರವನ್ನು ತಿನ್ನುವಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅಂತಹ…
ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone
ನವದೆಹಲಿ: ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…
ಮೊಬೈಲ್ ಹಿಡಿದುಕೊಳ್ಳುವ ಸ್ಟೈಲ್ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts
Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…