More

  ಯುವಕರು ಒಗ್ಗೂಡಿದರೆ ಭಾರತ ವಿಶ್ವಗುರು

  ಶಿವಮೊಗ್ಗ: ಆಧ್ಯಾತ್ಮದ ಮೂಲಕ ಯುವಕರು ಸಕಾರಾತ್ಮಕ ಆಲೋಚನೆ ಮೈಗೂಡಿಸಿಕೊಳ್ಳಬೇಕು. ಯುವಶಕ್ತಿ ಒಗ್ಗೂಡಿದರೆ ಭಾರತ ವಿಶ್ವ ಗುರುವಾಗುವುದು ನಿಶ್ಚಿತ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ನಿರ್ಭಯಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

  ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ 19ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮ ಪೈಕಿ ಗುರುವಾರ ಯುವ ಸಮ್ಮೇಳನ ಉದ್ಘಾಟಿಸಿ, ಉಪನ್ಯಾಸ ನೀಡಿದ ಅವರು, ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಯುವಜನರು ಸಂಕಲ್ಪ ತೊಡಬೇಕಿದೆ ಎಂದರು.
  ಭವ್ಯ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ಯುವಶಕ್ತಿಯ ಸದ್ಭಳಕೆಯಿಂದ ಬಲಿಷ್ಠ, ಸದೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರು ಮುಂತಾದ ದಾರ್ಶನಿಕರು, ತತ್ವಜ್ಞಾನಿಗಳ ಮಾತುಗಳನ್ನು ಯುವಕರು ಪರಿಪಾಲಿಸಬೇಕೆಂದರು.
  ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತಿರುವ ಆಶ್ರಮವು ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
  ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ, ಕ್ಯಾಪ್ಟನ್ ನವೀನ್ ನಾಗಪ್ಪ, ಪ್ರೇರಣಾದಾಯಕ ಮಾತುಗಳನ್ನಾಡಿದರು. ಯುದ್ಧ ಭೂಮಿಯಲ್ಲಿ ರೋಚಕ ಸನ್ನಿವೇಶಗಳನ್ನು ವಿವರಿಸಿದರು. ದೇಶಪ್ರೇಮ, ರಾಷ್ಟ್ರ ರಕ್ಷಣೆಗೆ ಯುವಕರು ಮುಂದಾಗಬೇಕೆಂದರು.
  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಹದಿಹರೆಯದಲ್ಲಿ ಮನಸ್ಸು ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ತಿರಸ್ಕರಿಸಬೇಕೆಂಬ ಗೊಂದಲದಲ್ಲಿರುತ್ತದೆ. ಇದು ಸಹಜ ಕೂಡಾ. ಗುರು, ಹಿರಿಯರು ಹೇಳುವ ಹಿತೋಪದೇಶಗಳನ್ನು ಯುವಕರು ಪಾಲಿಸಿದರೆ ಬದುಕು ಹಾಗೂ ಭವಿಷ್ಯ ಉತ್ತಮವಾಗುತ್ತದೆ. ಇದರಿಂದ ಸಾಧನೆಯ ಹಾದಿಯಲ್ಲಿನ ಪ್ರಯಾಣ ನಿರಾಂಕತವಾಗಿ ಸಾಗಲಿದೆ ಎಂದರು.
  ರಾಣೇಬೆನ್ನೂರು ಆಶ್ರಮದ ಶ್ರೀ ಪ್ರಕಾಶಾನಂದಜೀ ಸ್ವಾಮೀಜಿ, ಸಾಗರದ ಶ್ರೀ ಜ್ಞಾನಾನಂದಜೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆಶ್ರಮದ ಭಕ್ತರಾದ ಡಾ.ಚಿಕ್ಕಸ್ವಾಮಿ, ಎಂ.ಎನ್.ಸುಂದರರಾಜ್, ಡಾ.ಗುರುದತ್ತ್, ಕೆ.ವಿ.ವಸಂತಕುಮಾರ್, ಆರ್.ಶ್ರೀಕಾಂತ್, ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಕಾರ್ಯದರ್ಶಿ ಪರಮೇಶ್ವರ ಭಟ್ ಉಪಸ್ಥಿತರಿದ್ದರು.

  See also  ಕ್ಷಯ ರೋಗಿಗಳ ಸಂಖ್ಯೆ ಇಳಿಮುಖ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts