ಸೊರಬ: ಸುಂದರ ಬದುಕಿಗೆ ವಾಸಿಸುವ ಸ್ಥಳ ಮತ್ತು ಸುತ್ತಲಿನ ಪರಿಸರ ಮುಖ್ಯ. ಮನೆ ಮತ್ತು ಮಠಗಳಿಗೆ ನಿಕಟ ಸಂಪರ್ಕವಿದೆ. ಮಠಗಳು ಉತ್ತಮ ಬದುಕಿಗೆ ಮಾರ್ಗದರ್ಶನ ನೀಡಬಲ್ಲ ಕೇಂದ್ರಗಳು ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಜೀವನಗರ ಬಡಾವಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವಾದಿ ಶರಣರು ಕಾಯಕಕ್ಕೆ ಮಹತ್ವ ನೀಡಿದ್ದಾರೆ. ಅಂತೆಯೇ ನಾವುಗಳು ಮಾಡುವ ಕೆಲಸ ಮನಃಸಾಕ್ಷಿ ಮೆಚ್ಚುವಂತಿರಬೇಕು. ಭಕ್ತಿಯಿಂದ ಕೈಗೊಂಡ ಕಾರ್ಯಗಳು ಭಗವಂತ ಮೆಚ್ಚುವಂತಿರಬೇಕು ಎಂದರು.
ಉತ್ತಮ ಬದುಕಿಗೆ ಸುಂದರ ಪ್ರಪಂಚವೂ ಕಾರಣವಾಗುತ್ತದೆ. ವಾಸ ಮಾಡುವ ಸ್ಥಳವು ಉತ್ತಮವಾಗಿದ್ದಾಗ ಮನೆಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಪ್ರಸ್ತುತ ವಾಸ್ತು ಶಾಸಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತಿದೆ. ಭಗವಂತನ ಮುಂದೆ ಮತ್ಯಾವುದೇ ವಾಸ್ತು ಇರಲಾರದು. ಉದಾಹರಣೆಗೆ ಶರೀರದಲ್ಲಿನ ಅಂಗಾಂಗಗಳ ರಚನೆಯಲ್ಲಿಯೇ ಭಗವಂತನ ಚಮತ್ಕಾರ ಕಾಣಬಹುದು ಎಂದು ತಿಳಿಸಿದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಾಧು-ಸಂತರ ಆಗಮನ ಭಕ್ತರ ಮನೆಯಲ್ಲಿ ದೀಪಾವಳಿಯ ಸಂಭ್ರಮ ಎನ್ನುವಂತೆ ವೀರಶೈವ ಲಿಂಗಾಯಿತ ಪರಂಪರೆಯಲ್ಲಿ ಗುರುಭಕ್ತಿ ಮತ್ತು ಗುರು-ಜಂಗಮರಿಗೆ ಮಹತ್ವ ನೀಡಲಾಗಿದೆ. ಬದುಕಿನಲ್ಲಿ ಕೈಗೊಂಡ ಸತ್ಕಾರ್ಯಗಳಿಂದ ಗುರುವಿನ ಅನುಗ್ರಹ ದೊರೆಯಲು ಸಾಧ್ಯ. ಸದ್ವಿಚಾರ, ಸತ್ಕಾರ್ಯ, ಸತ್ಕರ್ಮಗಳಲ್ಲಿ ವ್ಯಕ್ತಿಯು ತನ್ನನ್ನು ತಾನು ತೊಡಗಿಸಿಕೊಂಡು, ಬಸವಾದಿ ಶರಣರು ತೋರಿದ ಕಾಯಕದ ಹಾದಿಯಲ್ಲಿ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಗುಡ್ಡದ ಮಲ್ಲಾಪುರದ ಶ್ರೀ ಮೂಕಪ್ಪ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಬಂಗಾರಪ್ಪ ಗೌಡ, ಪಾಲಾಕ್ಷಮ್ಮ, ಚಿಕ್ಕಾವಲಿ ನಾಗರಾಜ ಗೌಡ, ರೂಪಾ ನಾಗರಾಜ ಗೌಡ, ಹರ್ಷಾ ಗೌಡ, ಹವನಾ ಗೌಡ, ಇಂದೂಧರ ಗೌಡ, ವೀಣಾ ಗೌಡ, ಹಂಸಾ, ಗೌರೀಶ್, ಪಾಣಿ ರಾಜಪ್ಪ, ಶಿವಕುಮಾರ ಸ್ವಾಮಿ, ಕೀರ್ತಿಗೌಡ, ಕೃಷ್ಣಮೂರ್ತಿ, ಯೋಗೇಶ್ ಗೌಡ, ಅಜಿತ್, ಶಿವಲಿಂಗೇಗೌಡ ಇತರರಿದ್ದರು.
ಪರಿಸರ ಉತ್ತಮವಾಗಿದ್ದರೆ ನೆಮ್ಮದಿಯ ಬದುಕು

You Might Also Like
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳು..eating
eating: ನೆಲದ ಮೇಲೆ ಕುಳಿತು ಊಟ ಮಾಡುವುದು ಭಾರತೀಯ ಸಂಸ್ಕೃತಿಯ ಸಂಪ್ರದಾಯವಾಗಿದೆ. ಆಧುನಿಕ ಕಾಲದಲ್ಲಿ ಊಟದ…
ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…
ಊಟ & ನಿದ್ರೆಯ ನಡುವಿನ ಅಂತರ ಎಷ್ಟಿರಬೇಕು?; ಇಲ್ಲಿದೆ ICMR ನೀಡಿರುವ ಸೂಚನೆ | Health Tips
ನಮ್ಮ ದಿನಚರಿಯ ಪ್ರಮುಖ ಭಾಗವೆಂದರೆ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು. ಆದರೆ ಜನರು…