ಸಂವಿಧಾನ ಮುಟ್ಟಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಎಚ್ಚರಿಕೆ

ಬಳ್ಳಾರಿ: ಅಂಬೇಡ್ಕರ್ ತಂದ ಸಂವಿಧಾನವನ್ನು ಮುಟ್ಟಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಸಿದ್ದಾರೆ.

ಕೊಪ್ಪಳ ಲೋಕಸಭಾ ವ್ಯಾಪ್ತಿಯ ಸಿರುಗುಪ್ಪದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿ, ಮಾತು ಕೊಟ್ಟಂತೆ ಹೈ-ಕ ಭಾಗಕ್ಕೆ 371Jಗೆ ತಿದ್ದುಪಡಿ ಮಾಡಿದ್ದೇವೆ. 371J ಜಾರಿಯಾದ್ಮೇಲೆ 4,000 ಕೋಟಿ ಅನುದಾನ ಬಂತು. 371J ಜಾರಿಯಾದ ಮೇಲೆ 3,000 ಇಂಜಿನಿಯರಿಂಗ್ ಸೀಟುಗಳು, 900 ಮೆಡಿಕಲ್ ಸೀಟು ದೊರಕಿವೆ. 30 ಸಾವಿರ ಉದ್ಯೋಗ ಬಂತು. ಇದನ್ನೆಲ್ಲ ನಾನು ಮಾಡಿದ್ದು. ಆ ದುರಾತ್ಮ ಮೋದಿ ಏನು ಕೊಟ್ಟಿಲ್ಲ. ಆದರೂ ಪಾಪ ಆರ್‌ಎಸ್‌ಎಸ್‌ ಹಾಗೂ ಎಬಿವಿಪಿ ಹುಡುಗರು ಮೋದಿ ಮೋದಿ ಅಂತಾರೆ ಎಂದು ವ್ಯಂಗ್ಯವಾಡಿದರು.

ನಿಮಗೆ ವರ್ಷಕ್ಕೆ 72 ಸಾವಿರ ಬೇಕಾದರೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ನಾನು‌ ಮತ್ತೆ ಬಂದರೆ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುತ್ತೇನೆ. ಯಾರೂ ಕೂಡ ಹಸಿವಿನಿಂದ ಬಳಲಬಾರದು. ನರೇಂದ್ರ ಮೋದಿ ಪುಣ್ಯಾತ್ಮ ಅಲ್ಲ ದುರಾತ್ಮ. ಬಿಎಸ್​ವೈ ಸಿಎಂ ಆಗಿದ್ದಾಗ ಸಾಲಮನ್ನಾ ಬಗ್ಗೆ ನೋಟ್​ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದಿದ್ದರು. ನಾನು ಸಿಎಂ ಆಗಿ 8,000 ಕೋಟಿ ಸಾಲಮನ್ನಾ ಮಾಡಿದೆ. ಮನಮೋಹನ್ ಸಿಂಗ್ 75 ಸಾವಿರ ಕೋಟಿ ಮನ್ನಾ ಮಾಡಿದರು. ಈಗ ಕುಮಾರಸ್ವಾಮಿ ಸಿಎಂ ಆಗಿ ಸಾಲಮನ್ನಾ ಮಾಡಿದ್ದಾರೆ. ಜಾತಿ ನೋಡಬೇಡಿ, ಜಾತಿಯಿಂದ ಹೊಟ್ಟೆ ತುಂಬಲ್ಲ ಎಂದು ಹೇಳಿದರು.

ನಾನು ಸಿಎಂ ಆದಾಗ ಯಾರು ಹಸಿವಿನಿಂದ ಬಳಲಬಾರದು ಎಂದು ಉಚಿತವಾಗಿ 7 ಕೆಜಿ ಅಕ್ಕಿ ಕೊಟ್ಟೆ. ಇವನು ಮೋದಿ ಎಲ್ಲಾದ್ರು ಒಂದು ಕೆಜಿ ಅಕ್ಕಿ ಕೊಟ್ಟಿದ್ದಾನಾ? ಮಿಸ್ಟರ್ ಮೋದಿ ಮನ್ ಕಿ ಬಾತ್ ನಿಂದ ಹೊಟ್ಟೆ ತುಂಬುವುದಿಲ್ಲ. ವಾಂಗಿಬಾತ್ ಬಗ್ಗೆ ಮಾತಾಡು, ಕಾಂ ಕಿ ಬಾತ್ ಬಗ್ಗೆ ಮಾತಾಡಪ್ಪ. 15 ಲಕ್ಷ ಕೊಡ್ತಿನಿ ಅಂದೆ, 15 ಪೈಸೆಯಾದ್ರು ಕೊಟ್ಯಾ? ರೈತರ ಸಾಲಮನ್ನಾ ಮಾಡಿ ಎಂದು ಎಷ್ಟು ಗೋಗರೆದರೂ ಮಾಡ್ಲಿಲ್ಲ ಪುಣ್ಯಾತ್ಮ ಎಂದು ಟೀಕಿಸಿದರು.

‘ನೀನೇನು ಗನ್ ತಗೊಂಡು ಪಾಕಿಸ್ತಾನಕ್ಕೆ ಹೋಗಿದ್ಯಾ? 1 ಸರ್ಜಿಕಲ್ ಸ್ಟ್ರೈಕ್ ಮಾಡಿ ನಾನು ದೇಶಭಕ್ತ ಎನ್ನುತ್ತೀಯಾ? ಕಾಂಗ್ರೆಸ್ ಅವಧಿಯಲ್ಲಿ 12 ಸರ್ಜಿಕಲ್ ಸ್ಟ್ರೈಕ್ ಆಗಿವೆ. ವಾಜಪೇಯಿ ಇಂದಿರಾ ಗಾಂಧಿಗೆ ಅಮ್ಮಾ ತಾಯಿ ನೀನು ದುರ್ಗೆ ಅಂದಿದ್ದರು. ಏನಪ್ಪಾ ನರೇಂದ್ರಾ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿ ನಾನು ದೇಶ ಭಕ್ತಾ ಅಂತೀಯಾ? ಹಾಗಾದರೆ ನಾವೆಲ್ಲ ಯಾರಪ್ಪಾ? ಮೋದಿ ನೀನು ಸ್ವಾತಂತ್ರ್ಯ ಹೋರಾಟದಲ್ಲಿ ಹುಟ್ಟೇ ಇರಲಿಲ್ಲ. ನೀನೇನಾದ್ರು ಪ್ರಧಾನಿಯಾಗಿದ್ರೆ ಅದು ಕಾಂಗ್ರೆಸ್ ಕೊಟ್ಟ ಸ್ವಾತಂತ್ರ್ಯದಿಂದ. ಇವನೇನು ಸ್ವಾತಂತ್ರ್ಯ ತಂದು ಕೊಟ್ಟಿದ್ನಾ? ಕಾಂಗ್ರೆಸ್ ನವರು ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತಿರುವಷ್ಟು ಬಿಜೆಪಿ ಅವರು ಒಬ್ಬರಾದರೂ ಸತ್ತಿದ್ದಾರಾ? ಮೋದಿ ನೀನು ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ತಬ್ಕೊಂಡಲ್ಲಯ್ಯಾ? ಅವರು ಕರೆದೇ ಇರಲಿಲ್ಲ, ಇವನೇ ಓಡಿ ಹೋದ ಎಂದು ಏಕವಚನದಲ್ಲಿಯೇ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್)

2 Replies to “ಸಂವಿಧಾನ ಮುಟ್ಟಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಎಚ್ಚರಿಕೆ”

  1. You don’t have right to talk about MrModi.
    You are hindu opposite person.
    Third class politician.Firest you standard , then talk .World wide Mr Modi getting respect. But our badluck you & your third class mates not know value of the great person.really poor karnataka.

  2. ನಮ್ಮ ದೇಶದ ಸಂವಿಧಾನ flexible samvudhana ಜಾರಿಗೆ ಬಂದ dinadimda muraru ಬಾರಿ ಕಾಲಕ್ಕೆ ಅಗತ್ಯ ಕ್ಕೆ ತಕ್ಕಂತೆ ಹಿಂದಿನ ಎಲ್ಲಾ ಸರಕಾರ ಗಳು ತಿದ್ದುಪಡಿ maadive, ಮಾಡಲು ಅವಕಾಶ ಇದೆ, ಶ್ರೀಮತಿ ಇಂದಿರಾ ಗಾಂಧಿ ಅವರು ಸಂವಿಧಾನ ವನ್ನು ಅಮಾನತ್ತು ಮಾಡಿ ತುರ್ತು ಪರಿಸ್ಥಿತಿ ಹೇರಿ ದ ವಿಷಯ ಎಲ್ಲರಿಗೂ ತಿಳಿದಿದೆ, ಸುಮ್ಮನೆ ಜನಗಳ lli ಬೆಂಕಿ ಹಚ್ಚಿ ಮೈ kaayisi ಕೊಳ್ಳುವ ಕೆಲಸ ಬೇಡ

Leave a Reply

Your email address will not be published. Required fields are marked *