ಆಂಧ್ರಪ್ರದೇಶ: ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ವಿಷಯವಾಗಿ ಡಿಸಿಎಂ ಪವನ್ ಕಲ್ಯಾಣ್(Pawan Kalyan) ತಮ್ಮದೇ ಮೈತ್ರಿಕೂಟ ಸರ್ಕಾರದ ಗೃಹಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.
ಪೀಠಾಪುರಂ ವಿಧಾನಸಭಾ ಕ್ಷೇತ್ರದ ಭೇಟಿ ವೇಳೆ ಹೋಮ್ ಮಿನಿಸ್ಟರ್ ಅನಿತಾ ವಿರುದ್ಧ ಗುಡುಗಿದ ಪವನ್ ಕಲ್ಯಾಣ್ ಅವರು, ರಾಜ್ಯದಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ, ಗೃಹ ಸಚಿವರೇ ಏನು ಮಾಡುತ್ತಿದ್ದೀರಿ?, ಪೊಲೀಸರು ಏನು ಮಾಡುತ್ತಿದ್ದಾರೆ. ಎಷ್ಟು ಸಲ ಹೇಳಿದರೂ ಅಪಾದಿತರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಇಂತಹ ಘಟನೆಗಳ ಮರುಕಳಿಸುತ್ತೇಲೆ ಇವೆ. ಇದು ಹೀಗೆ ಮುಂದುವರೆದರೆ ನಾನೇ ಸ್ವತ ಗೃಹಮಂತ್ರಿ ಅಧಿಕಾರ ವಹಿಸಿಕೊಳ್ಳಬೇಕಾಗುತ್ತದೆ. ನಾನು ಗೃಹಮಂತ್ರಿಯಾದ್ರೆ ಇಂತಹ ಘಟನೆಗಳು ಆಗಲು ಬಿಡಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ; 12 ವರ್ಷಗಳ ಕಠಿಣ ಪರಿಶ್ರಮ, ಕಮಲ್, ರಜನಿ ಕಲೆಕ್ಷನ್ ಕೂಡ ಈ ನಟನ ಆರ್ಭಟಕ್ಕೆ ಧೂಳ್!|AMARAN
ನಮ್ಮ ಬಗ್ಗೆ ಯಾರು ಏನು ಮಾತನಾಡಿದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ನಮ್ಮ ತಾಳ್ಮೆಗೂ ಮೀತಿ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಿನಲ್ಲಿ ಕೆಲವರು ತಮಗೆ ಇಷ್ಟ ಬಂದಂದತೆ ಸರ್ಕಾರದ ವಿರುದ್ಧ ಪೋಸ್ಟ್ ಮಾಡಿ ಅವಹೇಳನ ಮಾಡುತ್ತಿದ್ದಾರೆ. ನಮ್ಮದು ಸೇಡಿನ ಸರ್ಕಾರ ಅಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ವಿಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತೀವೆ ಎಂದಿದ್ದಾರೆ.
ಡಿಸಿಎಂ ಪವನ್ ಹೇಳಿಕೆ ಆಂಧ್ರಪ್ರದೇಶ ರಾಜಕೀಯದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ. ಅಲ್ಲದೇ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ತೀವ್ರ ಮುಜುಗರ ಆಗಿದೆ.
ಇನ್ನು ಈ ಹೇಳಿಕೆ ವಿಪಕ್ಷ ಸ್ಥಾನದಲ್ಲಿರುವ ವೈಸಿಪಿಗೆ ಅಸ್ತ್ರ ಸಿಕ್ಕಂತಾಗಿದೆ. ಈ ಕುರಿತು YCP ನಾಯಕರು ಮಾತನಾಡಿದ್ದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ ಅತ್ಯಾಚಾರಗಳು ಅಧಿಕವಾಗಿವೆ. ಇದನ್ನು ನಮ್ಮ ರಾಜ್ಯದ ಸಿಎಂ ಚಂದ್ರಬಾಬು ಕಡೆಗಾಣಿಸಿದ್ದಾರೆ. ಇದನ್ನು ಇವರದೇ ಸರ್ಕಾರ ಡಿಸಿಎಂ ಉಲ್ಲೇಖ ಮಾಡಿದ್ದಾರೆ. ಹೀಗಾಗಿ, ಇಂತಹ ಸರ್ಕಾರ ವಿರುದ್ಧ ನಾವು ಸದಾ ಪ್ರತಿಭಟನೆ ಮಾಡಿ ರಾಜ್ಯದ ಜನರ ಗಮನಕ್ಕೆ ತರಲು ಯತ್ನಿಸುತ್ತೇವೆ ಎಂದ್ದಿದ್ದಾರೆ.
Longevity..107 ವರ್ಷದ ಅಜ್ಜಿಯ ತಲೆಯಲ್ಲಿ 4 ಇಂಚಿನ ಕೊಂಬು! ದೀರ್ಘಾಯುಷ್ಯ ಕೊಂಬಿರುವ ವಿಡಿಯೋ ನೋಡಿ..