ಕ್ರಿಕೆಟ್​ನಲ್ಲಿ ಸಚಿನ್​ ದೇವರಾದರೆ, ಧೋನಿ ರಾಜನಿದ್ದಂತೆ!

ಬೆಂಗಳೂರು: ಭಾರತದ ತಂಡ ಮಾಜಿ ಕ್ರಿಕೆಟಿಗ ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ ಜಗತ್ತಿನ ದೇವರಾದರೆ, ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ರಾಜನಿದ್ದಂತೆ ಎಂದು ಹಾಂಗ್​ಕಾಂಗ್​ನ ಯುವ ಬೌಲರ್​ ಹೊಗಳಿದ್ದಾರೆ.

ಏಷ್ಯಾ ಕಪ್​ನಲ್ಲಿ ಧೋನಿಯನ್ನು ಡಕ್​ಔಟ್​ ಮಾಡಿದ್ದ ಹಾಂ​ಕಾಂಗ್​ನ ಯುವ ಬೌಲರ್​ ಎಹಸಾನ್​ ಖಾನ್​ ಸಚಿನ್​ ಮತ್ತು ಧೋನಿ ಇಬ್ಬರೂ ನನ್ನ ನೆಚ್ಚಿನ ಆಟಗಾರರು. ಮುಂದೊಂದು ದಿನ ನಾನು ಸಚಿನ್​ ತೆಂಡುಲ್ಕರ್​ ಅಥವಾ ಎಂ.ಎಸ್​. ಧೋನಿ ಅವರ ವಿಕೆಟ್​ ಪಡೆಯಬೇಕು ಎಂದು ಕನಸು ಕಾಣುತ್ತಿದ್ದೆ. ಸಚಿನ್​ ಅವರ ವಿಕೆಟ್​ ಅಂತೂ ಪಡೆಯಲಾಗಲಿಲ್ಲ. ಆದರೆ ಏಷ್ಯಾ ಕಪ್​ನಲ್ಲಿ ಧೋನಿ ಅವರ ವಿಕೆಟ್​ ಪಡೆದು ನನ್ನ ಕನಸನ್ನು ನನಸು ಮಾಡಿಕೊಂಡೆ. ಹಾಗಾಗಿಯೇ ನಾನು ನನ್ನ ನೆಚ್ಚಿನ ಆಟಗಾರನಿಗೆ ತಲೆಬಾಗಿ ಗೌರವ ಸಲ್ಲಿಸಿದೆ ಎಂದು ಎಹಸಾನ್​ ಖಾನ್​ ತಿಳಿಸಿದ್ದಾರೆ.

ಭವಿಷ್ಯದಲ್ಲಿ ನನ್ನ ಕ್ರಿಕೆಟ್​ ಜೀವನದ ಬಗ್ಗೆ ಪುಸ್ತಕ ಬರೆಯುವ ಯೋಜನೆ ಇದೆ. ಅದರಲ್ಲಿ ಧೋನಿ ಅವರ ಬಗ್ಗೆ ಒಂದು ಅಧ್ಯಾಯವನ್ನು ಮೀಸಲಿಡಲು ಚಿಂತಿಸುತ್ತಿದ್ದೇನೆ ಎಂದು ಎಹಸಾನ್​ ತಿಳಿಸಿದ್ದಾರೆ. ಹಾಂ​ಕಾಂಗ್​ನ ಈ ಯುವ ಬೌಲರ್​ ಇದುವರೆಗೆ 15 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 29 ವಿಕೆಟ್​ ಪಡೆದಿದ್ದಾರೆ. (ಏಜೆನ್ಸೀಸ್​)

ಸೋತರೂ ಹೃದಯ ಗೆದ್ದ ಹಾಂಕಾಂಗ್