ನನ್ನ ಕ್ಷೇತ್ರಕ್ಕೆ ಪ್ರಧಾನಿ ಬಂದು ಸ್ಪರ್ಧಿಸುವುದಾದರೆ ನಾನು ಸಿದ್ಧ: ಡಿ ಕೆ ಸುರೇಶ್‌

ಆನೇಕಲ್: ನನ್ನ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಸ್ಪರ್ಧಿಸುವುದಾದರೆ ನಾನು ಸಿದ್ಧ. ಮೋದಿಯವರಿಗೆ ಎಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಇದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಕನದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಿನ್ನೆ ನಡೆದ ಸಿಎಲ್‌ಪಿ ಸಭೆಯಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಅವರವರ ಕ್ಷೇತ್ರದ ಬಗ್ಗೆ ಚರ್ಚಿಸಿದ್ದೇವೆ. ಲೋಕಸಭಾ ಚುನಾವಣೆಯನ್ನು ಹೇಗೆ ಮಾಡಬೇಕು ಎಂನ್ನುವ ವಿಚಾರದಲ್ಲಿ ಚರ್ಚೆಯಾಗಿದೆ ಎಂದರು.

ಈಶ್ವರಪ್ಪ ಹುಚ್ಚ ಆಗಿರುವುದಕ್ಕೆ ಸಿದ್ದರಾಮಯ್ಯ ಅವರನ್ನು ಹುಚ್ಚ ಎಂದು ಮಾತನಾಡುತ್ತಿದ್ದಾರೆ. ಹಿರಿಯ ನಾಯಕರ ಬಾಯಲ್ಲಿ ಕೀಳು ಮಟ್ಟದ ಮಾತು ಬರುವುದು ಸರಿಯಲ್ಲ. ರೆಸಾರ್ಟ್‌ಗೆ ಹೋಗಿರುವುದು ಬಿಜೆಪಿಯರಿಗೆ ಭಯ ಪಟ್ಟು ಅಲ್ಲ. ಪಕ್ಷದ ವಿಚಾರವಾಗಿ ಚರ್ಚೆ ಮಾಡುವುದಕ್ಕೆ ರೆಸಾರ್ಟ್ ಸೇರಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ವಿರುದ್ಧ ಸಿದ್ದು ಸಿಡಿಮಿಡಿ

ಈಶ್ವರಪ್ಪ ಅವರಿಗೆ ಬುದ್ಧಿಭ್ರಮಣೆಯಾಗಿದೆ. ಹುಚ್ಚರಂತೆ ಮಾತನಾಡುವುದು ಅವರ ಸಂಸ್ಕೃತಿ. ಬಿಜೆಪಿಯವರ ರಾಜಕಾರಣಕ್ಕೆ ಬೇಸತ್ತು ರೆಸಾರ್ಟ್‌ಗೆ ಹೋಗಿದ್ದೇವೆ. ಈಶ್ವರಪ್ಪನಿಗೆ ಮಿದುಳು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. (ದಿಗ್ವಿಜಯ ನ್ಯೂಸ್)