ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದ ಸಚಿವ ಡಿ.ಕೆ. ಶಿವಕುಮಾರ್​

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ

ಬೆಂಗಳೂರು: ನಾನು ಕಾಂಗ್ರೆಸ್​ನ ಶಿಸ್ತಿನ ಸಿಪಾಯಿ. ಪಕ್ಷ ಏನು ಹೇಳುತ್ತದೋ ಅದನ್ನು ಕೇಳುತ್ತೇನೆ. ಅದನ್ನೇ ಮಾಡುತ್ತೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್​ನಿಂದ ಡಿ.ಕೆ. ಶಿವಕುಮಾರ್​ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಕುರಿತು ಸ್ಪಷ್ಟನೆ ನೀಡಿದರು.

ಟಿಕೆಟ್​ಗಾಗಿ ನಾನಾಗಲಿ, ನನ್ನ ತಮ್ಮ ಡಿ.ಕೆ. ಸುರೇಶ್​ ಆಗಲಿ ಎಂದೂ ಅರ್ಜಿ ಹಾಕಿಕೊಂಡು ಹೋದವರಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧ. ಪಕ್ಷ ಮನೆಯಲ್ಲಿ ಇರು ಎಂದಾಗ ಮನೆಯಲ್ಲಿದ್ದೆ. ಅಧಿಕಾರ ಮಾಡು ಎಂದಾಗ ಮಾಡಿದ್ದೇನೆ ಎಂದರು. (ದಿಗ್ವಿಜಯ ನ್ಯೂಸ್​)