More

    ಒಂದೊಮ್ಮೆ ಪಿಒಕೆ ಭಾರತದ ಭಾಗವಾಗಬೇಕು ಎಂದು ಸಂಸತ್ತು ಬಯಸಿದರೆ ಅದನ್ನು ಕಾರ್ಯಗತಗೊಳಿಸುವ ಕೆಲಸ ನಮ್ಮದು ಎಂದ ಸೇನಾ ಮುಖ್ಯಸ್ಥ ಎಂಎಂ ನರವಣೆ

    ನವದೆಹಲಿ: ಒಂದೊಮ್ಮೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಭಾಗವಾಗಬೇಕು ಎಂಬ ನಿರ್ಣಯವನ್ನು ಸಂಸತ್ತು ತೆಗೆದುಕೊಂಡರೆ ಅದನ್ನು ಕಾರ್ಯಗತಗೊಳಿಸುವ ಹೊಣೆಗಾರಿಕೆ ನಮ್ಮದು ಎಂದು ನೂತನ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಶನಿವಾರ ಹೇಳಿದರು.

    ಮಾಧ್ಯಮ ಪತ್ರಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸುರಕ್ಷೆ, ಹೊಸತಾಗಿ ರಚನೆಯಾದ ಸಿಡಿಎಸ್​, ಪಿಒಕೆ ಸೇರಿ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಜಮ್ಮು-ಕಾಶ್ಮೀರದ ಪೂರ್ಣ ಭಾಗ ಭಾರತದ್ದು ಎಂಬ ಸಂಸತ್​ ನಿರ್ಣಯವೊಂದು ಈಗಾಗಲೇ ಇದೆ. ಒಂದೊಮ್ಮೆ ಭಾರತೀಯ ಸಂಸತ್ತು ಅದನ್ನು ಬಯಸಿದರೆ, ಪಿಒಕೆ ಕೂಡ ಭಾರತದ್ದೇ ಆಗಿರುತ್ತದೆ. ನಮಗೆ ಆದೇಶ ಬಂದ ಕೂಡಲೇ ನಾವು ಅದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಗುರಿ ಸಾಧಿಸಿಕೊಡುತ್ತೇವೆ ಎಂದು ಜನರಲ್ ಎಂಎಂ ನರವಣೆ ಹೇಳಿದರು.

    ಸಿಡಿಎಸ್​ ಅಥವಾ ಚೀಫ್ ಆಫ್ ಡಿಫೆನ್ಸ್ ಎಂಬುದು ಸೇನೆಯ ಮೂರು ದಳಗಳ ಸಮನ್ವಯ ಮತ್ತು ಸೇನೆಯ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಇದರಲ್ಲಿ ಯಶಸ್ಸನ್ನು ಹೊಂದುವುದು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

    ಎಲ್ಲ ಸಮಯದಲ್ಲೂ ನಮಗೆ ಮಾರ್ಗದರ್ಶನ ನೀಡಬಲ್ಲ ಸಾಮರ್ಥ್ಯ ಇರುವುದು ಸಂವಿಧಾನಕ್ಕೆ. ಜಸ್ಟೀಸ್, ಲಿಬರ್ಟಿ, ಈಕ್ವಾಲಿಟಿ, ಫ್ರೆಟರ್ನಿಟಿ ಮುಂತಾದ ವಿಚಾರಗಳಲ್ಲೂ ಸಂವಿಧಾನ ನಮಗೆ ಮಾರ್ಗದರ್ಶನ ನೀಡುವುದು ಎಂದು ಜನರಲ್ ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts