ನೀವೇನಾದರೂ ನಿವೇಶನ ಖರೀದಿಸಿ ಅದು ಸ್ವಚ್ಛವಾಗಿರದಿದ್ದರೆ ಬೆಲೆ ತೆರಬೇಕಾದೀತು ಎಚ್ಚರ !

ಬೆಂಗಳೂರು: ಕೆಲವರು ನಿವೇಶನ​ ತೆಗೆದುಕೊಂಡು ಇಟ್ಟುಕೊಳ್ಳುತ್ತಾರೆ. ಆದರೆ, ಅದರ ಸ್ವಚ್ಛತೆ ಕಡೆಗೆ ಗಮನವನ್ನೇ ಹರಿಸುವುದಿಲ್ಲ. ಆ ಖಾಲಿ ಸೈಟ್​ ಕಸ, ತ್ಯಾಜ್ಯಗಳಿಂದ ತುಂಬಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಮುಂದೆ ಹಾಗೆ ಸುಮ್ಮನಿದ್ದರೆ ಬೆಲೆ ತೆರಬೇಕಾದೀತು ಎಚ್ಚರ !

ಈಗ ಬೆಂಗಳೂರಿನ ಖಾಲಿ ಸೈಟ್​ ಮಾಲೀಕರಿಗೆ ಬಿಬಿಎಂಪಿ ಖಡಕ್​ ಸೂಚನೆ ನೋಡಿದೆ. ಸೈಟ್​ ತೆಗೆದುಕೊಂಡು ಅದನ್ನು ಖಾಲಿ ಬಿಟ್ಟವರು ಸ್ವಚ್ಛತೆ ಕಡೆಗೆ ಗಮನ ಹರಿಸಲೇಬೇಕು. ಇಲ್ಲದಿದ್ದರೆ ಅದರ ಮಾಲೀಕರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಆದೇಶ ಹೊರಡಿಸಿದ್ದಾರೆ.

ಇನ್ನು 15 ದಿನಗಳೊಳಗೆ ಖಾಲಿ ನಿವೇಶನವನ್ನು ಸ್ವಚ್ಛ ಮಾಡಿಕೊಳ್ಳಬೇಕು. ಇಲ್ಲದಿದ್ದರೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಹಾಗೊಮ್ಮೆ ಕೊಟ್ಟ ಅವಕಾಶದಲ್ಲಿ ಸ್ವಚ್ಛ ಮಾಡಿಕೊಳ್ಳದೆ ಇದ್ದರೆ 1 ಲಕ್ಷ ರೂಪಾಯಿ ದಂಡ ವಿಧಿಸುವ ಜತೆಗೆ ಮಾಲೀಕನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಲಾಗುವುದು ಎಂದಿದ್ದಾರೆ.