ನಿಖಿಲ್​ ಗೆದ್ದರೆ ಯಶ್​-ದರ್ಶನ್​ ರಾಜ್ಯದಲ್ಲಿ ಎಲ್ಲಿಯೂ ಪ್ರಚಾರ ಮಾಡಬಾರದು: ಶಿವರಾಮೇಗೌಡ

ಶಿವಮೊಗ್ಗ: ‌ನಿಖಿಲ್ ಕುಮಾರಸ್ವಾಮಿ ಸೋತರೆ ನಾನು ಕೂಡ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ನಿಖಿಲ್ ಗೆಲ್ಲುತ್ತಾರೆ. ನಿಖಿಲ್​ ಗೆದ್ದರೆ ಯಶ್-ದರ್ಶನ್ ರಾಜ್ಯದಲ್ಲಿ‌ ಎಲ್ಲಿಯೂ ಪ್ರಚಾರ ಮಾಡಬಾರದು ಎಂದು ಸಂಸದ ಶಿವರಾಮೇಗೌಡ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬರೀಷ್ ಸಂಸದರಾಗುವುದಕ್ಕೆ ನಾನು ಕೂಡ ಕಾರಣವಾಗಿದ್ದು, ನಾನು-ಅಂಬರೀಷ್ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಮಂಡ್ಯ ಜಿಲ್ಲೆಗೆ ಅಂಬರೀಷ್, ರಮ್ಯಾ ಅವರು ಏನೂ ಮಾಡಲಿಲ್ಲ, ಇವರ ಹೆಂಡತಿ ಮಾಡುತ್ತಾರಾ ಎನ್ನುವುದು ನನ್ನ‌ ಪ್ರಶ್ನೆ ಎಂದರು.

ಯಡಿಯೂರಪ್ಪ ನಮ್ಮ ಶಿವಮೊಗ್ಗಕ್ಕೆ ಬನ್ನಿ ಅಭಿವೃದ್ಧಿ ನೋಡಿ ಅಂತ ಹೇಳಿದ್ದರು. ಶಿವಮೊಗ್ಗದಲ್ಲಿ ಬಂದು ನೋಡಿದರೆ ಅಭಿವೃದ್ಧಿ ಶೂನ್ಯವಾಗಿದೆ. ಸುಮಲತಾ ಹೇಳಿಕೆಗಳು ಉತ್ಪ್ರೇಕ್ಷೆಯ ಹೇಳಿಕೆಗಳಾಗಿವೆ. ಚುನಾವಣೆ ನಂತರ ಯಾರು ದ್ವೇಷ ಮಾಡಲ್ಲ, ಕಿರುಕುಳ ನೀಡುತ್ತಿಲ್ಲ ಎಂದರು.

ಸುಮಲತಾ ಅಂಬರೀಷ್​ ಅವರಿಗೆ ಮಾಯಾಂಗನೆ ಅನ್ನೋ ಪದವನ್ನು ಬಳಸಿದ್ದನ್ನ ಅಲ್ಲಿಗೆ ಬಿಡ್ತೀನಿ, ಅದನ್ನು ಬೆಳೆಸೋದಕ್ಕೆ ಹೋಗಲ್ಲ ಎಂದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *