ಆಹ್ವಾನಿಸಿದರೆ ಮತ್ತೆ ಟಿಟಿಡಿ ಸೇರುವೆ

ಹೈದರಾಬಾದ್: ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ‘ಹಿಂದಿನ ಸರ್ಕಾರ ನನ್ನನ್ನು ನೇಮಿಸಿತ್ತು.

ಹೊಸ ಸರ್ಕಾರದ ಆಹ್ವಾನ ಇಲ್ಲದೆ ಸದಸ್ಯತ್ವ ದಲ್ಲಿ ಮುಂದುವರಿಯುವುದು ಸೂಕ್ತವಲ್ಲವೆಂದು ರಾಜೀನಾಮೆ ನೀಡಿರುವೆ. ಜಗನ್ ಮೋಹನ್ ನೇತೃತ್ವದ ಹೊಸ ಸರ್ಕಾರ ಆಹ್ವಾನ ನೀಡಿದರೆ ಮತ್ತೆ ಟಿಟಿಡಿ ಭಾಗವಾಗುವೆ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ. 2018ರ ಏಪ್ರಿಲ್​ನಿಂದ 14 ತಿಂಗಳು ಅವರು ಟಿಟಿಡಿ ಸದಸ್ಯರಾಗಿದ್ದರು.

Leave a Reply

Your email address will not be published. Required fields are marked *