ನೀವಾಗಿಯೇ ಗೌರವಯುತವಾಗಿ ನಿವೃತ್ತಿ ಘೋಷಿಸಿ, ಇಲ್ಲವೇ ತಂಡದ ಆಯ್ಕೆಗೂ ಪರಿಗಣಿಸುವುದು ಅನುಮಾನ

ನವದೆಹಲಿ: ಭಾರತ ಕ್ರಿಕೆಟ್​ ರಂಗ ಕಂಡ ಅತ್ಯಂತ ಯಶಸ್ವಿ ನಾಯಕ, ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಎಂಬೆಲ್ಲ ಹೆಗ್ಗಳಿಕೆಯ ಮಹೇಂದ್ರ ಸಿಂಗ್​ ಧೋನಿ ಇದುವರೆಗೂ ತಮ್ಮ ನಿವೃತ್ತಿ ಕುರಿತು ಎಲ್ಲಿಯೂ ಬಾಯ್ಬಿಟ್ಟಿಲ್ಲ. ಆದರೆ, ಅವರು ತಾವಾಗಿಯೇ ಗೌರವಯುತವಾಗಿ ನಿವೃತ್ತಿ ಘೋಷಿಸದಿದ್ದರೆ, ಟೀಮ್​ ಇಂಡಿಯಾದ ಸಮವಸ್ತ್ರ ಧರಿಸಲು ಅವರಿಗೆ ಅವಕಾಶ ನೀಡದಿರಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ.

38 ವರ್ಷದ ಎಂ.ಎಸ್​. ದೋನಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಒಂದರ್ಥದಲ್ಲಿ ಮಾಡಿತೋರಲು ಅವರಿಗೆ ಯಾವುದೇ ಸಾಧನೆಗಳು ಬಾಕಿವುಳಿದಿಲ್ಲ. ಜತೆಗೆ ಇತ್ತೀಚೆಗೆ ಮುಕ್ತಾಯವಾದ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ 42 ರನ್​ ಗಳಿಸಿದರಾದರೂ, ಕೊನೆಯ ಓವರ್​ನಲ್ಲಿ ಹಿಂದಿನಂತೆ ಗಲುವಿನ ಛಲ ತೋರಲು ವಿಫಲರಾದರು. ಬೌಂಡರಿ, ಸಿಕ್ಸರ್​ಗಳು ಬೇಕಾಗಿದ್ದ ಸಂದರ್ಭದಲ್ಲಿ ಒಂಟಿ ರನ್​ ಕದಿಯಲು ಮುಂದಾಗಿದ್ದೇ ಇದಕ್ಕೆ ಸಾಕ್ಷಿ.

ಸದ್ಯದಲ್ಲೇ ಎಂ.ಎಸ್​. ಧೋನಿ ಅವರನ್ನು ಭೇಟಿಯಾಗಲಿರುವ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್​ ನಿವೃತ್ತಿ ಯೋಜನೆ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. ರಿಷಬ್​ ಪಂತ್​ ಅವರಂಥ ಯುವ ಆಟಗಾರರು ತಂಡದಲ್ಲಿ ಸ್ಥಾನಕ್ಕೆ ಬಲವಾಗಿ ಬಾಗಿಲು ಬಡಿಯುತ್ತಿದ್ದಾರೆ. ಆದರೆ, ಧೋನಿ ಇರುವುದರಿಂದ, ಅವರಿಗೆ ಸ್ಥಾನ ಸಿಗದಾಗಿದೆ.
ಮುಂಬರುವ ಟಿ20 ವಿಶ್ವಕಪ್​ ಟೂರ್ನಿಯ ಆಯ್ಕೆಗೂ ಪರಿಗಣಿಸುವುದು ಅನುಮಾನ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಗೌರವಯುತವಾಗಿ ನಿವೃತ್ತಿ ಘೋಷಿಸಬೇಕು. ಇಲ್ಲವಾದಲ್ಲಿ, ವೆಸ್ಟ್​ಇಂಡೀಸ್​ ಪ್ರವಾಸದ ತಂಡದ ಆಯ್ಕೆಗೂ ಅವರನ್ನು ಪರಿಗಣಿಸುವುದು ಅನುಮಾನ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *