ಹೊಸನಗರ: ನಮ್ಮ ನಾಡು, ದೇಶ ವೈವಿಧ್ಯತೆ ಮೂಲಕ ಗಮನ ಸೆಳೆದಿದೆ. ಆದರೆ ಅದು ವೈರುಧ್ಯಗಳಾಗಿ ಬದಲಾಗಬಾರದು ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮೂಲಗದ್ದೆ ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಸಂಕ್ರಾಂತಿ ಎಂದರೆ ಸಮ್ ಕ್ರಾಂತಿ. ಕ್ರಾಂತಿ ಎಂದರೆ ಅನಾಚಾರ ಮಾಡಿ ಸಮಾಜದ ಸ್ವಾಸ್ಥೃ ಹಾಳು ಮಾಡುವುದಲ್ಲ. ಬದಲಾಗಿ ಸಮಾಜದ ಒಳಿತಿಗಾಗಿ ಮಾಡುವ ಕೆಲಸ. ಜಾತಿ, ಮತ ಮೀರಿದ ಸಾಮ್ಯತೆ ನಮ್ಮದಾಗಬೇಕು ಎಂದರು.
ಮಠ ಮನೆಯಾಗಬಾರದು. ಮನೆಯೇ ಮಠ ಆಗಬೇಕು. ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು. ಮಕ್ಕಳಿಗೆ ಸಂಸ್ಕಾರ ನೀಡದಿದ್ದರೆ ವೃದ್ಧಾಪ್ಯದಲ್ಲಿ ಅದರ ಸಂಕಷ್ಟವನ್ನು ಅನುಭವಿಸುವ ಸ್ಥಿತಿ ಬರುತ್ತದೆ. ಮೂಲೆಗದ್ದೆ ಮಠದ ಈಗಿನ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಕ್ರಿಯಾಶೀಲರು, ಮನೆ ಮನೆಗೆ ತೆರಳಿ ಪೂಜೆ, ಅನುಷ್ಠಾನದ ಜತೆಗೆ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಶರಾವತಿ ಉಳಿಸಿ ಹೋರಾಟ, ಸಾರಾ ಸಂಸ್ಥೆ ಜತೆ ಕೆರೆಗಳ ಅಭಿವೃದ್ಧಿ, ಕೃಷಿ ಕ್ರಾಂತಿ ಮಾಡುತ್ತ ಗಮನ ಸೆಳೆದಿದ್ದಾರೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಠದ ಸಭಾಭವನಕ್ಕೆ ಅನುದಾನ ನೀಡಿದ್ದೇನೆ. ಮಠದ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನ ನೀಡುತ್ತೇನೆ. ನಾನು ಮೂಲೆಗದ್ದೆಯ ಪರಮ ಭಕ್ತ. ಭಕ್ತನಾಗಿ ಶ್ರೀ ಮಠದ ಮೇಲೆ ವಿಶೇಷವಾದ ಗೌರವವಿದೆ. ಶ್ರೀಗಳು ಎಲ್ಲ ಸಮಾಜದವರನ್ನು ಸಂಘಟಿಸಿ ಮಠವನ್ನು ಸದೃಢಗೊಳಿಸಿದ್ದಾರೆ ಎಂದು ತಿಳಿಸಿದರು.
ಉಡುಪಿಯ ಬನ್ನಂಜೆ ಸಂಧ್ಯಾ ಶೆಣೈ, ಹಾಸ್ಯ ಉಪನ್ಯಾಸದ ಮೂಲಕ ಬದುಕು, ಸಂಸ್ಕಾರ, ಯುವ ಪೀಳಿಗೆಯ ಜವಾಬ್ದಾರಿ ಬಗ್ಗೆ ತಿಳಿಸಿದರು. ಶ್ರೀ ಸಿದ್ದಲಿಂಗಯ್ಯ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಕ್ರಾಂತಿ ಅಂಗವಾಗಿ ಮಠದ ಆವರಣದಲ್ಲಿ ಅಲಂಕರಿಸಿದ್ದ ಧವಸ ಧಾನ್ಯ ರಾಶಿ ಗಮನ ಸೆಳೆಯಿತು. ಬಳಿಕ ಮುರುಘಾ ಮಠದ ಶ್ರೀಗಳ ಪಾದಪೂಜೆಯನ್ನು ಮೂಲೆಗದ್ದೆ ಶ್ರೀಗಳು ನೆರವೇರಿಸಿದರು.
ಮೈಸೂರು ಅವಧೂತ ಶ್ರೀ ಅರ್ಜುನ ಗುರೂಜಿ, ಶ್ರೀ ಪ್ರಭು ಮಹಾಸ್ವಾಮಿ ಗುತ್ತಲ, ಅಕ್ಕಿಆಲೂರು ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಹುಕ್ಕೇರಿ ವಿರಕ್ತಮಠದ ಶ್ರೀ ಬಸವ ಸ್ವಾಮೀಜಿ, ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಕೋಣಂದೂರು ಬೃಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಅರಳಿಕಟ್ಟೆ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ, ಹುಬ್ಬಳ್ಳಿ ಶ್ರೀ ಶಿವಬಸವ ದೇವರು, ಜಯಶೀಲಪ್ಪ ಗೌಡ ಇತರರಿದ್ದರು.
ಮಕ್ಕಳಿಗೆ ಸಂಸ್ಕಾರ ನೀಡದಿದ್ದರೆ ಸಂಕಷ್ಟ

You Might Also Like
ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan
Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…
ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food
Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…
ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…