Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ: ಶಶಿ ತರೂರ್​

Thursday, 12.07.2018, 7:04 AM       No Comments

ನವದೆಹಲಿ: ಒಂದು ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಿದರೆ ಬಿಜೆಪಿ ಸಂವಿಧಾನವನ್ನು ಮಾರ್ಪಡಿಸಿ ಭಾರತವನ್ನು ಹಿಂದು ಪಾಕಿಸ್ತಾನವನ್ನಾಗಿ ಮಾಡಲಿದ್ದಾರೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಶಶಿ ತರೂರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಅಧಿಕಾರ ಪುನರಾವರ್ತನೆಯಾದರೆ ನಮ್ಮ ಸಂವಿಧಾನವು ನಾವು ಅರ್ಥಮಾಡಿಕೊಂಡಂತೆ ಉಳಿಯುವುದಿಲ್ಲ. ಏಕೆಂದರೆ ಭಾರತದ ಸಂವಿಧಾನವನ್ನು ಮಾರ್ಪಡಿಸಬೇಕಾದ ಎಲ್ಲ ಅಂಶಗಳನ್ನು ಅವರು ಹೊಂದಿರುತ್ತಾರೆ ಮತ್ತು ಹೊಸದನ್ನು ಬರೆಯಲಿದ್ದಾರೆ ಎಂದು ಹೇಳಿದರು.

ಕೇಸರಿ ಸರ್ಕಾರ ಬರೆಯಲಿರುವ ಹೊಸ ಸಂವಿಧಾನ ದೇಶವನ್ನು ಹಿಂದು ಪಾಕಿಸ್ತಾವನ್ನಾಗಿ ಬದಲಾಯಿಸಲಿದೆ ಎಂದು ಆರೋಪಿಸಿದ್ದಾರೆ.

ಹೊಸದಾದ ಸಂವಿಧಾನ ಹಿಂದು ರಾಷ್ಟ್ರದ ತತ್ವಗಳನ್ನು ಹೊಂದಲಿದ್ದು, ಸಂಪೂರ್ಣವಾಗಿ ಅಲ್ಪಸಂಖ್ಯಾತರ ಸಮಾನತೆಯನ್ನು ತೆಗೆದುಹಾಕಿ ಹಿಂದು ಪಾಕಿಸ್ತಾನ ಸೃಷ್ಟಿಯಾಗಲಿದೆ. ಆದರೆ, ಇದು ಮಹಾತ್ಮ ಗಾಂಧಿ, ನೆಹರು, ಸರ್ದಾರ್​ ವಲ್ಲಭಭಾಯ್​ ಪಟೇಲ್​, ಮೌಲಾನ ಅಜಾದ್ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್​ ವ್ಯಕ್ತಿಗಳ ಆದರ್ಶ ಇದಾಗಿರುವುದಿಲ್ಲ ಎಂದು ಹೇಳಿದ್ದಾರೆ.​

ನಾಚಿಕೆಯಿಲ್ಲದ ಕಾಂಗ್ರೆಸ್​ ಪಕ್ಷ ಭಾರತವನ್ನು ಕಾಲೆಳೆಯಲು ಹಾಗೂ ಹಿಂದು ಹೆಸರನ್ನು ಕೆಡಿಸಲು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಹಿಂದು ಭಯೋತ್ಪಾದನೆಯಿಂದ ಹಿಂದು ಪಾಕಿಸ್ತಾನವರೆಗೆ ಪಾಕ್​ ನೀತಿಯನ್ನು ತೃಪ್ತಿಪಡಿಸುವ ಕಾಂಗ್ರೆಸ್​ ನೀತಿಗಳಿಗೆ ಸರಿಸಾಟಿಯಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್​ ಪಾತ್ರ ಶಶಿ ತರೂರ್​ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top