Donald Trump : ಇರಾನ್ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದರೆ, ಅಮೆರಿಕದ ಸಶಸ್ತ್ರ ಪಡೆಗಳ ಸಂಪೂರ್ಣ ಶಕ್ತಿಯು ಹಿಂದೆಂದೂ ನೋಡಿರದ ರೀತಿಯಲ್ಲಿ ನಿಮ್ಮ ಮೇಲೆ ಮುಗಿಬೀಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾನುವಾರ (ಜೂನ್ 15) ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್, ಶನಿವಾರ ಟೆಹರಾನ್‌ನಲ್ಲಿರುವ ಇರಾನ್‌ನ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್‌ನ ಬುಶೆಹರ್ ಪ್ರಾಂತ್ಯದ ಸೌತ್ ಪಾರ್ಸ್ ಅನಿಲ ಕ್ಷೇತ್ರಕ್ಕೆ ಸಂಬಂಧಿಸಿದ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆಗಳು ವರದಿಯಾಗಿವೆ.
ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಬರೆದುಕೊಂಡಿರುವ ಟ್ರಂಪ್, ಇರಾನ್ ಮೇಲೆ ಇಸ್ರೇಲ್ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಅಮೆರಿಕದ ಪಾತ್ರವಿಲ್ಲ. ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಈ ಸಂಘರ್ಷವನ್ನು ಕೊನೆಗೊಳಿಸಬಹುದು ಎಂದಿದ್ದಾರೆ. ಆದರೆ, ಇಸ್ರೇಲ್ ದಾಳಿಯ ಹಿಂದೆ ಅಮೆರಿಕ ಬೆಂಬಲವಿದೆ ಎಂದು ಪ್ರತಿಪಾದಿಸುತ್ತಿರುವ ಇರಾನ್, ಟೆಹರಾನ್ ಮತ್ತು ವಾಷಿಂಗ್ಟನ್ ಡಿಸಿ ನಡುವಿನ ಆರನೇ ಸುತ್ತಿನ ಪರಮಾಣು ಮಾತುಕತೆಯನ್ನು ರದ್ದುಗೊಳಿಸಿದೆ.
ಇಸ್ರೇಲ್‌ನ ಕರಾವಳಿ ನಗರವಾದ ಬ್ಯಾಟ್ ಯಾಮ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನಗರದ ಮೇಯರ್ ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇರಾನಿನ ದಾಳಿಯ ಸರಣಿ ಶನಿವಾರ ಪ್ರಾರಂಭವಾಗಿ ರಾತ್ರಿಯಿಡೀ ಮತ್ತು ಮುಂಜಾನೆಯವರೆಗೂ ಮುಂದುವರೆದಿರುವುದಾಗಿ ವರದಿಯಾಗಿದೆ.
ಇಸ್ರೇಲ್‌ನ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ರಾತ್ರಿಯಿಡೀ ದೇಶಾದ್ಯಂತ ಕನಿಷ್ಠ ಏಳು ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ 10 ವರ್ಷದ ಬಾಲಕ ಮತ್ತು 20 ವರ್ಷದ ಮಹಿಳೆ ಸೇರಿದ್ದಾರೆ ಮತ್ತು ಬಹು ದಾಳಿಗಳಲ್ಲಿ 140 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ಮಾಡಿದೆ. ಟೆಹರಾನ್ನಲ್ಲಿ ಅತ್ಯಂತ ಭೀಕರ ದಾಳಿ ಸಂಭವಿಸಿದ್ದು, ಇಸ್ರೇಲಿ ಕ್ಷಿಪಣಿ ವಸತಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 29 ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವಿಗೀಡಾಗಿದ್ದಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಇಸ್ರೇಲ್‌ನ ಮನೆಯ ಬಳಿ ಇದಕ್ಕೂ ಮೊದಲು ನಡೆದ ಪ್ರತ್ಯೇಕ ದಾಳಿಯಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿ, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟೆಹರಾನ್, ಇಸ್ರೇಲ್ ಮೇಲೆ ಹೊಸ ಕ್ಷಿಪಣಿಗಳ ಸುರಿಮಳೆಗರೆದಿದೆ. ಇರಾನ್ ದಾಳಿಯಲ್ಲಿ ಇಸ್ರೇಲ್ಮ ಗಲಿಲೀ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಸರ್ಕಾರಿ ವಾಹನದ ಮೇಲೆ ಹುಟ್ಟುಹಬ್ಬ ಆಚರಣೆ: ಡಿಎಸ್ಪಿ ಪತ್ನಿಯ ಹುಚ್ಚಾಟ ಕಂಡು ನೆಟ್ಟಿಗರು ಗರಂ! DSP Wife
ಆ ಇಬ್ಬರಿಂದಲೇ ನಾವು WTC Final ಗೆದ್ದಿದ್ದು: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹೇಳಿಕೆ ವೈರಲ್! Temba Bavuma