ಆಧಾರ್ ಅಪ್ಡೇಟ್ ಆಗದಿದ್ರೆ, ಆಸ್ತಿ ನೋಂದಣಿಗೆ ತೊಂದರೆ

| ನವೀನ್ ಬಿಲ್ಗುಣಿ ಶಿವಮೊಗ್ಗ

ಆಸ್ತಿ ನೋಂದಣಿಗೆ ಪ್ಲ್ಯಾನ್​ ಮಾಡುತ್ತಿದ್ದೀರಾ? ಹಾಗಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅಪ್​ಡೇಟ್ ಆಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲವಾದರೆ ಲಕ್ಷಾಂತರ ರೂ. ಮುದ್ರಾಂಕ ಶುಲ್ಕ ಪಾವತಿಸಿದರೂ ಆಸ್ತಿ ನೋಂದಣಿ ಮಾಡಿಸುವುದು ಅಸಾಧ್ಯ. ಬಂದ ದಾರಿಗೆ ಸುಂಕವಿಲ್ಲದಂತೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ.

ಜಮೀನು ಮಾಲೀಕತ್ವದ ಸುರಕ್ಷತೆ, ವಂಚನೆ ತಡೆಯಲು ಸರ್ಕಾರ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಿದೆ. ಜಿಲ್ಲಾ ವ್ಯಾಪ್ತಿಯೊಳಗೆ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಆಧಾರ್ ಮಾಡಿಸಿ 10 ವರ್ಷ ಆಗಿರುವವರು ಅಪ್​ಡೇಟ್ ಮಾಡಿಸದಿದ್ದಲ್ಲಿ ಆನ್​ಲೈನ್ ಪೇಮೆಂಟ್ ಪಾವತಿಸಿದರೂ ಆಸ್ತಿ ನೋಂದಣಿ ಆಗಲ್ಲ, ಇದು ಜಮೀನಿನ ಮಾಲೀಕರು ಮತ್ತು ಖರೀದಿದಾರರಲ್ಲಿ ಗೊಂದಲ ಸೃಷ್ಟಿಸುತ್ತಿದೆ.

ಆಧಾರ್ ಕಾರ್ಡ್​ನಲ್ಲಿ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಪಿನ್​ಕೋಡ್ ಇತ್ಯಾದಿ ಮಾಹಿತಿ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್​ನಲ್ಲಿ ಅಪ್​ಡೇಟ್ ಮಾಡಿಸಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಗಡುವು ಮುಗಿದ ನಂತರ ಆಧಾರ್ ನವೀಕರಣವಾಗಬೇಕು. ಇದರ ಬಗ್ಗೆ ಅರಿವಿಲ್ಲದ ಜನರು ಆಸ್ತಿ ನೋಂದಣಿಗೆ ಮುಂದಾಗಿ ಕೆಲಸವಾಗದೆ ಬರಿಗೈಯಲ್ಲಿ ಮರಳುವಂತಾಗಿದೆ.

ಆಸ್ತಿ ನೋಂದಣಿಗೆ ಕುಟುಂಬಸ್ಥರ ಆಧಾರ್ ಮಾಹಿತಿ ಬೇಕು. ಆನ್​ಲೈನ್ ಮೂಲಕ ಅಪ್​ಲೋಡ್ ಮಾಡುವಾಗಲೇ ಖರೀದಿ ಮಾಡುವವರು, ಮಾರಾಟ ಮಾಡುವವರ ಆಧಾರ್ ನಂಬರ್ ಕಡ್ಡಾಯವಾಗಿ ಅಪ್​ಲೋಡ್ ಮಾಡಲಾಗುತ್ತದೆ. ಆದರೆ ಆನ್​ಲೈನ್ ಪೇಮೆಂಟ್ ಮಾಡಿ ಸ್ಲಾಟ್ ಮಾಡಲಾಗುತ್ತದೆ. ಆ ಸಮಯದಲ್ಲಿ ಒಬ್ಬರ ಆಧಾರ್ ಅಪ್​ಡೇಟ್ ಆಗದಿದ್ದರೂ ಆಸ್ತಿ ನೋಂದಣಿ ಆಗುವುದಿಲ್ಲ. ಹಾಗಾಗಿ ಆಧಾರ್ ಅಪ್​ಡೇಟ್ ಮಾಡಿಸಿ ಬಂದ ಮೇಲೆ ಮತ್ತೊಂದು ಸ್ಲಾಟ್ ತೆಗೆದುಕೊಳ್ಳಬೇಕಿರುವುದು ಸಮಸ್ಯೆಗೆ ಕಾರಣವಾಗಿದೆ.

ಹೀಗೆ ಮಾಡಿ: ಆಧಾರ್ ಕಾರ್ಡ್ ಅಪ್​ಡೇಟ್ ಆಗದೇ ಇರುವವರು ಪ್ಯಾನ್ ಕಾರ್ಡ್ ಮತ್ತು ಪಾಸ್​ಪೋರ್ಟ್ ಇದ್ದರೂ ನೋಂದಣಿ ಮಾಡಿಸಬಹುದು. ಆದರೆ, ಆನ್​ಲೈನ್​ನಲ್ಲಿ ವಿವರ ಅಪ್​ಲೋಡ್ ಮಾಡುವಾಗ ಆಧಾರ್ ಬದಲು ಪ್ಯಾನ್ ಕಾರ್ಡ್ ಮತ್ತು ಪಾಸ್​ಪೋರ್ಟ್ ಆಯ್ಕೆ ಮಾಡಿಕೊಳ್ಳಬೇಕು.

ಲಕ್ಷ ಲಕ್ಷ ಪಾವತಿಸಿದ್ರೂ ಕೈಸೇರುತ್ತಿಲ್ಲ ಆಸ್ತಿ: ರಾಜ್ಯ ಸರ್ಕಾರ ಜ.1ರಿಂದ ಆಸ್ತಿ ಮುದ್ರಾಂಕ ಶುಲ್ಕಸಹಿತ ಎಲ್ಲ ದರ ಏರಿಕೆ ಮಾಡಿದೆ. ಇದರಿಂದ ರಾಜ್ಯದ 250ಕ್ಕೂ ಅಧಿಕ ಉಪನೋಂದಣಾಧಿಕಾರಿ ಕಚೇರಿಗಳ ಮೂಲಕ ನಿತ್ಯವೂ ಕೋಟ್ಯಂತರ ರೂ. ಆದಾಯ ಸರ್ಕಾರದ ಖಜಾನೆ ಸೇರುತ್ತಿದೆ. ಆಧಾರ್ ಅಪ್​ಡೇಟ್ ಆಗದಿರುವ ಕಾರಣ ಒಂದೊಂದು ಉಪನೋಂದಣಾಧಿಕಾರಿ ಕಚೇರಿಗಳಲ್ಲೂ ದಿನಕ್ಕೆ ಹತ್ತಾರು ಮಂದಿ ಲಕ್ಷಾಂತರ ರೂ. ಮುದ್ರಾಂಕ ಶುಲ್ಕ ಪಾವತಿಸಿಯೂ ಆಸ್ತಿ ನೋಂದಣಿ ಯಾಗದೆ ವಾಪಸ್ ಹೋಗುತ್ತಿದ್ದಾರೆ. ಎನಿವೇರ್ ರಿಜಿಸ್ಟ್ರೇಷನ್ ಮಾಡಿಯೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಪತ್ರ ಬರಹಗಾರರು.

ಆಸ್ತಿ ನೋಂದಣಿಗೆ ಸಾರ್ವಜನಿಕರು ಆಧಾರ್ ಕಾರ್ಡ್ ಅಪ್​ಡೇಟ್ ಮಾಡಿಸುವುದು ಕಡ್ಡಾಯ. ಈ ಬಗ್ಗೆ ಜನರಿಗೆ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಹಾಗಾಗಿ ಲಕ್ಷಾಂತರ ರೂ. ಮುದ್ರಾಂಕ ಶುಲ್ಕ ಪಾವತಿಸಿದರೂ ಒಬ್ಬರ ಆಧಾರ್ ಅಪ್​ಡೇಟ್ ಆಗದಿದ್ದರೆ ಆನ್​ಲೈನ್​ನಲ್ಲಿ ತೆಗೆದುಕೊಳ್ಳುತ್ತಿಲ್ಲ.

| ಜಿ.ಎಂ.ಸುರೇಶ್​ಬಾಬು, ಶಿವಮೊಗ್ಗ ಅಧಿಕೃತ ಪತ್ರ ಬರಹಗಾರರ ಸಂಘದ ಜಿಲ್ಲಾಧ್ಯಕ್ಷ

ಬಿಜೆಪಿ ಶಾಸಕ ಮುನಿರತ್ನ ಬಂಧನ ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೊದಲ ಪ್ರತಿಕ್ರಿಯೆ ಹೀಗಿದೆ..!

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…