ಚಳ್ಳಕೆರೆ: ತಾಲೂಕಿನ ಚನ್ನಮ್ಮನಾಗತಿಹಳ್ಳಿ ಸಮೀಪದ ಕರಿಯಣ್ಣನ ಮರಡಿಯಲ್ಲಿರುವ ನಾಗಪ್ಪನ ದೇವಾಲಯದಲ್ಲಿ ನಿಧಿ ಆಸೆಗಾಗಿ ವಿಗ್ರಹಗಳನ್ನು ವಿರೂಪಗೊಳಿಸಿ, ಗುಡಿಯ ಮುಂಭಾಗದ ನೆಲವನ್ನು ಅಗೆದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಇದೊಂದು ಗೊಲ್ಲ ಜನಾಂಗದ ಪೂಜನೀಯ ಸ್ಥಳವಾಗಿದೆ. ಹಿರಿಯರ ಆಚರಣೆ ವಾಡಿಕೆಯಂತೆ ಹಬ್ಬ-ಹರಿದಿನಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಪೂಜೆ ನೆರವೇರಿಸುವ ಪದ್ಧತಿ ಇದೆ.
ವರ್ಷಗಳ ಹಳೆಯ ದೇವಾಲಯ ಆಗಿರುವ ಕಾರಣ, ನಿಧಿ ಇದೆ ಎನ್ನುವ ಆಸೆಗಾಗಿ ಪೂಜಿಸುವ ವಿಗ್ರಹಗಳ ಜಾಗ ಕದಲಿಸಿ, ನೆಲ ಅಗೆದು ನಿಧಿಗಾಗಿ ಶೋಧ ನಡೆಸಲಾಗಿದೆ.
ನಿಧಿಗಳ್ಳರಿಂದ ಪೂಜಾ ಸ್ಥಳಗಳು ಧ್ವಂಸವಾಗುತ್ತಿವೆ. ಇದರಿಂದ ಧಾರ್ಮಿಕ ಭಕ್ತಿ ಭಾವಕ್ಕೆ ಧಕ್ಕೆ ಆಗಲಿದ್ದು, ಇಂತಹ ಕಿಡಿಗೇಡಿಗಳಿಗೆ ಕಾನೂನು ಶಿಕ್ಷೆ ಆಗಬೇಕೆಂದು ಜನರ ಆಗ್ರಹಿಸಿದ್ದಾರೆ.