ನವದೆಹಲಿ: ಪಿಸಿಆರ್ ಆಧಾರಿತ ರೋಗ ಪತ್ತೆ ಮಾಡುವ ವಿಧಾನ ಅಭಿವೃದ್ಧಿಪಡಿಸಿ ಐಸಿಎಂಆರ್ ಅನುಮೋದನೆ ಪಡೆದ ಮೊದಲ ಶೈಕ್ಷಣಿಕ ಸಂಸ್ಥೆ ದೆಹಲಿ ಐಐಟಿ ಆಗಿದೆ.
ಕೋವಿಡ್ -19 ಪತ್ತೆ ಹಚ್ಚುವ ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಹಾಗೂ ದೇಶದ ಹೆಚ್ಚಿನ ಜನಸಂಖ್ಯೆಗೆ ಕೈಗೆಟುಕುವಂತೆ ಮಾಡುವ ವಿಧಾನ ಇದಾಗಿದ್ದು, ಇದನ್ನು ಅಭಿವೃದ್ಧಿಗೊಳಿಸಿದ ದೆಹಲಿ ಐಐಟಿಗೆ ಐಸಿಎಂಅರ್ ಅನುಮೋದನೆ ನೀಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ರೋಗ ಪತ್ತೆ ಪರೀಕ್ಷಾ ವಿಧಾನದ ಶೇ.100 ರಷ್ಟು ಖಚಿತತೆ ಹಾಗೂ ಸೂಕ್ಷ್ಮತೆಯನ್ನು ಐಸಿಎಂಆರ್ನಲ್ಲಿ ಮೌಲ್ಯೀಕರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)
ಮನೆಯೇ ದೇವಾಲಯ, ಮನಸ್ಸೇ ಪರಮಾತ್ಮ, ಮನೆಯಲ್ಲಿರುವುದೇ ಧರ್ಮ: ಇಂದಿನ ಶ್ರೀಗುರುವಾಣಿಯಲ್ಲಿದೆ ಯಾವ ರೀತಿ ಎಂಬುದರ ವಿವರಣೆ