ನೆಚ್ಚಿನ ಐಸ್​ ಕ್ರೀಮ್​ ಸಿಕ್ಕಿತೆಂದು ಏಕಾಏಕಿ ಬಾಯಿಗಿಡುವ ಮುನ್ನ ಈ ಶಾಕಿಂಗ್​ ಸ್ಟೋರಿಯನ್ನೊಮ್ಮೆ ಓದಿ

blank

ಕೊಡಗು: ಐಸ್​ ಕ್ರೀಮ್​ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಐಸ್​ ಕ್ರೀಮ್​ ಬಲು ಪ್ರಿಯ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಸಾಕು ಐಸ್​ ಕ್ರೀಮ್​ಗೆ ಇನ್ನಿಲ್ಲದ ಬೇಡಿಕೆ. ಆದರೆ, ನೆಚ್ಚಿನ ಐಸ್​ ಕ್ರೀಮ್ ಸಿಕ್ಕಿತೆಂದು ಏಕಾಏಕಿ ಬಾಯಿಗೆ ಇಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿದರೆ ಒಳಿತು.

ಮಡಿಕೇರಿಯಲ್ಲಿ ಏನಾಗಿದೆ ಅಂದರೆ ಕುಲ್ಫಿ ಐಸ್​ ಕ್ರೀಮ್​ನಲ್ಲಿ ಹರಿತವಾದ ಬ್ಲೇಡ್​ ಒಂದು ಪತ್ತೆಯಾಗಿದೆ. ಅದು ಹೇಗೆ ಕುಲ್ಫಿಯೊಳಗೆ ಬಂದಿರಬಹುದು ಎಂದು ತಿಳಯುವ ಮುನ್ನ ಪ್ರಕರಣ ಹೇಗೆ ಬೆಳಕಿಗೆ ಬಂತು ಎಂಬುದನ್ನು ಮೊದಲು ತಿಳಿಯೋಣ.

ಅಂದಹಾಗೆ ಮಡಿಕೇರಿ ತಾಲೂಕಿನ ಆವಂದರೂ ಗ್ರಾಮದಲ್ಲಿ ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮವೆಂದರೆ ನೂರಾರು ಜನ ಸೇರುವುದು ಸಾಮಾನ್ಯ.​ ಜನರಿದ್ದ ಮೇಲೆ ವ್ಯಾಪಾರಕ್ಕಾಗಿ ಐಸ್​ ಕ್ರೀಮ್​ ಮಾರುವುದು ಸಾಮಾನ್ಯವೇ. ಅದರಂತೆಯೇ ಕುಲ್ಫಿ ಐಸ್​ ಕ್ರೀಮ್​ ಮಾರಾಟ ಮಾಡುತ್ತಿದ್ದ ವಾಹನವೊಂದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮಗೂ ಸೇರಿದಂತೆ ಮಕ್ಕಳಿಗೆಂದು ಐಸ್​ ಕ್ರೀಮ್​ ಕೊಂಡುಕೊಂಡಿದ್ದಾರೆ.

ಬಳಿಕ ಮನೆಗೆ ತೆರಳಿದ ಮಹಿಳೆ, ಮಕ್ಕಳಿಗೆ ಕುಲ್ಫಿಯನ್ನು ನೀಡಿ ತಾವು ತಿನ್ನಲು ಶುರು ಮಾಡಿದ್ದಾರೆ. ಅರ್ಧ ಕುಲ್ಫಿ ತಿನ್ನುತ್ತಲೇ ಮಹಿಳೆಗೆ ಶಾಕ್​ ಎದುರಾಗಿದೆ. ಕುಲ್ಫಿಯೊಳಗಿನ ಹರಿತವಾದ ಬ್ಲೇಡ್ ಮಹಿಳೆಯ ನಾಲಿಗೆಗೆ ತಾಗಿದೆ. ತಕ್ಷಣ ಕುಲ್ಫಿಯನ್ನು ಮಹಿಳೆ ಬೀಸಾಡಿದ್ದಾರೆ.

ಖಾಸಗಿ ತಿಂಡಿ ತಯಾರಿಕ ಘಟಕದಲ್ಲಿ ತಯಾರಿದ್ದ ಕುಲ್ಫಿಯನ್ನು ಮಹಿಳೆ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಐಸ್​ ಕ್ರೀಮ್​ ತಯಾರಿಸುವವರು ಬೇಜವಾಬ್ದಾರಿಯಿಂದ ಬ್ಲೇಡ್​ ಅಲ್ಲಿಯೇ ಬಿಟ್ಟಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್​ ಸಂಭವಿಸಬಹುದಾದ ದುರಂತದಿಂದ ಮಹಿಳೆ ಪಾರಾಗಿದ್ದಾರೆ. ಅಲ್ಲದೆ, ಅದಕ್ಕೆ ಸಂಬಂಧಪಟ್ಟ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದು, ವೈರಲ್​ ಆಗಿದೆ.

Share This Article

ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಬ್ಲೂ ಝೋನ್ ಡಯಟ್​ ಅಂದ್ರೆ ಏನು? ತೂಕ ಇಳಿಕೆಗೆ ಹೇಗೆ ಸಹಕಾರಿ? Blue Zone Diet

Blue Zone Diet : ಬ್ಲೂ ಝೋನ್ ಆಹಾರ ಪದ್ಧತಿ ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದೆ.…

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…