ಐಸಿಸಿ ವಿಶ್ವಕಪ್​​: ಹಾಲಿ ಚಾಂಪಿಯನ್​​ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​​ ಆಯ್ದುಕೊಂಡ ಪಾಕಿಸ್ತಾನ

ಟೌಂಟನ್​: 2019ನೇ ಐಸಿಸಿ ವಿಶ್ವಕಪ್​ನ 17ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಎದುರು ಟಾಸ್​​​​​​ ಗೆದ್ದು ಬೌಲಿಂಗ್​​​ ಆಯ್ಕೆ ಮಾಡಿಕೊಂಡಿದೆ.

ಇಲ್ಲಿನ ಕಾಪರ್​​​ ಆಸೋಸಿಯೇಷನ್​​ ಕೌಂಟಿ ಗ್ರೌಂಡ್​​​​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಉಭಯ ತಂಡಗಳು ಉತ್ತಮ ಆಟವಾಡುವ ಮೂಲಕ ಗೆಲ್ಲುವ ತವಕದಲ್ಲಿವೆ. ಪಾಕಿಸ್ತಾನ ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದರೆ, ಕೇವಲ ಒಂದರಲ್ಲಿ ಜಯ ಸಾಧಿಸಿದ್ದರೆ, ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಮೂರು ಅಂಕಗಳೊಂದಿಗೆ ವಿಶ್ವಕಪ್​​ ಅಂಕಪಟ್ಟಿಯ ಎಂಟನೇ ಸ್ಥಾನದಲ್ಲಿದೆ.

ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಭಾರತ ಎದುರು ಸೋಲಿಗೆ ಶರಣಾಗಿದ್ದರೆ, ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ನಾಲ್ಕು ಅಂಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎರಡು ತಂಡಗಳು ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡು ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೇಲಕ್ಕೆರುವ ತವಕದಲ್ಲಿ ಮೈದಾನಕ್ಕೆ ಆಗಮಿಸಲಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *