PHOTOS | ವಿಶ್ವಕಪ್​​ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಆಂಗ್ಲ ಪಡೆಯ ಸಂಭ್ರಮಾಚರಣೆ

ಲಂಡನ್​: 2019ನೇ ಐಸಿಸಿ ವಿಶ್ವಕಪ್​​​ ಫೈನಲ್​​ನಲ್ಲಿ ಇಂಗ್ಲೆಂಡ್​​ ತಂಡ ನ್ಯೂಜಿಲೆಂಡ್​​ ಎದುರು ರೋಚಕ ಜಯ ಸಾಧಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ವೇಳೆ ತಂಡದ ಆಟಗಾರರು ಹಾಗೂ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕುಣಿದು ಕುಪ್ಪಳಿಸಿ ಕೇಕೆ ಹಾಕುವ ಮೂಲಕ ಖುಷಿ ಪಟ್ಟಿದ್ದಾರೆ. ಆ ಮಧುರ ಕ್ಷಣದ ದೃಶ್ಯಾವಳಿಇಲ್ಲಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​​ ಐಸಿಸಿ ನಿಯಮದ ಪ್ರಕಾರ ಸೂಪರ್​​ ಓವರ್​ನಲ್ಲಿ ಹೆಚ್ಚು ಬೌಂಡರಿಗಳೊಂದಿಗೆ ಜಯ ಸಾಧಿಸಿತ್ತು. ನ್ಯೂಜಿಲೆಂಡ್​​ ತಂಡವೂ ಪಂದ್ಯ ಗೆಲ್ಲಲು ಸಾಕಷ್ಟು ಪ್ರಯತ್ನಪಟ್ಟರೂ ಕೊನೆಗೆ ಸೋಲಿಗೆ ಶರಣಾಗಿ ರನ್ನರ್​​ ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. (ಏಜೆನ್ಸೀಸ್​)