ಧೋನಿ ಅಭ್ಯಾಸದ ಬ್ಯಾಟಿಂಗ್​ವಿಡಿಯೋವನ್ನು ಟ್ವೀಟ್​ ಮಾಡಿ ಬಿಸಿಸಿಐ ಹುರಿದುಂಬಿಸಿದ್ದು ಹೀಗೆ…

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಉತ್ತಮ ಹಾಗೂ ಭರವಸೆಯ ಆಟಗಾರ ಮಹೇಂದ್ರ ಸಿಂಗ್​ ಧೋನಿ, ತಂಡದ ಯಾವುದೇ ಕಷ್ಟದ ಸಮಯದಲ್ಲೂ ನೆರವಾಗಬಲ್ಲವರಾಗಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಾಜಿ ನಾಯಕ ಧೋನಿ ಅವರು ಬುಧವಾರ ನಡೆಯುವ ವಿಶ್ವಕಪ್​ 2019ರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಉತ್ತಮ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ದಾಖಲಿಸಿ ಅವರ ಬ್ಯಾಟಿಂಗ್​ ಶಕ್ತಿ ಏನೆಂದು ತೋರಿಸಿದ್ದಾರೆ. ಸೋಮವಾರ ನಡೆಯಲಿರುವ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವಿಡಿಯೋ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಭಾರತ ತಂಡ ಎದುರಾಳಿಯನ್ನು ಮಣಿಸುವುದು ಬಹಳ ಸುಲಭ ಹಾಗೂ ಸೊಗಸಾದುದ್ದು ಎಂದು ಬರೆದುಕೊಂಡಿದೆ.

ವಿಡಿಯೋದಲ್ಲಿ ಧೋನಿ ಎದುರಿಸದ 4 ಎಸೆತಗಳ ಮೊದಲ ಹಾಗೂ ನಾಲ್ಕನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದಾರೆ. ಸುಲಭವಾಗಿ, ಸುಲಲಿತವಾಗಿ ಬ್ಯಾಟ್​ ಬೀಸುತ್ತಿರುವ ಈ ವಿಡಿಯೋಗೆ ಅಧಿಕ ಮೆಚ್ಚುಗೆಗಳು ಹರಿದು ಬಂದಿವೆ. ಈ ವಿಡಿಯೋದಲ್ಲಿನ ಧೋನಿಯ ಅಭ್ಯಾಸ ಎದುರಾಳಿಗಳಿಗೆ ಒಂದು ಎಚ್ಚರಿಕೆ ಸಂದೇಶ  ನೀಡುವಂತಿದೆ.

Leave a Reply

Your email address will not be published. Required fields are marked *