ಐಸಿಸಿ ವಿಶ್ವಕಪ್​​​​: ಚಾಹಲ್​​ ಸ್ಪಿನ್​​ ಮೋಡಿಗೆ ತತ್ತರಿಸಿದ ಹರಿಣಗಳು

ಸೌಂಥಾಪ್ಟನ್​​: ಭಾರತ ತಂಡದ ಸ್ಪಿನ್​​ ಬೌಲರ್​​ ಯಜುವೇಂದ್ರ ಚಾಹಲ್​​ (4) ಅವರ ಅದ್ಭುತ ಬೌಲಿಂಗ್​​ ದಾಳಿಯಿಂದ ವಿಶ್ವಕಪ್​​ನ 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಲ್ಪಮೊತ್ತ ಗಳಿಸಿದೆ. ತಂಡ 50 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 227 ರನ್​​​ ದಾಖಲಿಸಿದೆ.

ಇಲ್ಲಿನ ದಿ ರೋಸ್​​​​ ಬೌಲ್​​ ಕ್ರೀಡಾಂಗಣದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ಭಾರತ ಬೌಲರ್​ಗಳ ದಾಳಿಗೆ ಸಿಲುಕಿತು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಹಶೀಮ್​​ ಅಮ್ಲಾ(6), ಕ್ವಿಂಟನ್​​ ಡಿಕಾಕ್​​​ (10) ಭಾರತದ ಅಗ್ರ ಬೌಲರ್​​​ ಬುಮ್ರಾ ಯಾರ್ಕರ್​​​​​​​​​​ ದಾಳಿಗೆ ಸಿಲುಕಿ ವಿಕೆಟ್​​ ಕಳೆದುಕೊಂಡರೆ, ನಾಯಕ ಫಾಫ್​​​ ಡುಪ್ಲಿಸಿಸ್​​​ (38), ರಸ್ಸೆ ವಾನ್​​​ ಡೆರ್​​​​​​​​​​​​​​​ ದುಸಾನ್​​​​​(22), ಡೇವಿಡ್​​ ಮಿಲ್ಲರ್​​​​​ (31) ಮತ್ತು ಆ್ಯಡಿಲೆ ಪೆಹ್ಲುಕ್ವಾಯೊ (34) ಅವರು ಚಾಹಲ್​​​ ಸ್ಪಿನ್​​ ಮೋಡಿಗೆ ವಿಕೆಟ್​​ ಒಪ್ಪಿಸಿ ಪೆವಿಲಿಯನ್​​​ ದಾರಿ ಹಿಡಿದರು.

ಬಳಿಕ ಕ್ರಿಸ್​​ ಮೋರಿಸ್​​​​​​​​​​(42) ಹಾಗೂ ಕಗಿಸೊ ರಬಾಡ (31) ಉತ್ತಮ ಆಟದೊಂದಿಗೆ 50 ರನ್​​ಗಳ ಜತೆಯಾಟವಾಡಿದರು. ಮೊರಿಸ್​​ ಹಾಗೂ ಇಮ್ರಾನ್​​ ತಾಹೀರ್​​ ಅವರ ವಿಕೆಟ್​​ನ್ನು ಆಲ್ ರೌಂಡರ್​​ ಭುವೇಶ್ವರ್​​​​ ಕಬಳಿಸಿ ಪಾರಮ್ಯ ಮೆರೆದರು.

ಈ ಮೂಲಕ ದಕ್ಷಿಣ ಆಫ್ರಿಕಾ, ಭಾರತ ತಂಡಕ್ಕೆ 228 ರನ್​ಗಳ ಗುರಿ ನೀಡಿತು. ಭಾರತ ಪ್ರಸಕ್ತ ಆವೃತ್ತಿಯ ವಿಶ್ವಕಪ್​​​ನಲ್ಲಿ ಇದು ಮೊದಲ ಪಂದ್ಯವಾಡುತ್ತಿದೆ ಹಾಗೂ ಉತ್ತಮ ಪ್ರದರ್ಶನದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *