ವಿಶ್ವಕಪ್ ಟಾಸ್ಕ್​ಗೆ ಕೊಹ್ಲಿ ಟೀಮ್ ಸನ್ನದ್ಧ: ಭಾರತ ತಂಡಕ್ಕೆ ಇಂದು ದಕ್ಷಿಣ ಆಫ್ರಿಕಾ ಸವಾಲು

Latest News

ಅಹ್ಮದ್​ ಪಟೇಲ್​ ಜತೆ ಸಭೆಯ ಬಳಿಕ ಸೋನಿಯಾ, ಶರದ್​ ಪವಾರ್​ ಭೇಟಿ: ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕೆ ಧಕ್ಕೆ ಆಗಲ್ಲವಂತೆ

ಮುಂಬೈ: ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್​ ಮುಖಂಡ ಅಹ್ಮದ್​ ಪಟೇಲ್​ ಜತೆ ಸಭೆ ನಡೆಸಿ, ಮಹಾರಾಷ್ಟ್ರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ...

ಮಹಾರಾಷ್ಟ್ರದಲ್ಲಿ ಕಾಡುತ್ತಿದೆ ಶಾಸಕರ ಕುದುರೆ ವ್ಯಾಪಾರದ ಭೀತಿ: ಎನ್​ಸಿಪಿ ಮಾತ್ರ ನಿರಾತಂಕ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಸರ್ಕಾರ ರಚಿಸಲು ಎನ್​ಸಿಪಿ ಮತ್ತು ಕಾಂಗ್ರೆಸ್​ ತರಾತುರಿ ತೋರುತ್ತಿವೆ. ಸರ್ಕಾರ ರಚನೆ ವಿಳಂಬವಾದಲ್ಲಿ ಬಿಜೆಪಿಯವರು ಆಪರೇಷನ್​ ಕಮಲ...

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸು: ಬಾಬಾ ರಾಮದೇವ್​

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪೇಜಾವರ ಶ್ರೀಗಳಂತಹ ಹಿರಿಯರ ಕನಸಾಗಿದೆ ಎಂದು ಯೋಗಗುರು ಬಾಬಾ ರಾಮದೇವ್​ ತಿಳಿಸಿದರು. ಐದು ದಿನಗಳ ಯೋಗ ಮತ್ತು...

ಮಹಾರಾಷ್ಟ್ರ ಸರ್ಕಾರ: ಮೂರು ಪಕ್ಷಗಳ ಚುನಾವಣಾ ಪ್ರಣಾಳಿಕೆ ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನಿರ್ಧಾರ

ಮುಂಬೈ: ಮಹಾರಾಷ್ಟ್ರದಲ್ಲಿ ಎನ್​ಸಿಪಿ ಮತ್ತು ಕಾಂಗ್ರೆಸ್​ ಬೆಂಬಲಿತ ಶಿವಸೇನೆ ಸರ್ಕಾರ ಅಸ್ತಿತ್ವಕ್ಕೆ ಬರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮೂರು ಪಕ್ಷಗಳ ಚುನಾವಣಾ...

ಮಡಿಕೇರಿ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಮಡಿಕೇರಿನಗರದ ಜನತೆಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕೆಯ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ...

ಸೌಥಾಂಪ್ಟನ್: ದಿಗ್ಗಜ ಕಪಿಲ್ ದೇವ್, ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತೀಯರು ಏಕದಿನ ವಿಶ್ವಕಪ್ ಸಾಮ್ರಾಟರೆನಿಸಿದ್ದು ಈಗ ಇತಿಹಾಸ. ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ, ಗೆಲ್ಲುವ ತನಕ ಛಲ ಬಿಡದ ‘ಕ್ರಿಕೆಟ್ ಪ್ಯಾಶನ್’ ಇರುವಂಥ ಉತ್ಸಾಹಿ ಕ್ಯಾಪ್ಟನ್ ಹಾಗೂ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಗೂ ಈಗ ಅದೇ ಹಾದಿಯಲ್ಲಿ ಮುನ್ನಡೆದು ಹೊಸ ಇತಿಹಾಸ ರಚಿಸುವ ಮಹತ್ವದ ಕಾಲ ಬಂದಿದೆ.

133 ಕೋಟಿ ಭಾರತೀಯರ ಕನಸು ಹೊತ್ತು ಸಾಗಿರುವ ಟೀಮ್ ಇಂಡಿಯಾ, 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಅಭಿಯಾನವನ್ನು ಬುಧವಾರ ರೋಸ್​ಬೌಲ್ ಕ್ರೀಡಾಂಗಣದಲ್ಲಿ ಆರಂಭಿಸಲಿದೆ. ಈಗಾಗಲೆ ಎರಡು ಪಂದ್ಯಗಳಲ್ಲಿ ಸೋಲು, ಗಾಯದ ಸಮಸ್ಯೆಗಳಿಂದ ಆರಂಭದಲ್ಲೇ ಜಂಘಾಬಲವನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ‘ಇನ್ ಮೆನ್ ಬ್ಲೂ’ ಬಳಗದ ಮೊದಲ ಸವಾಲು. ದಿಗ್ಗಜರ ಅಭಿಪ್ರಾಯದಂತೆ ಹಿಂದಿನ ವಿಶ್ವಕಪ್ ಆವೃತ್ತಿಗಳಲ್ಲಿ ಕಣಕ್ಕಿಳಿದ ತಂಡಗಳಿಗಿಂತ ಈ ಬಾರಿ ‘ಟೀಮ್ ಇಂಡಿಯಾ’ ವಿಭಿನ್ನ ಮತ್ತು ಬಲಿಷ್ಠ. ಮಾಜಿ ನಾಯಕ ಎಂಎಸ್ ಧೋನಿಯ ಅನುಭವದ ಸ್ಪೂರ್ತಿ ಮತ್ತು ಯುವ-ಅನುಭವ ಮಿಶ್ರಿತ ಆಟಗಾರರು ತಂಡದ ಶಕ್ತಿ. ಎಲ್ಲ ತಂಡಗಳಿಗಿಂತ ಅತ್ಯುತ್ತಮ ಮತ್ತು ವೈವಿಧ್ಯತೆ ವೇಗಿ, ಸ್ಪಿನ್ನರ್​ಗಳಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಿಂದ ಅಭಿಯಾನ ಆರಂಭಿಸಲಿದೆ ಎನ್ನುವುದು ಎಲ್ಲರ ನಿರೀಕ್ಷೆ. ಲೀಗ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿರುವ ಪ್ಲೆಸಿಸ್ ಪಡೆಗೆ ಇದುವರೆಗೆ ನಿರೀಕ್ಷಿಸದ ಒತ್ತಡಗಳು ಎದುರಾಗಿವೆ. ಎದುರಾಳಿ ಪಡೆಗಳಿಗೆ ಭೀತಿ ಹುಟ್ಟಿಸಲು ಸೆನ್ಶೇಶನಲ್ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್ ಈಗಿಲ್ಲ. ತಂಡದ ದೊಡ್ಡ ಶಕ್ತಿ ಎನಿಸಿಕೊಂಡಿದ್ದ ‘ಬೌಲಿಂಗ್ ವಿಭಾಗದ’ ವೇಗಿ ಡೇಲ್ ಸ್ಟೈನ್ ಟೂರ್ನಿಯಿಂದ ಹೊರಬಿದ್ದಿದ್ದರೆ, ಲುಂಜಿ ಎನ್​ಗಿಡಿ ಕೂಡ ಅಲಭ್ಯ. ಇಷ್ಟೆಲ್ಲಾ ಹಿನ್ನಡೆಗಳ ನಡುವೆ ‘ಚೊಚ್ಚಲ ವಿಶ್ವಕಪ್ ಪ್ರಶಸ್ತಿಯ’ ಕನಸಲ್ಲಿರುವ ದಕ್ಷಿಣ ಆಫ್ರಿಕಾ ಇಮ್ರಾನ್ ತಾಹಿರ್-ಕಗಿಸೊ ರಬಾಡ-ಪ್ಲೆಸಿಸ್​ರ ಶಕ್ತಿಯೊಂದಿಗೆ ಹೋರಾಡಲಿದೆ.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಧೋನಿ(ವಿ.ಕೀ.), ವಿಜಯ್ ಶಂಕರ್/ಕೇದಾರ್ ಜಾಧವ್/ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಕುಲದೀಪ್, ಶಮಿ, ಭುವನೇಶ್ವರ್, ಜಸ್​ಪ್ರೀತ್ ಬುಮ್ರಾ.

ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್, ಹಾಶಿಂ ಆಮ್ಲ, ಡು ಪ್ಲೆಸಿಸ್(ನಾಯಕ), ಮಾರ್ಕ್ರಮ್ ಡೇವಿಡ್ ಮಿಲ್ಲರ್, ಜೆಪಿ ಡುಮಿನಿ, ಪೆಹ್ಲುಕ್​ವಾಯೊ, ಕ್ರಿಸ್ ಮಾರಿಸ್, ಕಗಿಸೊ ರಬಾಡ, ಪ್ರಿಟೋರಿಯಸ್/ಬೌರನ್ ಹೆಂಡ್ರಿಕ್ಸ್, ತಾಹಿರ್.

ಮುಖಾಮುಖಿ: 83

#ಭಾರತ: 34

# ದಕ್ಷಿಣ ಆಫ್ರಿಕಾ: 46

# ರದ್ದು: 3

ಇಂಗ್ಲೆಂಡ್​ನಲ್ಲಿ: 3

# ಭಾರತ: 2

# ದಕ್ಷಿಣ ಆಫ್ರಿಕಾ: 1

ವಿಶ್ವಕಪ್​ನಲ್ಲಿ: 4

# ಭಾರತ: 1

# ದಕ್ಷಿಣ ಆಫ್ರಿಕಾ: 3

# ಆರಂಭ: ಮಧ್ಯಾಹ್ನ 3.00

# ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ

ಪಿಚ್ ರಿಪೋರ್ಟ್

ಸೌಥಾಂಪ್ಟನ್ ಪಿಚ್ ಬ್ಯಾಟಿಂಗ್​ಗೆ ಫೇವರಿಟ್. ಪಿಚ್​ನಲ್ಲಿ ಸ್ವಲ್ಪ ಮಟ್ಟಿಗೆ ಹುಲ್ಲು ಇರುವ ಕಾರಣ ಬೌಲಿಂಗ್​ಗೆ ಸವಾಲಾಗಬಹುದು. ಆದರೆ ವಾತಾವರಣ ಹೇಗಿರಲಿದೆ ಎನ್ನುವ ಮೇಲೆ ಪಿಚ್ ಬ್ಯಾಟಿಂಗ್/ಬೌಲಿಂಗ್​ಗೆ ಅನುಕೂಲವಾಗಲಿದೆಯೇ ಎನ್ನುವುದು ಅವಲಂಬಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಶೇ.50ರಷ್ಟಿದೆ. ಇಲ್ಲಿನ ಕೊನೇ 5 ದೇಶೀಯ ಏಕದಿನದಲ್ಲಿ 300ಕ್ಕೂ ಅಧಿಕ ಮೊತ್ತ ದಾಖಲಾಗಿದ್ದರೆ, ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಕ್ರಮವಾಗಿ 297 ಹಾಗೂ 239 ರನ್ ಪೇರಿಸಿತ್ತು.

ಭಾರತ

  • ಬಲ: ಧೋನಿ ಸ್ಪೂರ್ತಿ; ಅಗ್ರ ಬ್ಯಾಟ್ಸ್ ಮನ್ ವಿಭಾಗ; ವೈವಿಧ್ಯತೆಯ ಬೌಲಿಂಗ್;
  • ದೌರ್ಬಲ್ಯ: ಮೊದಲ ಪಂದ್ಯವೆಂಬ ಒತ್ತಡ; ಅಂತಿಮ ಹನ್ನೊಂದರ ಬಳಗದ ಗೊಂದಲ; ಅಭ್ಯಾಸ ಪಂದ್ಯದಲ್ಲಿ ಧವನ್-ರೋಹಿತ್ ಫೇಲ್.
  • ಟೀಮ್ ನ್ಯೂಸ್: ನ್ಯೂಜಿಲೆಂಡ್ ಮತ್ತು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಿದರೂ 15 ಆಟಗಾರರ ಪೈಕಿ ಅತ್ಯುತ್ತಮ 11ರ ಬಳಗದ ಆಯ್ಕೆ ಇನ್ನೂ ಗೊಂದಲವಿದೆ. ಪಿಚ್, ವಾತಾವರಣಕ್ಕೆ ಅನುಗುಣವಾಗಿ ತಂಡ ಕಣಕ್ಕಿಳಿಯುತ್ತದೆ ಎನ್ನುವುದು ಈ ಮುನ್ನವೇ ಕೋಚ್ ಹೇಳಿರುವ ಪ್ಲಾನ್. ಈಗ ವಿಜಯ್ ಶಂಕರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ ನಡುವೆ ಹಾಗೂ ಯಜುವೇಂದ್ರ ಚಾಹಲ್- ಭುವನೇಶ್ವರ್ ಈ ಆಟಗಾರರ ಆಯ್ಕೆಯಲ್ಲಿ ಗೊಂದಲವಿದೆ. ರಾಹುಲ್ 4ನೇ ಕ್ರಮಾಂಕಕ್ಕೆ ಬಹುತೇಕ ಫಿಕ್ಸ್.

ದ.ಆಫ್ರಿಕಾ

  • ಬಲ: ಭಾರತ ವಿರುದ್ಧ ಮಿಂಚುವ ಡಿಕಾಕ್; ತಾಹಿರ್ ಸ್ಪಿನ್; ರಬಾಡ ವೇಗ;
  • ದೌರ್ಬಲ್ಯ: ಗಾಯದ ಪೆಟ್ಟು; ದುರ್ಬಲ ಬೌಲಿಂಗ್; ಸತತ 2 ಸೋಲು.
  • ಟೀಮ್ ನ್ಯೂಸ್: ಸ್ಟೈನ್, ಎನ್​ಗಿಡಿ ಅಲಭ್ಯರಾಗಿರುವುದರಿಂದ ಒಂದೆರಡು ಬೌಲಿಂಗ್ ಬದಲಾವಣೆ ಖಚಿತ. ಎನ್​ಗಿಡಿ ಜಾಗದಲ್ಲಿ ಸ್ಟೈನ್ ಬದಲು ಸೇರ್ಪಡೆಗೊಂಡ ಬೌರನ್ ಹೆಂಡ್ರಿಕ್ಸ್ ಮತ್ತು ಡ್ವೇನ್ ಪ್ರಿಟೋರಿಯಸ್ ಆಡಬಹುದು. ಬ್ಯಾಟಿಂಗ್ ಬದಲಾವಣೆಯಿರದು. ಆಲ್ರೌಂಡರ್ ಮಾರಿಸ್​ರನ್ನು ಕೈ ಬಿಟ್ಟರೆ ವೇಗದ ಬೌಲಿಂಗ್​ನಲ್ಲಿ ರಬಾಡಗೆ ಅನುಭವಿ ವೇಗಿಯ ಬೆಂಬಲದ ಕೊರತೆ ಎದುರಾಗಬಹುದು.

ವಿಶ್ವಕಪ್​ನಿಂದ ಸ್ಟೈನ್ ಔಟ್

ದಕ್ಷಿಣ ಆಫ್ರಿಕಾ ತಂಡದ ವಿಶ್ವಕಪ್ ಅಭಿಯಾನಕ್ಕೆ ಮತ್ತೊಂದು ದೊಡ್ಡ ಏಟು ಬಿದ್ದಿದೆ. ಭಾರತ ತಂಡದ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದ ಡೇಲ್ ಸ್ಟೈನ್ ಮತ್ತೊಮ್ಮೆ ಭುಜಕ್ಕೆ ಏಟು ಮಾಡಿಕೊಂಡಿದ್ದಾರೆ. ಈಗಾಗಲೇ ಭುಜದ ಗಾಯದಿಂದಾಗಿ ಚೇತರಿಕೆ ಕಾಣುತ್ತಿದ್ದ ಸ್ಟೈನ್ ಮತ್ತೊಮ್ಮೆ ಅದೇ ಗಾಯಕ್ಕೆ ತುತ್ತಾಗಿದ್ದು, ಚೇತರಿಕೆಗೆ ಇನ್ನಷ್ಟು ಸಮಯ ಹಿಡಿಯಲಿರುವ ಕಾರಣ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ವೃತ್ತಿಜೀವನದ ಕೊನೇ ವಿಶ್ವಕಪ್ ಟೂರ್ನಿ ಆಡುವ ಸ್ಟೈನ್​ರ ಆಸೆ ಭಗ್ನಗೊಂಡಿದ್ದು, ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಪುನಃಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಸ್ಟೈನ್ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ. ಅವರ ಬದಲು 2 ಏಕದಿನ ಪಂದ್ಯಗಳನ್ನಾಡಿರುವ ಎಡಗೈ ವೇಗಿ ಬೌರನ್ ಹೆಂಡ್ರಿಕ್ಸ್ ಸೇರ್ಪಡೆಯಾಗಿದ್ದಾರೆ.

ಭಾರತದ ಸುದ್ದಿಗೋಷ್ಠಿಗೆ ಬಹಿಷ್ಕಾರ!

ವಿಶ್ವಕಪ್ ಟೂರ್ನಿಗೆ ತಂಡದಲ್ಲೆ ಇಲ್ಲದ ಆಟಗಾರರನ್ನು ಕಳುಹಿಸಿದ್ದಕ್ಕೆ ವರದಿಗಾರರು ಟೀಮ್ ಇಂಡಿಯಾದ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದ್ದಾರೆ. ಬಹಿಷ್ಕಾರ ಹಾಕಿದವರು ಭಾರತದ ಮಾಧ್ಯಮದವರು ಎಂದು ವರದಿಯಾಗಿದೆ. ಸೋಮವಾರ ನಡೆಯಬೇಕಿದ್ದ ಭಾರತ ತಂಡದ ಸುದ್ದಿಗೋಷ್ಠಿಗೆ ಕೋಚ್ ರವಿಶಾಸ್ತಿ್ರ ಅಥವಾ ನಾಯಕ ವಿರಾಟ್ ಕೊಹ್ಲಿ ಬರಬಹುದೆಂದು ವರದಿಗಾರರು ನಿರೀಕ್ಷಿಸಿದ್ದರು. ಆದರೆ ಟೀಮ್ ಇಂಡಿಯಾ ಮ್ಯಾನೇಜರ್ ಸುದ್ದಿಗೋಷ್ಠಿಗೆ ಕಳುಹಿಸಿದ್ದು ನೆಟ್ ಬೌಲರ್​ಗಳಾದ ದೀಪಕ್ ಚಹರ್, ಖಲೀಲ್ ಅಹ್ಮದ್ ಹಾಗೂ ಆವೇಶ್ ಖಾನ್​ರನ್ನು. ಭಾರತ ತಂಡದ ವಿಶ್ವಕಪ್ ವಿಚಾರಗಳನ್ನು ಹಂಚಿಕೊಳ್ಳುವ ಅಧಿಕಾರವೇ ಇಲ್ಲದ ಈ ಮೂವರು ಯುವ ಆಟಗಾರರಲ್ಲಿ ಏನು ಪ್ರಶ್ನೆ ಕೇಳಲಿ ಎಂದು ಭಾರತೀಯ ವರದಿಗಾರರು, ಮೀಡಿಯಾ ಮ್ಯಾನೇಜರ್ ಜತೆ ವಾಗ್ವಾದ ನಡೆಸಿ ಸುದ್ದಿಗೋಷ್ಠಿ ಬಹಿಷ್ಕರಿಸಿದರು. ಭಾರತದ ಪಂದ್ಯಗಳು ಇನ್ನೂ ಆರಂಭವಾಗದ ಕಾರಣ ಆಟಗಾರರಿಗೆ ಏನೂ ಮಾತನಾಡುವುದಿರಲಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ.

ಜಾಧವ್ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಜಡೇಜಾ ಕೂಡ ರೆಡಿ. ಪಿಚ್​ಗೆ ತಕ್ಕಂತೆ ತಂಡವನ್ನು ಕಣಕ್ಕಿಳಿಸುತ್ತೇವೆ. ಸೌಥಾಂಪ್ಟನ್ ಪಿಚ್ ಬ್ಯಾಟಿಂಗ್ ಫೇವರಿಟ್ ಆಗಿದ್ದರೆ ಬ್ಯಾಟಿಂಗ್ ವಿಭಾಗ ಬಲ ಮಾಡುತ್ತೇವೆ. ಬೌಲಿಂಗ್ ನೆರವು ನೀಡಿದರೆ ನಮ್ಮ ಯೋಜನೆ ಭಿನ್ನವಿರಬಹುದು.

| ವಿರಾಟ್ ಕೊಹ್ಲಿ ಭಾರತದ ನಾಯಕ

ಹರಿಣಗಳ ಪಡೆ ಗಾಯಗಳ ಹಿನ್ನಡೆಯಲ್ಲಿದ್ದರೂ ಸ್ಟಾರ್ ವೇಗಿ ಕಗಿಸೊ ರಬಾಡ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್ ಕೊಹ್ಲಿಯನ್ನು ಮಾತಿನ ಮೂಲಕ ಕೆಣಕಿರುವುದು ಕುತೂಹಲವನ್ನು ಹೆಚ್ಚಿಸಿದೆ. ಇವರಿಬ್ಬರ ನಡುವಿನ ಬ್ಯಾಟ್-ಬಾಲ್ ಸೆಣಸಾಟದಲ್ಲಿ ಯಾರು ಗೆಲ್ಲುವರೆನ್ನುವ ಕುತೂಹಲವಿದೆ. ಕೊಹ್ಲಿಯನ್ನು ರಬಾಡ ‘ಅಪ್ರಬುದ್ಧ ಆಟಗಾರ’ ಎಂದು ಕೆಣಕಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಕೊಹ್ಲಿ, ‘ನಾನು ಬೇಕಾದಷ್ಟು ಸಲ ರಬಾಡ ವಿರುದ್ಧ ಆಡಿದ್ದೇನೆ’ ಎಂದು ಹೇಳಿದ್ದಾರೆ.

ಮೆನ್ ಇನ್ ಬ್ಲೂಗೆ ಕೇಸರಿ ಟಚ್!

ನವದೆಹಲಿ: ವಿಶ್ವಕಪ್​ನಲ್ಲಿ ಎದುರಾಳಿ ನೆಲದ ಪಂದ್ಯಗಳಿಗೆ ಹೊಸ ಜೆರ್ಸಿಯನ್ನು ಧರಿಸಿ ಭಾರತ ಆಡಲಿರುವುದನ್ನು ಬಿಸಿಸಿಐ ಖಚಿತಪಡಿಸಿದೆ. ಜೂನ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಹೊಸ ಜೆರ್ಸಿಯನ್ನು ಧರಿಸಿ ಆಡಲಿದ್ದು, ಶೀಘ್ರದಲ್ಲಿಯೇ ಇದನ್ನು ಅಧಿಕೃತವಾಗಿ ಅನಾವರಣ ಮಾಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಹೊಸ ಜೆರ್ಸಿಯಲ್ಲಿ ತೋಳಿನ ಭಾಗದಲ್ಲಿ ಕೇಸರಿ ಬಣ್ಣ ಇರಲಿದ್ದು, ಮುಂಭಾಗದಲ್ಲಿ ಎಂದಿನ ನೀಲಿ ಬಣ್ಣ ಇರಲಿದ್ದು, ಟೂರ್ನಿಯ ಮಧ್ಯದಲ್ಲಿಯೇ ಅನಾವರಣ ಮಾಡಲಾಗುತ್ತದೆ ಎಂದು ತಿಳಿಸಿದೆ. ಬಿಸಿಸಿಐನ ಮಾರ್ಕೆಟಿಂಗ್ ಟೀಮ್ ಈಗಾಗಲೇ ಹೊಸ ಜೆರ್ಸಿಯ ವಿನ್ಯಾಸದ ಬಗ್ಗೆ ಗಮನ ನೀಡಿದ್ದು, ಶೀಘ್ರದಲ್ಲಿಯೇ ಇದರ ಅನಾವರಣವಾಗಲಿದೆ. ನೇರಪ್ರಸಾರ ಕಾಣುವ ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ತಂಡಗಳು ಎರಡು ಭಿನ್ನ ಜೆರ್ಸಿ ಹೊಂದಿರಬೇಕು ಎನ್ನುವುದು ಐಸಿಸಿಯ ಹೊಸ ನಿಯಮ. ಹಾಲಿ ವಿಶ್ವಕಪ್​ನಲ್ಲಿ ಆತಿಥೇಯ ಇಂಗ್ಲೆಂಡ್ ಹೊರತಾಗಿ ಎಲ್ಲ ತಂಡಗಳು ಎರಡು ಭಿನ್ನ ಜೆರ್ಸಿಗಳನ್ನು ಧರಿಸಲಿವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೀಲಿ ಸಮವಸ್ತ್ರ ಇರುವ ಶ್ರೀಲಂಕಾ (ಜುಲೈ 6) ವಿರುದ್ಧವೂ ಭಾರತ ಕೇಸರಿ ಜೆರ್ಸಿಯೊಂದಿಗೆ ಆಡುವ ಸಾಧ್ಯತೆ ಇದೆ.

- Advertisement -

Stay connected

278,480FansLike
564FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...