ಐಸಿಸಿ ವಿಶ್ವಕಪ್​ಗೆ ಇಂಗ್ಲೆಂಡ್​ಗೆ ತೆರಳುವ ತಂಡದೊಂದಿಗೆ ತೆರಳಲಿರುವ ಯುವ ಬೌಲರ್​ಗಳು

ನವದೆಹಲಿ: 2019ರ ಐಸಿಸಿ ವಿಶ್ವಕಪ್​ಗೆ ಆಯ್ಕೆಗೊಂಡಿರುವ ಭಾರತದ ತಂಡದಲ್ಲಿ ವೇಗದ ಬೌಲರ್​ಗಳಾದ ಜಸ್ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ವಿಕೆಟ್ ಪಡೆಯುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ವೇಳೆ ತಂಡದ ತರಬೇತಿ ವೇಳೆ ಬೌಲಿಂಗ್​ ಮಾಡುವ ನೆಟ್​ ಬೌಲರ್​ಗಳು ಪ್ರಮುಖ ಪಾತ್ರವಹಿಸಲಿದ್ದಾರೆ.

ಭಾರತದ ಮುಂದಿನ ವೇಗದ ಬೌಲರ್​ಗಳೆಂದು ಗುರುತಿಸಿಕೊಂಡಿರುವ ಖಲೀಲ್​ ಅಹಮದ್​, ನವದೀಪ್​ಸೈನಿ, ದೀಪಕ್ ​ಚಾಹರ್​ ಕೂಡ, ಮೇ 30ರಿಂದ ಆರಂಭವಾಗುವ ವಿಶ್ವಕಪ್​ಗೆ ಮೇ 23ರಂದು ಇಂಗ್ಲೆಂಡ್​ಗೆ ತೆರಳಲಿರುವ ಭಾರತ ತಂಡದೊಡನೆ ಪ್ರಯಾಣ ಬೆಳಸಲಿದ್ದಾರೆ.

ಪ್ರಮುಖ ಬೌಲರ್​ಗಳಿಗೆ ಯಾವುದೇ ರೀತಿಯ ಗಾಯಗಳಾಗಿ ಹೊರಗುಳಿದ ಸಂದರ್ಭದಲ್ಲಿ ಖಲೀಲ್​ ಅಹಮದ್​ ಮತ್ತು ಸೈನಿ ಅವರನ್ನು ಆಡಿಸುವ ಸಾಧ್ಯತೆ ಇದ್ದು ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಇವರು ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಮ್ಮ ಪ್ರತಿಭೆಯನ್ನು ಈಗಾಗಲೇ ತೋರಿಸಿದ್ದಾರೆ.

ಖಲೀಲ್​ ಅಹಮದ್​ ಮತ್ತು ನವದೀಪ್​ ಸೈನಿ ತಾವು ವಿಶ್ವಕಪ್​ ತಂಡದೊಂದಿಗೆ ತೆರಳುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ತರಬೇತಿ ವೇಳೆ ಬೌಲಿಂಗ್ ಮಾಡುವುದು ನಮ್ಮನ್ನು ಪರೀಕ್ಷಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಬ್ಯಾಟ್ಸ್​ಮನ್​ಗಳ ಮೇಲೆ ಹೇಗೆ ದಾಳಿ ನಡೆಸಬೇಕು ಎಂದು ತಿಳಿಯಲು ಸಹಾಯವಾಗುತ್ತದೆ ಎಂದಿದ್ದಾರೆ.

ನಾನು ವಿಶ್ವಕಪ್​ನಂತಹ ದೊಡ್ಡ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರರ ಅಭ್ಯಾಸಕ್ಕೆ ಸಹಾಯ ಮಾಡಲು ಹೋಗುತ್ತೇನೆ ಎಂಬುದೇ ಒಂದು ದೊಡ್ಡ ವಿಷಯ. ನಾನು ಭಾರತ ತಂಡಕ್ಕೆ ಭವಿಷ್ಯದಲ್ಲಿ ಆಡುವುದನ್ನು ಯೋಚಿಸುತ್ತಿಲ್ಲ. ನಾನು ಪಡೆದ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಎಂದು ಸೈನಿ ಹೇಳಿದ್ದಾರೆ.

ನಾನು ವಿಕೆಟ್ ಪಡೆಯುವ ಬೌಲರ್ ಎಂದು ಭಾವಿಸುತ್ತೇನೆ. ನನ್ನ ಯೋಜನೆ ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್​ ಧೋನಿ, ರೋಹಿತ್ ಶರ್ಮಾ ಸೇರಿ ಇತರೆ ಉತ್ತಮ ಬ್ಯಾಟ್ಸ್​ಮನ್​​ಗಳಿಗೆ ಬೌಲಿಂಗ್​ ಮಾಡುವುದು. ಉತ್ತಮ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡುವುದರಿಂದ ಕೌಶಲ ಮಟ್ಟ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಾನು ಚೆನ್ನಾಗಿ ಬೌಲಿಂಗ್ ಮಾಡಿದರೆ, ನಾನು ವಿಶ್ವಕಪ್ ಆಡಲು ಅವಕಾಶ ಪಡೆಯಬಹುದು, ಯಾರು ತಿಳಿದಿದ್ದಾರೆ? ನಾನು ಸಿದ್ಧವಾಗಿದ್ದು, ನನ್ನ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಖಲೀಲ್​ ಅಹಮದ್​ ಹೇಳಿದ್ದಾರೆ.