2ನೇ ಸ್ಥಾನದಲ್ಲೇ ಉಳಿದ ವಿರಾಟ್ ಕೊಹ್ಲಿ

ದುಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲೇ ಉಳಿದಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಆಶಸ್ ಸರಣಿಯ 4ನೇ ಟೆಸ್ಟ್ ನಲ್ಲಿ 211 ಮತ್ತು 82 ರನ್ ಬಾರಿಸಿದ ಸ್ಮಿತ್ ಅಂಕ 937ಕ್ಕೆ ಏರಿಕೆಯಾಗಿದ್ದರೆ, ಕೊಹ್ಲಿ 34 ಅಂಕಗಳ ಹಿನ್ನಡೆಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಕಮ್ಮಿನ್ಸ್ (914) ದ್ವಿತೀಯ ಸ್ಥಾನಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಗಿಂತ 63 ಅಂಕಗಳ ಮುನ್ನಡೆಯಲ್ಲಿದ್ದಾರೆ. ಭಾರತದ ವೇಗಿ ಜಸ್​ಪ್ರೀತ್ ಬುಮ್ರಾ 3ನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *