ಮುಂಬೈ: ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕೇವಲ ಎರಡು ದಿನವಷ್ಟೇ ಬಾಕಿಯಿದ್ದು, ಸಾಕಷ್ಟು ಕುತೂಹಲ ಗರಿಗೆದರಿದೆ. ಈ ಮಧ್ಯೆ ಭಾರತವನ್ನು ಅಣುಕಿಸಿ ಪಾಕ್ ಬಿಡುಗಡೆ ಮಾಡಿದ್ದ ಜಾಹೀರಾತಿಗೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ತಮ್ಮದೇ ರೀತಿಯಲ್ಲಿ ಪಾಕ್ಗೆ ಪವರ್ಫುಲ್ ಉತ್ತರ ನೀಡಿದ್ದಾರೆ.
ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿರುವಂತೆ, ಪಾಕ್ ಜಾಹೀರಾತನ್ನು ಪ್ರದರ್ಶನ ಮಾಡಿ, ಕೊನೆಯಲ್ಲಿ ಮಾತನಾಡಿರುವ ಪೂನಂ, ನಿನ್ನೆ ನನ್ನ ವಾಟ್ಸ್ಆ್ಯಪ್ನಲ್ಲಿ ಪಾಕ್ ಜಾಹೀರಾತು ನೋಡಿದೆ. ನಮ್ಮ ಧೀರ ಯೋಧನನ್ನು ಬಳಸಿಕೊಂಡು ಲೇವಡಿ ಮಾಡಿರುವ ಪಾಕ್, ಇದು ನಿನಗೆ ಒಳ್ಳೆಯದಲ್ಲ. ನಿಮ್ಮ ಜಾಹೀರಾತಿಗೆ ನನ್ನ ಉತ್ತರ ಹೀಗಿದೆ. ನೀವೇಕೆ ಇನ್ನು ಟೀ ಕಪ್ನಲ್ಲಿದ್ದೀರಾ? ನಿಮಗೆ ಬೇಕಾಗಿರೋದು ಡಿ ಕಪ್ ಎಂದು ತಮ್ಮ ಒಳ ಉಡುಪನ್ನು ತೆಗೆದು ತೋರಿಸಿ ಪಾಕ್ಗೆ ತಿರುಗೇಟು ನೀಡಿದ್ದಾರೆ.
ಪೂನಂ ಅಪ್ಲೋಡ್ ಮಾಡಿರುವ ವಿಡಿಯೋವನ್ನು ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಪೂನಂ ಉತ್ತರಕ್ಕೆ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಉತ್ತರ ನೀಡುವ ರೀತಿ ಇದಲ್ಲ ಎಂದು ವಿರೋಧಿಸಿದ್ದಾರೆ.
ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮೌಕಾ..ಮೌಕಾ ಜಾಹಿರಾತಿಗೆ ಟಕ್ಕರ್ ಕೊಡಲು ವಿಂಗ್ ಕಮಾಂಡರ್ ಅಭಿನಂದನ್ ರೀತಿಯ ತದ್ರೂಪಿಯನ್ನು ಬಳಸಿಕೊಂಡು ಭಾರತವನ್ನು ಅಣಕಿಸಿ ಪಾಕಿಸ್ತಾನ ಜಾಹೀರಾತೊಂದನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿ, ಇದೊಂದು ಕೆಳಮಟ್ಟದ ಹಾಗೂ ನಾಚಿಕೆ ತರಿಸುವಂತದ್ದು ಎಂದು ಕಿಡಿಕಾರಿದ್ದರು. ಇದಕ್ಕೆ ಸೂಕ್ತವಾದ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಜೂನ್ 16ರ ಭಾನುವಾರದಂದು ಮ್ಯಾಂಚೆಸ್ಟರ್ನ ಒಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯಲಿದೆ. (ಏಜೆನ್ಸೀಸ್)
ಸಿಟ್ಟಿಗೆ ಕಾರಣವಾಯ್ತು ಅಭಿನಂದನ್ ತದ್ರೂಪಿ ಜಾಹೀರಾತು: ಟ್ವೀಟ್ ಮೂಲಕ ಪಾಕ್ಗೆ ಭಾರತೀಯರು ತಿವಿದಿದ್ದು ಹೀಗೆ…
ಭಾರತ ಮತ್ತು ಪಾಕಿಸ್ತಾನ ಜಾಹೀರಾತಿಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬೇಸರ ವ್ಯಕ್ತಪಡಿಸಿ, ಹೇಳಿದ್ದೇನು?