VIDEO| ಭಾರತ-ಪಾಕ್​ ಪಂದ್ಯದ ಮಧ್ಯದಲ್ಲೇ ಯುವಕನಿಂದ ಯುವತಿಗೆ ಪ್ರೇಮ ನಿವೇದನೆ: ಒಪ್ಪಿಕೊಂಡು ಅಪ್ಪಿಕೊಂಡ ಯುವತಿ!

ಲಂಡನ್​: ಕಳೆದ ಭಾನುವಾರ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಪಂದ್ಯ ಕೇವಲ ಭಾರತೀಯರ ವಿಜಯೋತ್ಸವಕ್ಕೆ ಮಾತ್ರ ಕಾರಣವಾಗದೇ ಯುವಕ- ಯುವತಿಯೊಬ್ಬಳ ಪ್ರೇಮದ ಬೆಸುಗೆಗೆ ವೇದಿಕೆಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗಿದೆ.

ತನ್ನ ಸ್ನೇಹಿತೆಯೊಂದಿಗೆ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಯುವಕ ಪಂದ್ಯದ ನಡುವೆಯೇ ಯುವತಿಗೆ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಾನೆ. ಸಾವಿರಾರು ವೀಕ್ಷಕರ ನಡುವೆ ಪೇಚಿಗೆ ಸಿಲುಕುವ ಸಂದರ್ಭದಲ್ಲಿ ಅದೃಷ್ಟವಶಾತ್​ ಯುವತಿ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಆತನ ಖುಷಿಗೆ ಪಾರವೇ ಇಲ್ಲದಂತಾಗಿತ್ತು.

ವೈರಲ್​ ಆಗಿರುವ ವಿಡಿಯೋದಲ್ಲಿರುವಂತೆ ಭಾರತ ತಂಡವನ್ನು ಹುರಿದುಂಬಿಸುತ್ತಾ ತನ್ನ ಸ್ಥಾನದಲ್ಲಿ ಕುಳಿತಿದ್ದ ಯುವತಿಯ ಬಳಿ ಬಂದ ಯುವಕನೊಬ್ಬ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಒಂದು ಕ್ಷಣ ಯುವತಿ ಶಾಕ್​ಗೆ ಒಳಗಾದರೂ ಕೂಡ ಮರುಕ್ಷಣ ಎದ್ದು ನಿಂತು ಆತನ ಪ್ರೀತಿಯನ್ನು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಾಳೆ. ಬಳಿಕ ಯುವಕ ಆಕೆಯ ಕೈಗೆ ರಿಂಗ್​ ತೊಡಿಸುತ್ತಾನೆ. ಈ ವೇಳೆ ಹಿಂದೆ ನಿಂತಿದ್ದ ಸಾಕಷ್ಟು ವೀಕ್ಷಕರು ಅವರಿಬ್ಬರನ್ನು ನೋಡಿ ಕೂಗುತ್ತಾ ಹುರಿದುಂಬಿಸಲು, ಪ್ರೀತಿಯ ಅಲೆಯಲ್ಲಿದ್ದ ಇಬ್ಬರೂ ಪರಸ್ಪರ ಅಪ್ಪಿಕೊಂಡ ಚುಂಬಿಸುತ್ತಾರೆ.

ವಿಡಿಯೋವನ್ನು ಅನ್ವಿತಾ ಎಂಬ ಯುವತಿ ತನ್ನ ಟ್ವಿಟರ್​ ಖಾತೆಯಲ್ಲಿ ತಡವಾಗಿ ಅಪ್​ಲೋಡ್​ ಮಾಡಿಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಸಂದರ್ಭದಲ್ಲಿ ನಡೆದ ಘಟನೆ ಎಂದು ಬರೆದುಕೊಂಡಿದ್ದಾಳೆ. ಈಗಾಗಲೇ ವಿಡಿಯೋವನ್ನು 96 ಸಾವಿರ ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

One Reply to “VIDEO| ಭಾರತ-ಪಾಕ್​ ಪಂದ್ಯದ ಮಧ್ಯದಲ್ಲೇ ಯುವಕನಿಂದ ಯುವತಿಗೆ ಪ್ರೇಮ ನಿವೇದನೆ: ಒಪ್ಪಿಕೊಂಡು ಅಪ್ಪಿಕೊಂಡ ಯುವತಿ!”

Leave a Reply

Your email address will not be published. Required fields are marked *