ಅಗ್ರೆಸಿವ್ ಕ್ರಿಕೆಟರ್, ದಯಾಪರ ವ್ಯಕ್ತಿಯನ್ನು ಪ್ರೀತಿಸುವುದು ಸುಲಭ: ಪತಿಯನ್ನು ಕೊಂಡಾಡಿದ ಅನುಷ್ಕಾ ಶರ್ಮಾ

ನವದೆಹಲಿ: ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರು ಆಸಿಸ್​ ನಾಯಕ ಸ್ಟೀವ್​ ಸ್ಮಿತ್​ ಪರ ತೋರಿದ ವರ್ತನೆಯನ್ನು ವಿರಾಟ್​ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರು ಕೊಂಡಾಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪತಿ ವಿರಾಟ್​ ಕೊಹ್ಲಿ ಹಾಗೂ ಸ್ಟೀವ್​ ಸ್ಮಿತ್​ ಇರುವ ವಿಶ್ವಕಪ್​ ಪಂದ್ಯದ ಫೋಟೋವನ್ನು ಅಪ್​ಲೋಡ್​ ಮಾಡಿ, ಅಗ್ರೆಸಿವ್(ಆಕ್ರಮಣಕಾರಿ ಪ್ರವೃತ್ತಿ)​ ಕ್ರಿಕೆಟರ್ ಹಾಗೂ ದಯಾಪರ ವ್ಯಕ್ತಿಯನ್ನು ಸುಲಭವಾಗಿ ಪ್ರೀತಿಸಬಹುದು ಎಂದು ಕ್ಯಾಪ್ಸನ್​ ಬರೆಯುವ ಮೂಲಕ ಪತಿಯ ನಡೆಯನ್ನು ಮನಸಾರೆ ಹೊಗಳಿದ್ದಾರೆ.

ಕನ್ನಿಂಗ್ಟನ್​ನ ಓವಲ್​ ಮೈದಾನದಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ ಸ್ಟೀವ್​ ಸ್ಮಿತ್​ ಬೌಂಡರಿ ಗೆರೆಯ ಬಳಿ ಕ್ಷೇತ್ರ ರಕ್ಷಣೆ ಮಾಡುವಾಗ ಟೀಂ ಇಂಡಿಯಾದ ಅಭಿಮಾನಿಗಳು ಸ್ಮಿತ್​ ಕಡೆ ನೋಡುತ್ತಾ, ಕೂಗುತ್ತಾ ಅಪಹಾಸ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೊಹ್ಲಿ ಮುಂದೆ ಬಂದು ಅಭಿಮಾನಿಗಳನ್ನು ಸುಮ್ಮನಿರುವಂತೆ ಹೇಳಿ, ಹೀಗೆ ಮಾಡುವುದರ ಬದಲು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಎಂದು ಹೇಳುವುದರೊಂದಿಗೆ ಅಭಿಮಾನಿಗಳ ಪರವಾಗಿ ಸ್ಮಿತ್​ಗೆ ಕ್ಷಮೆ ಕೋರಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದರು.

ಬಳಿಕ ಸ್ಟೀವ್​ ಸ್ಮಿತ್​ ಅವರು ಕೊಹ್ಲಿ ಬಳಿ ಬಂದು ಬೆನ್ನುತಟ್ಟಿ ಧನ್ಯವಾದ ತಿಳಿಸಿದರು. ಆಸಿಸ್​ ಪಂದ್ಯ ಸೋತರು ಸ್ಮಿತ್​ ಕ್ರೀಡಾಭಿಮಾನಿಗಳ ಮನಗೆದ್ದಿದ್ದರು. ಕೊಹ್ಲಿ ಪಂದ್ಯವನ್ನು ಗೆಲ್ಲುವುದರೊಂದಿಗೆ ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಕೊಹ್ಲಿ ನಡೆಯನ್ನು ಮೆಚ್ಚಿ, ಹೊಗಳಿಕೆಯ ಸುರಿಮಳೆಗೈದಿದ್ದರು.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದ ವಿರಾಟ್​, ನಾನು ಸ್ಮಿತ್​ಗಾಗಿ ಭಾವುಕನಾದೆ, ಅಭಿಮಾನಿಗಳ ಪರವಾಗಿ ನಾನು ಕ್ಷಮೆ ಯಾಚಿಸಿದೆ. ಈಗಾಗಲೇ ಹಿಂದಿನ ಸಾಕಷ್ಟು ಗೇಮ್​ಗಳಲ್ಲಿ ಇದೇ ರೀತಿ ಆಗಿರುವುದನ್ನು ನಾನು ನೋಡಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.

ನನ್ನ ಅಭಿಪ್ರಾಯದ ಪ್ರಕಾರ ನಾನಿದ್ದನ್ನು ಒಪ್ಪಿಕೊಳ್ಳುವುದಿಲ್ಲ. ಟೀಂ ಇಂಡಿಯಾದ ಹಲವು ಅಭಿಮಾನಿಗಳಿ ಇಲ್ಲಿಗೆ ಬಂದಿದ್ದಾರೆ. ಅವರ್ಯಾರು ಕೆಟ್ಟ ಉದಾಹರಣೆ ಆಗಬಾರದು. ನಾವಿಲ್ಲಿಗೆ ಆಡಲು ಮಾತ್ರ ಬಂದಿದ್ದೇವೆ. ನಾವು ಯಾರನ್ನು ಅಪಹಾಸ್ಯವನ್ನು ಮಾಡಬಾರದು ಎಂದು ತಿಳಿಸಿದ್ದರು.

ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸಿಸ್​ ನಾಯಕರಾಗಿದ್ದ ಸ್ಟೀವ್​ ಸ್ಮಿತ್​ ಹಾಗೂ ಉಪನಾಯಕರಾಗಿದ್ದ ಡೇವಿಡ್​ ವಾರ್ನರ್​ ಒಂದು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಪ್ರಕರಣದಿಂದ ವಿಮುಕ್ತರಾಗಿ ಮತ್ತೆ ಕ್ರಿಕೆಟ್​ಗೆ ಮರಳಿ ಬಂದ ದಿನದಿಂದ ಕ್ರೀಡಾಂಗಣದಲ್ಲಿ ಹಾಗೂ ಕ್ರೀಡಾಂಗಣದಾಚೆಗೆ ಜನರ ಗುಂಪು ಉಭಯ ಆಟಗಾರರನ್ನು ನೋಡಿದಾಗಲೆಲ್ಲ ಅಪಹಾಸ್ಯ ಮಾಡಿ ಅವರಿಗೆ ಮುಜುಗರವನ್ನು ಉಂಟು ಮಾಡುತ್ತಿದ್ದಾರೆ. ಇದೇ ಅನುಭವ ನಿನ್ನೆಯ ಪಂದ್ಯದಲ್ಲೂ ಸ್ಮಿತ್​ಗೆ ಆಗಿದೆ. ಆದರೆ, ಇದನ್ನು ಮನಗಂಡ ಕೊಹ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದರು. (ಏಜೆನ್ಸೀಸ್​)

View this post on Instagram

Anushka's Instagram story ❣️♥️

A post shared by Anushka Sharma Fan Page 🌠 (@anushkaswonder) on

Leave a Reply

Your email address will not be published. Required fields are marked *