ಯುವ ಬ್ಯಾಟ್ಸ್​ಮನ್​​​​​ ಕೆ.ಎಲ್​​ ರಾಹುಲ್​​​​, ದ್ರಾವಿಡ್​​ರಂತೆ ಬಹುಮುಖ ಪ್ರತಿಭೆಯಾಗಬೇಕು: ಸಂಜಯ್​​ ಬಂಗಾರ

ಲಂಡನ್​​: ಭಾರತ ತಂಡದ ಯುವ ಬ್ಯಾಟ್ಸ್​​ಮನ್​​ ಹಾಗೂ ಕನ್ನಡಿಗ ಕೆ.ಎಲ್​​​​​​ ರಾಹುಲ್​​​​​​​​ ಅವರು ಮಾಜಿ ಕ್ರಿಕೆಟಿಗ ರಾಹುಲ್​​​ ದ್ರಾವಿಡ್​​ರಂತೆ ಬಹುಮುಖ ಪ್ರತಿಭೆಯಾಗಬೇಕು ಎಂದು ಟೀಂ ಇಂಡಿಯಾ ಸಹಾಯಕ ಕೋಚ್​​​ ಸಂಜಯ್​​ ಬಂಗಾರ ಹೇಳಿದ್ದಾರೆ.

ರಾಹುಲ್​​ ದ್ರಾವಿಡ್​​​​​​​​​ ಭಾರತ ತಂಡದಲ್ಲಿದ್ದಾಗ ಯಾವುದೇ ಸ್ಥಾನದಲ್ಲಾದರೂ ಬ್ಯಾಟಿಂಗ್​​ ಮಾಡುವ ಸಾಮರ್ಥ್ಯವಿತ್ತು. ಈಗ ಅವರಂತೆ ಕೆ.ಎಲ್​​ ರಾಹುಲ್​ ತಂಡದಲ್ಲಿ ಉತ್ತಮ ಬ್ಯಾಟಿಂಗ್​​​​ ಮಾಡುತ್ತಿದ್ದಾರೆ. ಅವರಲ್ಲಿದ್ದಂತಹ ಪ್ರತಿಭೆಯನ್ನು ರಾಹುಲ್​​​​​​ ಅವರಲ್ಲೂ ಕಾಣಬಹುದು ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್​​ ವಿರುದ್ಧದ ಇಂದಿನ ಪಂದ್ಯದಲ್ಲಿ ಶಿಖರ್​ ಧವನ್​ ಅವರ ಸ್ಥಾನವನ್ನು ರಾಹುಲ್​​​ ತುಂಬಲಿದ್ದಾರೆ. ಒಂದು ವೇಳೆ ಆರಂಭಿಕರಾಗಿ ಉತ್ತಮ ಬ್ಯಾಟಿಂಗ್​​ ಮಾಡಿದರೆ ತಂಡದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ. ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡುವುದಕ್ಕೂ, ಆರಂಭಿಕನಾಗಿ ಬ್ಯಾಟಿಂಗ್​​ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ದ್ರಾವಿಡ್​​ ಹಲವು ಬಾರಿ ತಂಡದಲ್ಲಿ ಆರಂಭಿಕರಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡಿದ್ದರು. ಇದೀಗ ರಾಹುಲ್​​ಗೆ ಅಂತಹ ಅವಕಾಶ ದೊರೆತಿದೆ. ಅವರ ಹಾಗೇ ಉತ್ತಮ ಆಟವಾಡಿದರೆ ತಂಡದಲ್ಲಿ ನೆಲೆ ನಿಲ್ಲುವ ಅವಕಾಶ ರಾಹುಲ್​ಗೆ ಒದಗಿ ಬರಲಿದೆ ಎಂದು ಸಂಜಯ್​​​ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *