2020ನೇ ಸಾಲಿನ ಪುರುಷ ಮತ್ತು ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ನವದೆಹಲಿ: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ 2020ನೇ ಸಾಲಿನ ಪುರುಷ ಮತ್ತು ಮಹಿಳಾ ಐಸಿಸಿ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಮಂಗಳವಾರ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ, ಒಂದೇ ದೇಶದಲ್ಲಿ ಮಹಿಳಾ ಮತ್ತು ಪುರುಷರ ಟೂರ್ನಮೆಂಟ್​ ಸ್ವತಂತ್ರವಾಗಿ ನಡೆಯಲಿದೆ.

2020ರ ಫೆ.21 ರಿಂದ ಆರಂಭವಾಗುವ ಮಹಿಳೆಯರ ಟೂರ್ನಿ ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕೊನೆಗೊಳ್ಳಲಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಪುರುಷರ ವಿಭಾಗದ ಟೂರ್ನಿ ನಡೆಯಲಿದೆ. ಎರಡು ಟೂರ್ನಿಗಳು ಆಸ್ಟ್ರೇಲಿಯಾದ್ಯಂತ ಎಂಟು ಆತಿಥೇಯ ನಗರಗಳ 13 ಸ್ಥಳಗಳಲ್ಲಿ ನಡೆಯಲಿದೆ.

ಭಾರತದ ಪುರುಷ ಟೂರ್ನಿಯ ಮೊದಲ ಪಂದ್ಯ ಅಕ್ಟೋಬರ್​ 24 ರ ಭಾನುವಾರದಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದ್ದು, ಪರ್ತ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಹಿಳಾ ವಿಭಾಗದ ಮೊದಲ ಪಂದ್ಯ ಫೆ.21 ರಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ: 

ಪುರುಷ ಮತ್ತು ಮಹಿಳಾ ಟೂರ್ನಿಯ ವೇಳಾಪಟ್ಟಿ ಕೆಳಕಂಡಂತಿದೆ.