ಮಹಿಳೆಯರಿಗೆ ಮಡಿಲಕ್ಕೆ ಸೇವೆ

ಐಮಂಗಲ: ಗ್ರಾಮದಲ್ಲಿ ಮಂಗಳವಾರ ಆರ್ಯವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಆಚರಿಸಲಾಯಿತು.

ಕಲ್ಕುಂಟೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ವಾಸವಿದೇವಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಕಳಸ ಹಿಡಿದು ಸಾಗಿದರು. ಕ್ಯಾದಿಗೆರೆ, ದಾಸಣ್ಣನ ಮಾಳಿಗೆ, ಐಮಂಗಲ, ಜೆ.ಎನ್.ಕೋಟೆ, ಮರಡಿಹಳ್ಳಿ, ವದ್ದಿಕೆರೆ, ಸಜ್ಜನಕೆರೆ, ದೊಡ್ಡಸಿದ್ದವ್ವನಹಳ್ಳಿಯವರು ಭಾಗವಹಿಸಿದ್ದರು. ಮಹಿಳೆಯರ ಮಡಿಲಿಗೆ ಅಕ್ಕಿ ಸೇವೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಎಸ್.ಗೋವಿಂದರಾಜ ಶ್ರೇಷ್ಠಿ, ಸಂಘದ ಪದಾಧಿಕಾರಿಗಳಾದ ವೈ.ರಾಜಗೋಪಾಲಗುಪ್ತ, ರಜನೀಕಾಂತ್, ಎ.ಆರ್. ನಾಗರಾಜಶೆಟ್ಟಿ, ಸತ್ಯನಾರಾಯಣಶೆಟ್ಟಿ, ಬಾಲಾಜಿ, ಸತೀಶ್ ಮತ್ತಿತರರಿದ್ದರು.