More

    ಕನ್ನಡ ಭಾಷೆ ಪರಂಪರೆ ತಿಳಿಯಿರಿ

    ಇಳಕಲ್ಲ: ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಮಾತೃಭಾಷೆ ಉಳಿಸಿ ಬೆಳೆಸಬೇಕು ಎನ್ನುವ ಸ್ಥಿತಿಗೆ ಬಂದಿದ್ದೇವೆ. ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

    ಸ್ಥಳೀಯ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸಮಾರೋಪ, ಸಾಧಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕನ್ನಡ ಭಾಷೆಯ ಭವ್ಯ ಪರಂಪರೆ, ಇತಿಹಾಸವನ್ನು ಮಕ್ಕಳು ಹಾಗೂ ಯುವ ಪೀಳಿಗೆಗೆ ಅರಿತುಕೊಳ್ಳಬೇಕು. ಈ ಹಿನ್ನೆಲೆ ಕಸಾಪ ವಿವಿಧ ಕಾರ್ಯಗಳನ್ನು ಸಂಘಟಿಸುವ ಮೂಲಕ ಅವರಲ್ಲಿ ಸಾಹಿತ್ಯದ ರುಚಿ ಬೆಳೆಸಬೇಕು. ಕನ್ನಡ ಭಾಷೆ, ನೆಲ, ಜಲ ಸಮಸ್ಯೆಗಳು ಬಂದಾಗ ಎಲ್ಲರೂ ಕೈಜೋಡಿಸಿ ಕಾರ್ಯ ಮಾಡಬೇಕು. ಕನ್ನಡ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡು 110 ಕೃತಿಗಳನ್ನು ರಚಿಸಿದ ಜಿ.ಎಚ್. ಹನ್ನೆರಡುಮಠ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕಸಾಪ ತನ್ನ ಘನತೆ ಹೆಚ್ಚಿಸಿಕೊಂಡಿದೆ ಎಂದರು.

    ಬೆಂಗಳೂರಿನ ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ ಸಮಾರೋಪ ಭಾಷಣ ಮಾಡಿದರು. ಹಿರಿಯ ಸಾಹಿತಿ ಕೃಷ್ಣಶಾಸಿ ಸಮ್ಮೇಳನಾಧ್ಯಕ್ಷ ಜಿ.ಎಚ್. ಹನ್ನೆರಡುಮಠ ಕುರಿತು ಆಶಯ ನುಡಿಗಳನ್ನಾಡಿದರು. ಹಿರಿಯ ಸಾಹಿತಿ ಉಮೇಶ ತಿಮ್ಮಾಪುರ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ವಿ.ಸಿ.ಸ್ಮಾರಕ ಶಿಕ್ಷಣ ಸಂಸ್ಥೆ ಚೇರ್ಮನ್ ಡಾ. ಕೆ.ವಿ. ಅಕ್ಕಿ, ಸಿ.ಪಿ. ಸಾಲಿಮಠ, ಸಿದ್ದಣ್ಣ ನರಗುಂದ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಮಹಾಂತಗೌಡ ಪಾಟೀಲ, ಡಾ.ಎಸ್.ಡಿ. ಹೊಸಮನಿ, ಪರಶುರಾಮ ಪಮ್ಮಾರ, ಅಬ್ದುಲರಜಾಕ ತಟಗಾರ, ಅಮರೇಶ ಕೌದಿ, ಎಸ್.ಕೆ. ಕುಲಕರ್ಣೆ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.

    ವಿವಿಧ ಕ್ಷೇತ್ರಗಳ ಸಾಧಕರು, ಕಾರ್ಯಕ್ರಮಕ್ಕೆ ನೆರವು ನೀಡಿದ ಮಹನೀಯರನ್ನು ಕಸಾಪದಿಂದ ಸನ್ಮಾನಿಸಲಾಯಿತು.

    ಕೋಟಿ ಕೋಟಿ ನಮನಗಳು
    ಸಮ್ಮೇಳನಾಧ್ಯಕ್ಷ ಜಿ.ಎಚ್. ಹನ್ನೆರಡುಮಠ ಮಾತನಾಡಿ, ನನಗೆ ನೆಲ, ನೀರು, ಅನ್ನದ ಆಶೀರ್ವಾದ ಮಾಡುವ ಜತೆಗೆ ಜಿಲ್ಲಾ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನನ್ನ ಕೋಟಿ ಕೋಟಿ ನಮನಗಳು. ಕಳೆದ ಎರಡು ದಿನಗಳಿಂದ ಅರ್ಥಪೂರ್ಣ ಮೆರವಣಿಗೆ, ವಿವಿಧ ಗೋಷ್ಠಿಗಳ ಮೂಲಕ ಈ ಅಕ್ಷರ ಜಾತ್ರೆ ತೇರನ್ನು ಎಲ್ಲರೂ ಯಶಸ್ವಿಗೊಳಿಸಿದ್ದಾರೆ. ಸಾಹಿತ್ಯ ಸಮ್ಮೇಳನದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಯುವಜನತೆ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts