ಪತ್ತನಂತಿಟ್ಟ: ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ನಲ್ಲಿ 56 ವರ್ಷಗಳ ಹಿಂದೆ ಎಎನ್-12 ವಿಮಾನ ದುರಂತದಲ್ಲಿ ಹುತಾತ್ಮರಾದ ನಾಲ್ವರು ಯೋಧರ ಮೃತದೇಹ ಪತ್ತೆಯಾಗಿರುವುದಾಗಿ ಭಾರತೀಯ ವಾಯುಪಡೆ(IAF) ತಿಳಿಸಿದೆ.ಶೋಧ ಕಾರ್ಯಾಚರಣೆಯ ಮೂಲಕ ಪತ್ತೆಯಾದ ನಾಲ್ವರಲ್ಲಿ ಕೇರಳದ ನಿವಾಸಿ ಥಾಮಸ್ ಚೆರಿಯನ್ ಅವರ ಮೃತದೇಹವು ಇದೆ ಎಂದು ಹೇಳಿದೆ.
ಇದನ್ನು ಓದಿ: 56 ವರ್ಷಗಳ ಬಳಿಕ ನಾಲ್ವರು ಯೋಧರ ಮೃತದೇಹ ಪತ್ತೆ; ಸೇನಾಧಿಕಾರಿಗಳು ನೀಡಿದ ಮಾಹಿತಿ ಹೀಗಿದೆ.. | IAF
ಥಾಮಸ್ ಚೆರಿಯನ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದ ಕುಟುಂಬಸ್ಥರು ಸಂತೋಷ ಮತ್ತು ದುಃಖ ಎರಡು ಒಂದೇ ಸಮಯದಲ್ಲಿ ಆಗುತ್ತಿದೆ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಹೇಗೆ ವಿವರಿಸಬೇಕೆಂದು ನಮಗೆ ತಿಳಿದಿಲ್ಲ. ನಮಗೆ ಸಂತೋಷ ಮತ್ತು ದುಃಖ ಎರಡೂ ಆಗುತ್ತಿದೆ. ಅವರ ಸಾವಿನ ದಶಕಗಳ ನಂತರ ತಮ್ಮ ಪ್ರೀತಿಯ ಸಹೋದರನಿಗೆ ಔಪಚಾರಿಕವಾಗಿ ವಿದಾಯ ಹೇಳುವ ಅವಕಾಶ ಸಿಗುತ್ತದೆ ಎಂದು ಅವರು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಚೆರಿಯನ್ ಅವರ ಸಹೋದರರೊಬ್ಬರು ಹೇಳಿದ್ದಾರೆ.
ವಿಮಾನ ಅಪಘಾತ ಸಂಭವಿಸಿದಾಗ ನನಗೆ ಕೇವಲ 12 ವರ್ಷ. ನನ್ನ ಸಹೋದರನ ಬಗ್ಗೆ ನನಗೆ ಇನ್ನೂ ಮರೆಯಲಾಗದ ನೆನಪುಗಳಿವೆ. ಮನೆಗೆ ಬಂದಾಗಲೆಲ್ಲಾ ನಮಗಾಗಿ ಅನೇಕ ವಸ್ತುಗಳನ್ನು ತರುತ್ತಿದ್ದ. ತರಬೇತಿ ಮುಗಿಸಿ ಪೋಸ್ಟಿಂಗ್ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸೇನೆಗೆ ಸೇರಿದ ಮೇಲೆ ಎರಡು-ಮೂರು ಬಾರಿ ಮನೆಗೆ ಬಂದಿದ್ದರು ಎಂದು ನೆನಪುಗಳನ್ನು ಹಂಚಿಕೊಂಡ ಚೆರಿಯನ್ ಸಹೋದರಿ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲು ಸಾಧ್ಯವಾಗುವುದರಿಂದ ಕುಟುಂಬವು ಈಗ ನಿರಾಳವಾಗಿದೆ ಎಂದು ಹೇಳಿದರು.
ಸಹ ಸೈನಿಕರಿಗೆ ಇಷ್ಟೊಂದು ಪರಿಗಣನೆ ಮತ್ತು ಗೌರವವನ್ನು ತೋರಿಸಿದ್ದಕ್ಕಾಗಿ ಸೇನೆ ಮತ್ತು ರಾಷ್ಟ್ರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮೃತ ಸಹೋದರನ ಯಾವುದೇ ಫೋಟೋ ಇಲ್ಲ ಎಂದು ದುಃಖ ಹಂಚಿಕೊಂಡ ಕುಟುಂಬಸ್ಥರು ತಮ್ಮ ಹಳೆಯ ದಾಖಲೆಗಳಿಂದ ಸಹೋದರನ ಫೋಟೋ ಒಂದನ್ನು ಪಡೆಯಲು ಸೇನೆಯು ಸಹಾಯ ಮಾಡಬಹುದೆಂದು ಆಶಿಸಿದ್ದಾರೆ. 1968 ಫೆಬ್ರವರಿ 7ರಂದು ಚಂಡೀಗಢದಿಂದ ಟೇಕಾಫ್ ಆಗಿದ್ದ ಸೋವಿಯತ್ ಮಿಲಿಟರಿ ಸಾರಿಗೆ ವಿಮಾನವು ಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ನಲ್ಲಿ ಅಪಘಾತಕ್ಕೀಡಾಗಿತ್ತು.(ಏಜೆನ್ಸೀಸ್)
ವಿದ್ಯಾರ್ಥಿಗೆ ಮನಸ್ಸೋ ಇಚ್ಛೆ ಥಳಿಸಿದ ಶಿಕ್ಷಕ; ಕ್ರೂರ ವರ್ತನೆ ಬಳಿಕ ಮುಂದೇನಾಯ್ತು ನೀವೇ ನೋಡಿ.. |Viral Video