ಗಡಿ ಉಲ್ಲಂಘಿಸಿದ ಪಾಕ್​​ ಸರಕು ವಿಮಾನವನ್ನು ಬಲವಂತವಾಗಿ ಇಳಿಸಿದ ಭಾರತ ವಾಯುಪಡೆ

ಜೈಪುರ: ಗಡಿ ಉಲ್ಲಂಘಿಸಿ ಪಾಕಿಸ್ತಾನ ಸರಕು ಸಾಗಣೆ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಲಾಗಿದೆ.

ಪಾಕಿಸ್ತಾನದ ಎಎನ್-12 ಬೃಹತ್ ಕಾರ್ಗೋ ವಿಮಾನ ವಾಯುಪ್ರದೇಶವನ್ನು ಉಲ್ಲಂಘಿಸಿ ಭಾರತ ಪ್ರವೇಶಿಸಿದ ತಕ್ಷಣ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಅದನ್ನು ತಡೆದು ಜೈಪುರ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿವೆ.

ಅಮೆರಿಕಾದ ಜಾರ್ಜಿಯದಿಂದ ದೆಹಲಿಗೆ ಹೊರಟಿದ್ದ ಈ ವಿಮಾನ ಕರಾಚಿ ಮಾರ್ಗ ಬದಲಿಸಿ ಗುಜರಾತ್​ನ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯು ಪ್ರದೇಶವನ್ನು ತಲುಪಿದೆ. ಸರಕು ವಿಮಾನ ಪೈಲಟ್​ಗಳ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನ ವಿಮಾನವನ್ನು ನಮ್ಮ ವಿಮಾನಗಳು ಎಚ್ಚರಿಕೆಯಿಂದ ತಡೆದು ಬಲವಂತವಾಗಿ ಇಳಿಸುವಲ್ಲಿ ಯಶಸ್ವಿಯಾಗಿವೆ ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜನ್ಸೀಸ್​)

One Reply to “ಗಡಿ ಉಲ್ಲಂಘಿಸಿದ ಪಾಕ್​​ ಸರಕು ವಿಮಾನವನ್ನು ಬಲವಂತವಾಗಿ ಇಳಿಸಿದ ಭಾರತ ವಾಯುಪಡೆ”

Leave a Reply

Your email address will not be published. Required fields are marked *