ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ

ನವದೆಹಲಿ: ದೇಶದಲ್ಲಿ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳು ಮತ್ತು ಮತಪತ್ರಗಳನ್ನು ಬಳಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಇದೆಲ್ಲವನ್ನೂ ತಳ್ಳಿಹಾಕಿರುವ ಕೇಂದ್ರ ಚುನಾವಣೆ ಆಯೋಗ, ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಚುನಾವಣೆ ಆಯುಕ್ತ ಸುನಿಲ್​ ಅರೋರಾ, “ಯಾವುದೇ ಕಾರಣಕ್ಕೂ ಮತಪತ್ರಗಳನ್ನು ಬಳಸುವುದಿಲ್ಲ. ಮರಳಿ ಮತಪತ್ರಗಳ ಯುಗಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

“ಮತಯಂತ್ರ ಬಳಕೆಗೆ ಸಂಬಂಧಿಸಿದಂತೆ ಮತದಾರರು, ಪಕ್ಷಗಳ ಯಾವುದೇ ಟೀಕೆ, ಪ್ರತಿಕ್ರಿಯೆಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಮತಪತ್ರಗಳಿಗೆ ಮರಳುವ ಯಾವುದೇ ಒತ್ತಾಯಕ್ಕೂ ನಾವು ಮಣಿಯುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ತ್ರಿವಿಕ್ರಮ ಮೆರೆಯುತ್ತಿದ್ದಂತೆ ಅದರ ಬೆನ್ನಿಗೇ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುತ್ತಿದ್ದಂತೆಯೇ ಮತಯಂತ್ರಗಳ ದುರುಪಯೋಗದ ದೂರು ಮುನ್ನೆಲೆಗೆ ಬಂದಿತು. ಹೀಗಾಗಿ ದೇಶದ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಈ ಹಿಂದಿನ ಮತಪತ್ರಗಳನ್ನು ಬಳಸುವ ಒತ್ತಾಯವನ್ನು ಮುಂದಿಡುತ್ತಲೇ ಬಂದಿವೆ.

ಆದರೆ, ಅದೆಲ್ಲವನ್ನೂ ಇಂದು ಮುಖ್ಯಚುನಾವಣಾಯುಕ್ತರು ನಿರಾಕರಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಈ ಬೆಳವಣಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ.

One Reply to “ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ”

 1. ಚುನಾವಣಾ ಆಯೋಗದ ಈ ಕ್ರಮಕ್ಕೆ ಪ್ರಜ್ಞಾವಂತ ನಾಗರಿಕನಾಗಿ ನನ್ನ ಸಂಪೂರ್ಣ ಬೆಂಬಲ, ವಿಶ್ವಾಸ ಮತ್ತು ಸಹಮತವಿದೆ.
  ರಾಜ್ಯ್ಮದಲ್ಲಿನ ವಿರೋಧಿಗಳ ಗಮನಕ್ಕೆ ನನ್ನ ಉತ್ತರ ಕೆಲವು ಅಂಶಗಳೊಂದಿಗೆ :
  ೧. ಕರ್ನಾಟಕದ ಮತದಾರ ಸಂಖ್ಯೆ ೬೦೦ ಕೋಟಿ ತಲುಪಿದ್ದು ಇದು ನಾವು ಮಾಡಿರೋ ಸಾಧನೆ. ಜನಸಂಖ್ಯೆ ಬೆಳವಣಿಗೆಯ ನಡುವೆಯೂ ಮಾನವ ಸಂಪನ್ಮೂಲ (ಇಲಾಖಾವಾರು) ಅವಶ್ಯಕತೆಗಿಂತ ಕಡಿಮೆ ಇರುವುದು. (ಚುನಾವಣೆಗೆ ಮುನ್ನ, ಚುನಾವಣೆ ಸಂದರ್ಭ ಮತ್ತು ಚುನಾವಣೆ ನಂತರ ಬೇಕಾಗುವ)
  ೨.ಮತ ಪತ್ರಗಳನ್ನು ಉಪಯೋಗಿಸುವುದರಿಂದ ಪರಿಸರದ ಮೇಲಾಗುವ ಪರಿಣಾಮ ಮತ್ತು ವಿರೋಧಿಗಳು ಸರಿಯಾದ ಕ್ರಮ, ಪದ್ಧತಿ ಸೂಚಿಸದೆ ಇರುವುದು. ಖಾಸಗಿ ಉದ್ಯೋಗಿಗಳನ್ನು ಬಳಸದೆ, ಇರುವ ಮಾನವ ಸಂಪನ್ಮೂಲದಲ್ಲೇ ಕಾರ್ಯನಿರ್ವಹಿಸಲು ಸೂಕ್ತ ಮಾನದಂಡಗಳನ್ನು ವಿರೋಧಿಗಳು ತಿಳಿಸದೇ ಪಲಾಯನವಾದ ಅನುಸರಿಸುವುದು.
  3.ಜನರನ್ನು ಈಗಲೂ ಮೂಢರನ್ನಾಗಿಸಲು – ತಂತ್ರಿಕ ಅಭಿವೃದ್ಧಿಯಲ್ಲಿ ನಂಬಿಕೆ ಇಲ್ಲದೆ, ಸಂಪನ್ಮೂಲಗಳ ಕ್ರೂಡೀಕರಣವಿಲ್ಲದೆ ಆರೋಪಗಳನ್ನು ಮಾಡಿ ಗಮನ ಬೇರೆಡೆ ಸೆಳೆಯಲು ಮಾಡುತ್ತಿರುವ ಆರೋಪ.
  ೪. ನೇಮಕಾತಿಗೆ ಆದೇಶಿಸಿ, ಅವರಿಂದಲೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವುದು – “ತೊಟ್ಟಿಲು ತೂಗುವವರೇ ಮಗುವನ್ನು ಆಲಿಸುವಂತೆ.
  ವಿರೋಧಿಗಳಿಗೆ ನನ್ನ ಸವಾಲು :
  ಚುನಾವಣಾ ಆಯೋಗ, ಹಣಕಾಸು ಸಂಸ್ಥೆಗಳಂತೆ, “ಮಾನವ ಸಂಪನ್ಮೂಲ” ಇಲಾಖೆಯನ್ನು ಸ್ವತಂತ್ರ ಸಂಸ್ಥೆಯಾಗಿ ಕಾನೂನಲ್ಲಿ ತಿದ್ದುಪಡಿ ಮಾಡುಲು ಒಪ್ಪುವರೇ?
  – ಸಾಧ್ಯವೇ ಇಲ್ಲ ಕರಣ – ಈ ಇಲಾಖೆ ಮೂಲಕವೇ ವ್ಯಕ್ತಿಗಳ, ಪಕ್ಷಗಳ ಹಣಕಾಸು ವಹಿವಾಟು ಅಥವಾ ಆದಾಯದ ಮೂಲ ಆಗಿರುವುದು

Comments are closed.