ನಾನು ಆಡಲು ಸಾಧ್ಯವಾಗುವುದಿಲ್ಲ; ಭಾರತದ ಟೆಸ್ಟ್ ನಾಯಕನಾಗದ ಬಗ್ಗೆ ಮೌನ ಮುರಿದ ಜಸ್ಪ್ರೀತ್ ಬುಮ್ರಾ| bumrah

jasprit bumrah

ನವದೆಹಲಿ: ಭಾರತದ ಟೆಸ್ಟ್ ನಾಯಕತ್ವದ ಬಗ್ಗೆ ಜಸ್ಪ್ರೀತ್ ಬುಮ್ರಾ ಕೊನೆಗೂ ಮೌನ ಮುರಿದಿದ್ದಾರೆ. ಜೂನ್ 20 ರಂದು ಪ್ರಾರಂಭವಾಗುವ ಮುಂಬರುವ ಐದು ಪಂದ್ಯಗಳ ಇಂಗ್ಲೆಂಡ್ ಸರಣಿಗೆ ಶುಭಮನ್ ಗಿಲ್ ನೇಮಕಕ್ಕೂ ಮೊದಲು ಟೆಸ್ಟ್ ನಾಯಕತ್ವದ ಪಾತ್ರವನ್ನು ನಿರಾಕರಿಸಿದ್ದಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಮಾತನಾಡಿದ್ದಾರೆ.

ಇದನ್ನೂ ಓದಿ: ಅಹಮದಾಬಾದ್‌ ವಿಮಾನ ಅಪಘಾತ; ಘಟನೆ ನಡೆದ ಸ್ಥಳದಿಂದ 70 ತೊಲ ಚಿನ್ನ, ನಗದು ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದ ವ್ಯಕ್ತಿ; Air India plane crash

ಮೇ 7, 2025 ರಂದು ಭಾರತದ ಟೆಸ್ಟ್ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು, ಇದರ ಬೆನ್ನಲ್ಲೇ ಮೇ 12 ರಂದು ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಸ್ವರೂಪದಿಂದ ನಿವೃತ್ತರಾಗಿದ್ದರು. ಈ ಇಬ್ಬರು ದಿಗ್ಗಜರ ನಿವೃತ್ತಿಯು ಭಾರತೀಯ ಟೆಸ್ಟ್ ತಂಡದಲ್ಲಿ ನಾಯಕತ್ವದ ಶೂನ್ಯತೆಯನ್ನು ಸೃಷ್ಟಿಸಿದೆ. ಈ ಶೂನ್ಯತೆಯನ್ನು ಭರ್ತಿಮಾಡಲು ಅನುಭವಿ ಜಸ್ಪ್ರೀತ್ ಬುಮ್ರಾ, ಶುಭ್ಮನ್ ಗಿಲ್, ರಿಷಭ್ ಪಂತ್, ಮತ್ತು ಕೆ.ಎಲ್. ರಾಹುಲ್‌ರಂತಹ ಆಟಗಾರರ ಹೆಸರುಗಳು ಚರ್ಚೆಯಲ್ಲಿದ್ದವು. ಆದರೆ, ಮೇ 24, 2025 ರಂದು ಬಿಸಿಸಿಐ ಶುಭ್ಮನ್ ಗಿಲ್‌ರನ್ನು ಭಾರತದ 37ನೇ ಟೆಸ್ಟ್ ನಾಯಕನಾಗಿ ಘೋಷಿಸಿತು. ರಿಷಭ್ ಪಂತ್‌ರನ್ನು ಉಪನಾಯಕನನ್ನಾಗಿ ನೇಮಿಸಿತು. ಈ ಆಯ್ಕೆಯಲ್ಲಿ ಜಸ್ಪ್ರೀತ್ ಬುಮ್ರಾ ಹೇಗೆ ಹಿಂದುಳಿದರು ಎಂಬುದು ಎಲ್ಲರಿಗೂ ಅಚ್ಚರಿ ತಂದಿತ್ತು. ಆದರೆ ಸ್ವತಃ ಬುಮ್ರಾ ಅದಕ್ಕೆ ಉತ್ತರ ನೀಡಿದ್ದಾರೆ.

ಬುಮ್ರಾ ಹೇಳಿದ್ದೇನು?

ಬುಮ್ರಾ ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿದ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ದೀರ್ಘವಾಗಿ ಯೋಚಿಸಿದ ಬಳಿಕ, ಐದು ಟೆಸ್ಟ್‌ಗಳ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲವಾದ್ದರಿಂದ ನಾಯಕತ್ವದ ಆಯ್ಕೆಗೆ ನನ್ನನ್ನು ಪರಿಗಣಿಬೇಡಿ ಎಂದು ಬಿಸಿಸಿಐಗೆ ತಿಳಿಸಿದೆ. ಒಂದು ಸರಣಿಯಲ್ಲಿ ಒಬ್ಬ ನಾಯಕನಿಂದ ಆರಂಭವಾಗಿ, ಮತ್ತೊಬ್ಬರಿಗೆ ನಾಯಕತ್ವವನ್ನು ಹಸ್ತಾಂತರಿಸುವುದು ತಂಡದ ಸ್ಥಿರತೆಗೆ ಒಳ್ಳೆಯದಲ್ಲ. ಇದು ತಂಡದ ಹಿತದೃಷ್ಟಿಯಿಂದ ಒಳ್ಳೆಯದಲ್ಲ, ಆದ್ದರಿಂದ ನಾನು ನಾಯಕತ್ವ ವಹಿಸಿಕೊಳ್ಳದಿರಲು ನಿರ್ಧರಿಸಿದೆ ಎಂದು ಬುಮ್ರಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಹಳಿ ಹಾಗೂ ಪ್ಲಾಟ್​ಫಾರ್ಮ್​ ನಡುವೆ ಬಿದ್ದ ಹುಡುಗಿ; ಪ್ರಾಣವನ್ನೂ ಲೆಕ್ಕಿಸದೆ ಮಗಳನ್ನು ಕಾಪಾಡಿದ ತಂದೆ; Viral vedeo

ಜಸ್ಪ್ರೀತ್ ಬುಮ್ರಾರ ಬೆನ್ನಿನ ಗಾಯವಾದ್ದರಿಂದ ಅವರ ವೃತ್ತಿಜೀವನದಲ್ಲಿ ಸವಾಲಾಗಿದೆ. 2023ರಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಮತ್ತು 2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್‌ನ ಎರಡನೇ ದಿನದಂದು ಬೆನ್ನಿನ ಸಮಸ್ಯೆಯಿಂದಾಗಿ ಅವರು ಪಂದ್ಯವನ್ನು ಅರ್ಧಕ್ಕೆ ಬಿಟ್ಟಿದ್ದರು. ಈ ಗಾಯದಿಂದಾಗಿ ಅವರು ಚಾಂಪಿಯನ್ಸ್ ಟ್ರೋಫಿ 2025 ರಲ್ಲಿಯೂ ಆಡಿರಲಿಲ್ಲ. ಸಂದರ್ಶನದಲ್ಲಿ ಬುಮ್ರಾ, ನನ್ನ ಬೆನ್ನಿನ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಜೂನ್ 20 ರಿಂದ ಆಗಸ್ಟ್ 4, 2025 ರವರೆಗೆ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಅವರು ಬಿಸಿಸಿಐಗೆ ತಿಳಿಸಿದ್ದಾರೆ.
(ಏಜೆನ್ಸೀಸ್)

ಸಲ್ಮಾನ್ ಖಾನ್ ‘ಸಿಕಂದರ್’ ಪೈರಸಿಯಲ್ಲಿ 91 ಕೋಟಿ ರೂ. ನಷ್ಟ; ನಿರ್ಮಾಪಕರಿಂದ ವಿಮಾ ಅರ್ಜಿ ಸಲ್ಲಿಕೆ| salman-khan

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…