ಇಡೀ ಸರ್ಕಾರ ಬಂದು ಇಲ್ಲಿ ಕೂತರೂ ಕ್ಷೇತ್ರದ ಮತದಾರರು ಸ್ವಾಭಿಮಾನ ಬಿಟ್ಟಿಲ್ಲ: ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಮತದಾನಕ್ಕೆ 48 ಗಂಟೆ ಮುನ್ನ ಹೊರಗಿನಿಂದ ಬಂದವರು ಕ್ಷೇತ್ರ ಬಿಡಬೇಕು. ಆದರೆ ಬೇರೆ ಕ್ಷೇತ್ರದವರು ಇಲ್ಲಿಯೇ ಠಿಕಾಣಿ ಹೂಡಿದ್ದರು. ಇಡೀ ಸರ್ಕಾರ ಬಂದು ಇಲ್ಲಿ ಕೂತರೂ ಕ್ಷೇತ್ರದ ಮತದಾರರು ಸ್ವಾಭಿಮಾನ ಬಿಟ್ಟಿಲ್ಲ. ಈ ಬಾರಿ ನಮ್ಮ ಕಾರ್ಯಕರ್ತರು ಸವಾಲನ್ನು ಸ್ವೀಕರಿಸಿದ್ದರು. ಯೋಜನೆ ರೂಪಿಸಿಕೊಂಡು ಚುನಾವಣಾ ಪ್ರಚಾರ ಮಾಡಿದ್ದೇವೆ. ನಮಗೆ ಶೇ. 100 ರಷ್ಟು ಗೆಲ್ಲುವ ವಿಶ್ವಾಸವಿದೆ ಎಂದು ರಾಘವೇಂದ್ರ ತಿಳಿಸಿದರು.

ವರದಿ ಪ್ರಕಾರ 8 ವಿಧಾನಸಭೆ ಕ್ಷೇತ್ರಗಳಲ್ಲಿ ನಮಗೆ ಲೀಡ್​ ಸಿಗುತ್ತದೆ. ಭದ್ರಾವತಿಯಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ. ಆದರೂ ಅಲ್ಲಿ ನಮಗೆ ಮುನ್ನಡೆ ದೊರೆಯಲಿದೆ. ಉತ್ತಮ ಅಂತರದಲ್ಲಿ ನಾನು ಗೆಲುವು ಸಾಧಿಸಲಿದ್ದೇನೆ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

One Reply to “ಇಡೀ ಸರ್ಕಾರ ಬಂದು ಇಲ್ಲಿ ಕೂತರೂ ಕ್ಷೇತ್ರದ ಮತದಾರರು ಸ್ವಾಭಿಮಾನ ಬಿಟ್ಟಿಲ್ಲ: ಬಿ.ವೈ. ರಾಘವೇಂದ್ರ”

  1. ಬ್ಲೂಜೆಪಿಯವರ ಹೊಸ ತಂತ್ರ “ಸ್ವಾಭಿಮಾನ”, ಇದನ್ನು ಹೇಳಿಬಿಟ್ಟರೆ ಜನ ಮತ ಹಾಕ್ತಾರೆ ಅಂತ ಸ್ವಾಭಿಮಾನ ಸ್ವಾಭಿಮಾನ ಅಂತ ತಲೆ ಕೆಡುಸ್ತಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿಗೂ ಕೂಡ ಇದೇ ತಂತ್ರ ಬಳಸುದ್ರು. ಜನ ದಡ್ಡರಲ್ಲ, ಇಷ್ಟು ದಿನ ಜನಗಳಿಗೆ ಮೋಸ ಮಾಡಿದ್ದು ಸಾಕು. ನಿಲ್ಲಿಸಿ ನಿಮ್ಮ ನಾಟಕಾನ.

Comments are closed.