ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ನವದೆಹಲಿ: ನನ್ನ ಒಬ್ಬ ಮಗ ದೇಶಕ್ಕಾಗಿ ಹುತಾತ್ಮನಾಗಿರಬಹುದು. ಆದರೆ, ನರಿಬುದ್ಧಿಯ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡಲು ನನ್ನ ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ…

ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ ರತನ್​ ಠಾಕೂರ್​ ತಂದೆಯವರ ದಿಟ್ಟ ತನದ ಮಾತು. ಒಂದೆಡೆ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಉಗ್ರರ ಮೇಲಿನ ಪ್ರತಿಕಾರದ ಮಾತು ರತನ್​ ಠಾಕೂರ್​ ಅವರ ತಂದೆಯ ಪದಗಳಲ್ಲಿತ್ತು.

ಬಿಹಾರದ ಭಾಗಲ್ಪುರದ ನಿವಾಸಿಯಾಗಿರುವ ರತನ್​ ಠಾಕೂರ್​ ಅವರ ತಂದೆ ಹುತಾತ್ಮನಾದ ಮಗನ ಕುರಿತು ಮಾತನಾಡಿ ತಾಯಿ ಭಾರತಕ್ಕಾಗಿ ನನ್ನ ಒಬ್ಬ ಮಗನನ್ನು ತ್ಯಾಗ ಮಾಡಿದ್ದೇನೆ. ನನ್ನ ಮತ್ತೊಬ್ಬ ಮಗನನ್ನು ತಾಯಿ ಭಾರತದ ಪರವಾಗಿ ಹೋರಾಡಲು ಕಳುಹಿಸುತ್ತೇನೆ. ನನ್ನ ಮಗ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಬೇಕು ಎಂಬ ಧೀರತನದ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್​)

One Reply to “ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು”

  1. we need like this father’s we will respect him
    better finish Pakistani terrorist’s
    complete Kashmir each and every house need to check arm’s properly

Comments are closed.