ಅಮೇಠಿಯಲ್ಲಿ ರಾಹುಲ್​ ಗಾಂಧಿ ಸೋತರೆ ರಾಜಕೀಯವನ್ನೇ ತೊರೆಯುತ್ತೇನೆ: ಸಚಿವ ನವಜೋತ್​ ಸಿಂಗ್​ ಸಿಧು

ಉತ್ತರಪ್ರದೇಶ: ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯನ್ನು ಕಲಿಯಬೇಕು ಎಂದು ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ಯಾವುದೇ ಅಭಿವೃದ್ಧಿ ನಡೆಸಿಲ್ಲ ಎಂದು ಪದೇಪದೆ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು. ಒಂದು ಚಿಕ್ಕ ಸೂಜಿಯಿಂದ, ವಿಮಾನದವರೆಗಿನಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್​ ಅವಧಿಯಲ್ಲೇ ಮಾಡಲಾಗಿದೆ ಎಂದು ಹೇಳಿದರು.

ಅಂದಿನ ಪ್ರಧಾನಿ ರಾಜೀವ್​ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್​ನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್​ ಮತ್ತೆ 10 ವರ್ಷ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

ರಫೇಲ್​ ಯುದ್ಧ ವಿಮಾನ ಒಪ್ಪಂದದ ಹಗರಣವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಹೇಳಿದ ನವಜೋತ್​ ಸಿಂಗ್​, ಅಮೇಠಿಯಲ್ಲಿ ಈ ಬಾರಿ ರಾಹುಲ್​ ಗಾಂಧಿ ಸೋತರೆ ತಾವು ರಾಜಕೀಯವನ್ನೇ ತೊರೆಯುವುದಾಗಿ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *