More

  ಮಾರ್ಚ್​ 5 ರಂದು ರೈತ ಪರ ಬಜೆಟ್​ ಮಂಡನೆ ಮಾಡುತ್ತೇನೆ: ಸಿಎಂ ಯಡಿಯೂರಪ್ಪ

  ಮೈಸೂರು: ರೈತ ಪರವಾದ ಬಜೆಟ್​ ಅನ್ನು ಮಾರ್ಚ್​ 5 ರಂದು ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದರು.

  ಕೆಆರ್​​ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಮಾತನಾಡಿದರು.

  ರೈತರ ಪರವಾದ ಹಾಗೂ ಕೈಗಾರಿಕೆ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಬಜೆಟ್​ ಮಂಡಿಸುತ್ತೇನೆ. ದಾವೋಸ್​ ಪ್ರವಾಸದಲ್ಲಿ ಪಡೆದ ಅಭಿವೃದ್ಧಿ ಚಿಂತನೆಗಳನ್ನು ಬಜೆಟ್​ನಲ್ಲಿ ಉಲ್ಲೇಖಿಸುತ್ತೇನೆ. ಬಜೆಟ್​ ಸಮಗ್ರ ಕ್ಷೇತ್ರಗಳ ಅಭಿವೃದ್ಧಿಯ ದಿಕ್ಸೂಚಿ ಆಗಿರುತ್ತದೆ ಎಂದು ಅವರು ಹೇಳಿದರು.

  ವೀರಶೈವ ಹಾಗೂ ಲಿಂಗಾಯತ ಧರ್ಮ ನಮಗಾಗಿ ಇಲ್ಲ. ಅವುಗಳು ದಲಿತರು, ಹಿಂದುಳಿದವರು ಹಾಗೂ ಶೋಷಿತರ ಉದ್ಧಾರಕ್ಕಾಗಿ ಇವೆ. ಪಂಚಪೀಠಗಳಲ್ಲಿ ರಂಭಾಪುರಿ ಮಠ ಪ್ರಾಚೀನವಾದುದು. ನಾವು ನಮಗಾಗಿ ಬದುಕಬಾರದು. ಸಮಾಜಕ್ಕಾಗಿ ಬದುಕಬೇಕು ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts